• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, May 18, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಮುಸ್ಲಿಮರಿಗೆ ಬಜೆಟ್​ನಲ್ಲಿ ಕೊಟ್ಟಿದ್ದು ಹೆಚ್ಚೇನು ಅಲ್ಲ.. ಅದು ನಿಮ್ಮ ಪಾಲು..

ಪ್ರತಿಧ್ವನಿ by ಪ್ರತಿಧ್ವನಿ
April 29, 2025
in Top Story, ಕರ್ನಾಟಕ, ರಾಜಕೀಯ
0
ಮುಸ್ಲಿಮರಿಗೆ ಬಜೆಟ್​ನಲ್ಲಿ ಕೊಟ್ಟಿದ್ದು ಹೆಚ್ಚೇನು ಅಲ್ಲ.. ಅದು ನಿಮ್ಮ ಪಾಲು..
Share on WhatsAppShare on FacebookShare on Telegram

ಹಜ್ ಯಾತ್ರಿಗಳ ವಿಮಾನ ಯಾನಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ್ದಾರೆ. ಬೆಂಗಳೂರಿನ ಹೆಗಡೆ ನಗರದಲ್ಲಿರುವ ಹಜ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ ಭಾಗಿಯಾಗಿದ್ದರು. ಹಜ್ ಖಾತೆ ಸಚಿವ ರಹೀಂ ಖಾನ್, ಕಂದಾಯ ಸಚಿವ ಕೃಷ್ಣ ಬೈರೇಗೌಡ, ವಸತಿ ಸಚಿವ ಜಮೀರ್ ಖಾನ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಪಹಲ್ಗಾಮ್​ನಲ್ಲಿ ಭಯೋತ್ಪಾದನಾ ದಾಳಿಯಲ್ಲಿ ಮೃತರಾದವರಿಗೆ ಒಂದು ನಿಮಿಷ ಮೌನ ಆಚರಣೆ ಮಾಡಲಾಯ್ತು.

ADVERTISEMENT

ನಾನು ಈ ಹಜ್ ಯಾತ್ರೆಗೆ ಬೀಳ್ಕೊಡುವ ಕಾರ್ಯಕ್ರಮದಲ್ಲಿ ಬಹಳ ಸಲ ಭಾಗವಹಿಸಿದ್ದೇನೆ. ಎಲ್ಲಾ ಯಾತ್ರಿಗಳಿಗೆ ಶುಭ ಕೋರಲು ರಾಜ್ಯದ ಏಳು‌ಕೋಟಿ ಜನರ ಪರವಾಗಿ ಬಂದಿದ್ದೇನೆ. ಪ್ರತಿ ಮುಸಲ್ಮಾನ ಹಜ್ ಯಾತ್ರೆಗೆ ಹೋಗುವ ಆಸೆ ಇಟ್ಟುಕೊಂಡಿರುತ್ತಾರೆ. ಕನ್ನಡ ಅರ್ಥ ಆಗುತ್ತಾ ಎಂದು ವೇದಿಕೆ ಮೇಲಿದ್ದ ಮುಸಲ್ಮಾನ ಮುಖಂಡರನ್ನು ಕೇಳಿದ ಸಿದ್ದರಾಮಯ್ಯ, ಇತ್ತೀಚೆಗೆ ಪ್ರತಿಯೊಬ್ಬ ಮುಸಲ್ಮಾನ ಕೂಡಾ ಕನ್ನಡ ಮಾದ್ಯಮದಲ್ಲಿ ಓದುತ್ತಿರುತ್ತಾರೆ. ಅವರೆಲ್ಲರಿಗೆ ಕನ್ನಡ ಅರ್ಥ ಆಗುತ್ತೆ ಎಂದಿದ್ದಾರೆ ಸಿಎಂ. ಜೊತೆಗೆ ಮೆಕ್ಕಾದಲ್ಲಿ ಭಾರತೀಯರ ಪರವಾಗಿ ಪ್ರಾರ್ಥನೆ ಮಾಡಲಿ, ಏಳು ಕೋಟಿ ಕನ್ನಡಿಗರ ಪರವಾಗಿ ಹಜ್ ಯಾತ್ರೆಗೆ ಹೋದವರು ಪ್ರಾರ್ಥನೆ ಮಾಡಲಿ ಎಂದಿದ್ದಾರೆ.

#watch ಲಕ್ಷ್ಮಿ ಹೆಬ್ಬಾಳ್ಕರ್ ನ ಸ್ಟೇಜ್ ಮೇಲೆ ಕರೆದು ಬೈದ CM ಸಿದ್ದರಾಮಯ್ಯ#pratidhvani #siddaramaiah #protest

ನಮ್ಮ ಸರ್ಕಾರ ಯಾರನ್ನೋ ಓಲೈಕೆ ಮಾಡಲು ಯಾವ ಕಾರ್ಯಕ್ರಮವನ್ನೂ ಮಾಡಲ್ಲ. ನಾವು ಕರ್ನಾಟಕದ ಸರ್ವ ಜನಾಂಗದ ಶಾಂತಿಯ ತೋಟ ಆಗಬೇಕು ಎಂದು ಆಸೆ ಇಟ್ಟುಕೊಂಡಿರುವ ಜನ. ನಾವು ಯಾವುದೇ ಜನಾಂಗಕ್ಕೆ ಸೇರಿದವರು ಆಗಿರಬಹುದು. ಆದ್ರೆ ನಾವು ಮಾನವರು. ಯಾವುದೇ ಧರ್ಮ ಕೂಡಾ ಮಾನವರಾಗುವಂತೆ ಹೇಳುತ್ತವೆಯೇ ವಿನಹಃ ಮೃಗಗಳಾಗಿ ಎಂದು ಹೇಳಲ್ಲ. ನೀವು ನಾವೆಲ್ಲ ಮನುಷ್ಯರಾಗಿ ಇರೋಣ, ದ್ವೇಷ ಅಸೂಯೆ ಯಿಂದ ಏನೂ ಸಾಧನೆ ಮಾಡಲು ಆಗಲ್ಲ ಎಂದಿದ್ದಾರೆ ಸಿದ್ದರಾಮಯ್ಯ.

ಸಮಸಮಾಜ ನಿರ್ಮಾಣ ಮಾಡಲು ಪರಸ್ಪರ ಪ್ರೀತಿ ಗೌರವ ಅವಶ್ಯಕತೆ ಇದೆ. ಸಂವಿಧಾನದಲ್ಲಿ ಸಹಿಷ್ಣುತೆ, ಸಹಬಾಳ್ವೆ ಭೋದಿಸಲಾಗಿದೆ. ಹಿಂದೂ, ಮುಸ್ಲಿಂ, ಬೌದ್ಧ, ಸಿಖ್ ಯಾರೇ ಇದ್ರೂ ಒಂದೇ ತಾಯಿ ಮಕ್ಕಳಂತೆ ಬದುಕುವವರಾಗಬೇಕು. ಹಜ್ ಯಾತ್ರೆಗೆ ಹೋಗುವವರೆಲ್ಲಾ ಸಮಾಜದಲ್ಲಿ ಸೌಹಾರ್ದ ಬೆಳೆಯುವಂತೆ ಪ್ರಾರ್ಥನೆ ಮಾಡಬೇಕು. ದ್ವೇಷದಿಂದ ಯಾರನ್ನೂ ಗೆಲ್ಲಲು ಆಗಲ್ಲ, ಸ್ನೇಹ ಪ್ರೀತಿಯಿಂದ ಗೆಲ್ಲುವುದಕ್ಕೆ ಸಾಧ್ಯ ಅಗುತ್ತದೆ. ಸರ್ಕಾರದ ಮುಖ್ಯಸ್ಥನಾಗಿ ಯಾವುದೋ ಒಂದು ಧರ್ಮದವರಿಗಾಗಿ ನಾನು ಕೆಲಸ ಮಾಡುವುದಲ್ಲ. ಎಲ್ಲರೂ ಸಮಾನವಾಗಿ ಬದುಕಬೇಕು ಎಂದು ಆಶಯ ಇಟ್ಟುಕೊಂಡವನು ನಾನು ಎಂದಿದ್ದಾರೆ.

ಸ್ವಾತಂತ್ರ್ಯ ಬಂದ ಬಳಿಕ ವಿಭಜನೆ ಆಯಿತು, ಭಾರತದಲ್ಲಿ ಉಳಿದುಕೊಂಡ ಮುಸಲ್ಮಾನರು ಕೂಡ ಭಾರತೀಯರು. ಮುಸಲ್ಮಾನರೂ ಸಹಾ ನಮ್ಮ ಸೋದರರು, ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ನಮ್ಮ ಸರ್ಕಾರ ಎಲ್ಲ ಜನಾಂಗ, ಧರ್ಮದವರನ್ನು ಸಮಾನವಾಗಿ ನೋಡುತ್ತದೆ. ನಮ್ಮ ಸರ್ಕಾರ ಬಜೆಟ್​ನಲ್ಲಿ ನಿಮಗೆ ನಾಲ್ಕೂವರೆ ಸಾವಿರ ಕೊಟಿ ಮೀಸಲಿಟ್ಟಿದೆ. ಅದೇನೂ ದೊಡ್ಡದಲ್ಲ, ನಿಮ್ಮ ಪಾಲನ್ನು ನಿಮಗೆ ಕೊಡಲೇ ಬೇಕಲ್ಲವಾ.? ಎಲ್ಲರಿಗೂ ಸಮಾನವಾಗಿ ಹಂಚಿಕೆ ಆದಾಗ ಮಾತ್ರ ಸಮಾನತೆ ಬರುತ್ತದೆ. ಅರ್ಥಿಕ, ಸಾಮಾಜಿಕ, ಶೈಕ್ಷಣಿಕ ವಾಗಿ ಸಮಾನತೆ ಬರಬೇಕು ಎಂದಿದ್ದಾರೆ.

ನಿಮ್ಮ ಹಕ್ಕುಗಳನ್ನು ರಕ್ಷಣೆ ಮಾಡುವುದು ನಮ್ಮ ಜವಾಬ್ದಾರಿ. ಯಾರು ಏನೇ ಹೇಳಿಕೊಳ್ಳಲಿ, ಅದಕ್ಕೆಲ್ಲ ನಾವು ಸೊಪ್ಪು ಹಾಕುವವರಲ್ಲ. ಸಂವಿಧಾನ ರಕ್ಷಣೆ ಮಾಡುವುದು ನಮ್ಮ ಜವಾಬ್ದಾರಿ. ಅದನ್ನು ನಾವು ಮಾಡುತ್ತಾ ಇದ್ದೇವೆ. ಮಂಗಳೂರಿನಲ್ಲಿ ಹಜ್ ಭವನಕ್ಕೆ ಹದಿನಾರನೇ ತಾರೀಖು ಶಂಕು ಸ್ಥಾಪನೆ ಮಾಡ್ತಾ ಇದೀನಿ. ನಿಮ್ಮಲ್ಲಿ ಶಿಕ್ಷಣ ಹೆಚ್ಚಾಗಬೇಕು. ಆಗ ಸ್ವಾಭಿಮಾನಿಗಳಾಗಿ ಬದುಕ್ತೀರಾ. ಸರ್ಕಾರ ಏನು ಮಾಡಿದೆ ಅಂತಾ ನಾನೇ ಹೇಳಲು ಹೋಗಲ್ಲ. ಅದನ್ನು ನೀವು ಹೇಳಬೇಕು. ನಾವು ಯಾವ ಧರ್ಮಕ್ಕೂ ಅನ್ಯಾಯ ಮಾಡಲ್ಲ. ಎಲ್ಲರಿಗೂ ರಕ್ಷಣೆ ಕೊಡುವುದು ನಮ್ಮ ಕರ್ತವ್ಯ. ನಮ್ಮ ಸರ್ಕಾರದಲ್ಲಿ ಯಾರೂ ಆತಂಕ ಪಡುವ ಅವಶ್ಯಕತೆ ಇಲ್ಲ. ಕರ್ನಾಟಕದಲ್ಲಂತೂ ಯಾರೂ ಆತಂಕ ಪಡಬೇಕಿಲ್ಲ ಎಂದಿದ್ದಾರೆ.

Tags: @newsfirstkannadacm siddarmaiahcongressDCM DK Shivakumarkannada latest newskannada live newskannada live tvkannada news channelkannada news livekannada tv channelkarnataka latest newskarnataka political developmentsKarnataka Politicslive karnataka newslive newsnews first kannadanewsfirst kannadanewsfirst liveRainsiddaramihsiddutoday newstv9 kannadaVIDHANA SOUDHA
Previous Post

ಡಿಜಿಟಲ್​ ಮೀಡಿಯಾಗೆ ಸರ್ಕಾರಿ ಜಾಹಿರಾತು.. ಗಣ್ಯರಿಗೆ ಅಭಿನಂದನೆ

Next Post

ಸಿಎಂ ಕನ್ನಡಿಗರನ್ನು ಕರೆತಂದರೂ ಶ್ಲಾಘನೆ ಇಲ್ಲ.. ಬರೀ ಟೀಕೆ..

Related Posts

ಪ್ಲೇಆಫ್‌ಗೆ ಲಗ್ಗೆ ಇಟ್ಟ ಆರ್‌ಸಿಬಿ : 23 ರನ್‌ಗಳಿಂದ ಪಂಜಾಬ್‌ ಮಣಿಸಿ ಗೆದ್ದು ಬೀಗಿದ ರೆಡ್‌ ಆರ್ಮಿ..
Top Story

ಪ್ಲೇಆಫ್‌ಗೆ ಲಗ್ಗೆ ಇಟ್ಟ ಆರ್‌ಸಿಬಿ : 23 ರನ್‌ಗಳಿಂದ ಪಂಜಾಬ್‌ ಮಣಿಸಿ ಗೆದ್ದು ಬೀಗಿದ ರೆಡ್‌ ಆರ್ಮಿ..

by ಪ್ರತಿಧ್ವನಿ
May 17, 2026
0

ಬೆಂಗಳೂರು : ಪಂಜಾಬ್​ ಕಿಂಗ್ಸ್​ ವಿರುದ್ಧ ನಡೆದ ಐಪಿಎಲ್​ 2026ರ 61ನೇ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಭರ್ಜರಿ ಪ್ರದರ್ಶನ ನೀಡಿದ್ದು ಗೆಲುವಿನ ರಣಕೇಕೆ ಹಾಕಿದೆ...

Read moreDetails
ಚಂಡ ಮಾರುತ ಬರುವ ಮುನ್ನ ಶಾಂತವಾಗಿರುತ್ತೆ : ಇರಾನ್‌ ಮೇಲೆ ಟ್ರಂಪ್ ಮತ್ತೆ ದಾಳಿಯ ಮುನ್ಸೂಚನೆ..!

ಚಂಡ ಮಾರುತ ಬರುವ ಮುನ್ನ ಶಾಂತವಾಗಿರುತ್ತೆ : ಇರಾನ್‌ ಮೇಲೆ ಟ್ರಂಪ್ ಮತ್ತೆ ದಾಳಿಯ ಮುನ್ಸೂಚನೆ..!

May 17, 2026
ಅಬ್ಬರಿಸಿದ ಆರ್‌ಸಿಬಿ ರನ್‌ ಮಷಿನ್‌ ಕೊಹ್ಲಿ : ಪಂಜಾಬ್‌ಗೆ ಬೃಹತ್‌ ಮೊತ್ತದ ಟಾರ್ಗೆಟ್‌..!

ಅಬ್ಬರಿಸಿದ ಆರ್‌ಸಿಬಿ ರನ್‌ ಮಷಿನ್‌ ಕೊಹ್ಲಿ : ಪಂಜಾಬ್‌ಗೆ ಬೃಹತ್‌ ಮೊತ್ತದ ಟಾರ್ಗೆಟ್‌..!

May 17, 2026
ಮತ್ತೆ ಡಿಸಿಎಂ ಆಗ್ತಾರಾ ಅಥಣಿ ಶಾಸಕ..? : ಬೆಳಗಾವಿ ಜಿಲ್ಲೆಗೆ ಮಹತ್ವದ ಸ್ಥಾನದ ಬಗ್ಗೆ ಸವದಿ ಹೇಳಿದ್ದೇನು..?

ಮತ್ತೆ ಡಿಸಿಎಂ ಆಗ್ತಾರಾ ಅಥಣಿ ಶಾಸಕ..? : ಬೆಳಗಾವಿ ಜಿಲ್ಲೆಗೆ ಮಹತ್ವದ ಸ್ಥಾನದ ಬಗ್ಗೆ ಸವದಿ ಹೇಳಿದ್ದೇನು..?

May 17, 2026
KPSC ಆಯ್ತು ಈಗ KEAದಲ್ಲೂ ಅಕ್ರಮದ ವಾಸನೆ : ಸಾಮ್ರಾಟ್‌ ಅಶೋಕ್‌ ಸಿಡಿಸಿದ್ರು ಹೊಸ ಬಾಂಬ್‌..!

KPSC ಆಯ್ತು ಈಗ KEAದಲ್ಲೂ ಅಕ್ರಮದ ವಾಸನೆ : ಸಾಮ್ರಾಟ್‌ ಅಶೋಕ್‌ ಸಿಡಿಸಿದ್ರು ಹೊಸ ಬಾಂಬ್‌..!

May 17, 2026
Next Post
ಸಿಎಂ ಕನ್ನಡಿಗರನ್ನು ಕರೆತಂದರೂ ಶ್ಲಾಘನೆ ಇಲ್ಲ.. ಬರೀ ಟೀಕೆ..

ಸಿಎಂ ಕನ್ನಡಿಗರನ್ನು ಕರೆತಂದರೂ ಶ್ಲಾಘನೆ ಇಲ್ಲ.. ಬರೀ ಟೀಕೆ..

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada