• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, September 13, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Uncategorized

ದೇಶ ಮತ್ತು ಹಿಂದುಗಳ ರಕ್ಷಣೆ ಮಾಡಲು RSSಗೆ ಗುತ್ತಿಗೆ ಕೊಟ್ಟವರಾರು? CT ರವಿಗೆ ಸಿದ್ದರಾಮಯ್ಯ ಸರಣಿ ಪ್ರಶ್ನೆ

Any Mind by Any Mind
September 28, 2021
in Uncategorized
0
ದೇಶ ಮತ್ತು ಹಿಂದುಗಳ ರಕ್ಷಣೆ ಮಾಡಲು RSSಗೆ ಗುತ್ತಿಗೆ ಕೊಟ್ಟವರಾರು? CT ರವಿಗೆ ಸಿದ್ದರಾಮಯ್ಯ ಸರಣಿ ಪ್ರಶ್ನೆ
Share on WhatsAppShare on FacebookShare on Telegram

ಆರ್‌ಎಸ್‌ಎಸ್‌ ಕುರಿತು ಈ ಹಿಂದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ನೀಡಿದ ಹೇಳಿಕೆಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಅವರು ತಿರುಗೇಟು ನೀಡಿದ್ದರು. ಇದು ಆರ್‌ಎಸ್‌ಎಸ್‌ ಬಗ್ಗೆ ಸಿದ್ದರಾಮಯ್ಯ vs ಸಿಟಿ ರವಿ ನಡುವಿನ ವಾಕ್ಸಮರಕ್ಕೆ ಕಾರಣವಾಗಿದೆ.

ADVERTISEMENT

ಈ ಕುರಿತು ಸಿಟಿ ರವಿ ಅವರಿಗೆ ಸರಣಿ ಪ್ರಶ್ನೆಗಳನ್ನು ಸಿದ್ದರಾಮಯ್ಯ ಕೇಳಿದ್ದಾರೆ.

ಸಿದ್ದರಾಮಯ್ಯ ಪ್ರಶ್ನೆಗಳು:

  1. ಆರ್ ಎಸ್ ಎಸ್ ಎಂದ ಕೂಡಲೇ ಉರಿದುಬೀಳುವ ಸಿಟಿ ರವಿ ಅವರೇ, ಆರ್ ಎಸ್ ಎಸ್ ಎಂದರೆ ಏನು?
  2. ಆರ್‌ಎಸ್‌ಎಸ್‌ ಜೊತೆ ಬಿಜೆಪಿಗೆ ಸಂಬಂಧ ಏನು?
  3. ಆರ್ ಎಸ್ ಎಸ್ ಎಂದರೆ ಏನು ಸಾಮಾಜಿಕ ಸೇವಾ ಸಂಘಟನೆಯೇ? ಸಾರ್ವಜನಿಕ ದತ್ತಿಯೇ?
  4. ಇಲ್ಲವೇ ಬಿಜೆಪಿ ಎಂಬ ರಾಜಕೀಯ ಪಕ್ಷಕ್ಕೆ ನಾಯಕರನ್ನು ಉತ್ಪಾದಿಸಿ ಕೊಡುವ ಕಾರ್ಖಾನೆಯೇ?
  5. ಆರ್ ಎಸ್ ಎಸ್ ಎನ್ನುವುದು ಹಿಂದುಗಳ ಸಂಘಟನೆ ಎಂದು ನೀವು ಹೇಳುವುದಾದಾರೆ ಬಿಜೆಪಿಯಲ್ಲಿರುವವರು ಮಾತ್ರ ಹಿಂದೂಗಳೇ?
  6. ಬೇರೆ ಪಕ್ಷದವರು ಹಿಂದೂಗಳಲ್ಲವೇ?
  7. ದೆಹಲಿಯಲ್ಲಿ 10 ತಿಂಗಳಿಂದ ಬೀದಿಯಲ್ಲಿರುವವರು ಹಿಂದುಗಳಲ್ಲವೇ?
  8. ವಾರದ ಹಿಂದೆ ಉತ್ತರಪ್ರದೇಶದಲ್ಲಿ ಅತ್ಯಾಚಾರಕ್ಕೀಡಾದ ದಲಿತ ಯುವತಿ ಹಿಂದು ಅಲ್ಲವೇ?
  9. ಆರ್ ಎಸ್ ಎಸ್ ಸಾಂಸ್ಕೃತಿಕ ಸಂಘಟನೆ ಎಂದಾದರೆ ಅದರ ಸಂಸ್ಕೃತಿಯ ವ್ಯಾಖ್ಯಾನವೇನು?

ಈ ಪ್ರಶ್ನೆಗಳ ಬಳಿಕ, “ನಾನು ಮತ್ತು ನನ್ನಂತಹ ಕೋಟ್ಯಂತರ ಜನ ನಿರ್ಭೀತಿ ಮತ್ತು ಆತ್ಮಗೌರವದಿಂದ ಬದುಕುತ್ತಿರುವುದು ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನದಿಂದ. ನಿಮ್ಮ ಪರಿವಾರದ ತಾಲಿಬಾನ್ ಗಿರಿಯನ್ನು ಅದೇ ಸಂವಿಧಾನದಿಂದ ಹಿಮ್ಮೆಟ್ಟಿಸುತ್ತೇವೆ.” ಎಂದು ಸಿದ್ದರಾಮಯ್ಯ ಅವರು ಸವಾಲು ಹಾಕಿದ್ದಾರೆ.

ಸಿಟಿ ರವಿ ಅವರೇ, ನಿಮ್ಮನ್ನು ರೈತನ ಮಗ ಎನ್ನುತ್ತೀರಿ, ನಾನು ಉಡುವ ರೈತ ಮಕ್ಕಳ ಪಂಚೆಯನ್ನು ಗೇಲಿ ಮಾಡುತ್ತೀರಿ. ನಿಮ್ಮ ತಂದೆ ಕೂಡಾ ಪಂಚೆ ಉಡುವವರು ಎಂದು ಅಂದುಕೊಳ್ತೀನಿ. ನಿಮ್ಮಂತಹ ಮಗನ ಬಗ್ಗೆ ಅವರೇನು ಅಂದುಕೊಳ್ಳಬಹುದು ಯೋಚಿಸಿದ್ದೀರಾ? ಈ ರೀತಿ ನಾಲಿಗೆ ಸಡಿಲ ಬಿಟ್ಟು ಮನೆಗೆ ಹೋಗುವಾಗ ಹುಷಾರಾಗಿರಿ ಎಂದು ಟಾಂಗ್‌ ಕೊಟ್ಟಿದ್ದಾರೆ.

ಸಿಟಿ ರವಿ ಅವರ ಕಾರು ಅಪಘಾತ ಪ್ರಕರಣವನ್ನು ಪರೋಕ್ಷವಾಗಿ ಉಲ್ಲೇಖಿಸಿರುವ ಸಿದ್ದರಾಮಯ್ಯ, ʼಕಣ್ಣಿಗೆ ಪೊರೆ ಬಂದವರು ಕತ್ತಲಲ್ಲಿ ಕಾರು ಚಲಾಯಿಸಬಾರದು, ಅಪಘಾತವಾಗಿ ಅಮಾಯಕರು ಜೀವ ಕಳೆದುಕೊಳ್ಳುತ್ತಾರೆ. ಪೊರೆ ಬಂದಿದ್ದರೆ ಕ್ಯಾಟಾರಕ್ಟ್ ಮಾಡಿಸಿಕೊಳ್ಳಿ. ಸಾರ್ವಜನಿಕರ ಜೀವ ಮುಖ್ಯʼ ಎಂದು ಕ್ಲಾಸ್‌ ತೆಗೆದಿದ್ದಾರೆ.

ನಾನು ಮತ್ತು ನನ್ನಂತಹ ಕೋಟ್ಯಂತರ ಜನ
ನಿರ್ಭೀತಿ ಮತ್ತು ಆತ್ಮಗೌರವದಿಂದ ಬದುಕುತ್ತಿರುವುದು ಅಂಬೇಡ್ಕರ್ ಅವರು
ಕೊಟ್ಟ ಸಂವಿಧಾನದಿಂದ.

ನಿಮ್ಮ ಪರಿವಾರದ ತಾಲಿಬಾನ್ ಗಿರಿಯನ್ನು ಅದೇ ಸಂವಿಧಾನದಿಂದ ಹಿಮ್ಮೆಟ್ಟಿಸುತ್ತೇವೆ.@CTRavi_BJP
5/7

— Siddaramaiah (@siddaramaiah) September 28, 2021
Tags: BJPCongress PartyRSSಅಂಬೇಡ್ಕರ್‌ಆರ್ ಎಸ್ ಎಸ್ಕರೋನಾನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಂವಿಧಾನಸಿಟಿ ರವಿಸಿದ್ದರಾಮಯ್ಯಹಿಂದುತ್ವ
Previous Post

2023 ವಿಧಾನಸಭಾ ಚುನಾವಣೆ; JDSನಿಂದ 4 ದಿನ ಕಾರ್ಯಗಾರ; ಅಭ್ಯರ್ಥಿಗಳಿಗೆ ದಳಪತಿಗಳ ಟಾಸ್ಕ್

Next Post

ಒಂದೇ ವರ್ಷದಲ್ಲಿ ಭಾರತದ 74% ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳ ಮೇಲೆ ಸೈಬರ್ ದಾಳಿ.!

Related Posts

ಮೆಟ್ರೋ ಪ್ರಯಾಣಕ್ಕೆ ಆನ್‌ಲೈನ್ ಟಿಕೆಟ್‌; ಲಗೇಜ್ ಟಿಕೆಟ್‌ಗೆ ಮಾತ್ರ ಕ್ಯೂ! ಹಬ್ಬದ ವೇಳೆ ಪ್ರಯಾಣಿಕರ ಪರದಾಟ
Uncategorized

ಮೆಟ್ರೋ ಪ್ರಯಾಣಕ್ಕೆ ಆನ್‌ಲೈನ್ ಟಿಕೆಟ್‌; ಲಗೇಜ್ ಟಿಕೆಟ್‌ಗೆ ಮಾತ್ರ ಕ್ಯೂ! ಹಬ್ಬದ ವೇಳೆ ಪ್ರಯಾಣಿಕರ ಪರದಾಟ

by ಪ್ರತಿಧ್ವನಿ
September 11, 2026
0

ಬೆಂಗಳೂರು: ಮೆಟ್ರೋದಲ್ಲಿ ಪ್ರಯಾಣದ ಟಿಕೆಟ್‌ನ್ನು ಮೊಬೈಲ್‌ನಲ್ಲೇ ಕ್ಷಣಾರ್ಧದಲ್ಲಿ ಪಡೆಯುವ ವ್ಯವಸ್ಥೆ ಇದೆ. ಆದರೆ ಹೆಚ್ಚುವರಿ ಲಗೇಜ್ ಅಥವಾ ದೊಡ್ಡ ಗಾತ್ರದ ಸೂಟ್‌ಕೇಸ್‌ ಕೊಂಡೊಯ್ಯುವ ಪ್ರಯಾಣಿಕರು ಮಾತ್ರ ಲಗೇಜ್...

Read moreDetails
ಗುಲಬರ್ಗಾ ವಿ. ವಿ 47ನೇಯ ಸಂಸ್ಥಾಪನಾ ದಿನಾಚರಣೆ

ಗುಲಬರ್ಗಾ ವಿ. ವಿ 47ನೇಯ ಸಂಸ್ಥಾಪನಾ ದಿನಾಚರಣೆ

September 10, 2026
‘ನಾನು ಭಾರತದಿಂದ ಪರಾರಿಯಾಗಿಲ್ಲ; ಕೇಂದ್ರದ ವಿರುದ್ಧ ವಿಜಯ್ ಮಲ್ಯ ಕಿಡಿ

‘ನಾನು ಭಾರತದಿಂದ ಪರಾರಿಯಾಗಿಲ್ಲ; ಕೇಂದ್ರದ ವಿರುದ್ಧ ವಿಜಯ್ ಮಲ್ಯ ಕಿಡಿ

September 9, 2026
‘ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ವೋಟ್ ಹಾಕಲ್ಲ’ ಕಾಂಗ್ರೆಸ್ ವಿರುದ್ಧ ಮಹಿಳೆ ಅಸಮಾಧಾನ

ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭ*

September 5, 2026
‘ಇಂದಿರಾಗಾಂಧಿ ಹೆಸರಿನ ಶಾಲೆ ಮುಚ್ಚಲು ಬಿಡಲ್ಲ’; ಶಿಕ್ಷಕಿಯರಿಗೆ ಸಿಎಂ ಡಿಕೆ ಶಿವಕುಮಾರ್ ಅಭಯ

‘ಇಂದಿರಾಗಾಂಧಿ ಹೆಸರಿನ ಶಾಲೆ ಮುಚ್ಚಲು ಬಿಡಲ್ಲ’; ಶಿಕ್ಷಕಿಯರಿಗೆ ಸಿಎಂ ಡಿಕೆ ಶಿವಕುಮಾರ್ ಅಭಯ

September 5, 2026
Next Post
ಒಂದೇ ವರ್ಷದಲ್ಲಿ ಭಾರತದ 74% ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳ ಮೇಲೆ ಸೈಬರ್ ದಾಳಿ.!

ಒಂದೇ ವರ್ಷದಲ್ಲಿ ಭಾರತದ 74% ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳ ಮೇಲೆ ಸೈಬರ್ ದಾಳಿ.!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada