Pratidhvani
Advertisement
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ
No Result
View All Result
Pratidhvani
No Result
View All Result

ಅಗ್ನಿಪಥ್: ಏನಿದು ಸಂಘ ಮತ್ತು ಬಿಜೆಪಿಯ ಗೇಮ್ ಪ್ಲ್ಯಾನ್?

ಡಾ | ಜೆ.ಎಸ್ ಪಾಟೀಲ

ಡಾ | ಜೆ.ಎಸ್ ಪಾಟೀಲ

June 20, 2022
Share on FacebookShare on Twitter

ರಾಷ್ಟ್ರೀಯ ಸ್ವಯಂಸೇವಕ ಸಂಘವೆಂಬ ಹಿಂದೂ ಫ್ಯಾಸಿಷ್ಟ್ ಸಂಘಟನೆಯ ರಾಜಕೀಯ ವಿಂಗ್ ಆಗಿರುವ ಬಿಜೆಪಿ ನೇತೃತ್ವದ ಒಕ್ಕೂಟ ಸರಕಾರ ನಿನ್ನೆ ಒಂದು ಆತಂಕಕಾರಿ ನಿರ್ಧಾರ ಹೊರಹಾಕಿದೆ. ಅದು ದೇಶದ ರಕ್ಷಣಾ ಇಲಾಖೆಗೆ ಸಂಬಂಧಿಸಿದ ಅತ್ಯಂತ ಸೂಕ್ಷ್ಮ ನಿರ್ಧಾರವಾಗಿದೆ. ಕಳೆದ ಏಳೆಂಟು ವರ್ಷಗಳ ಬಿಜೆಪಿ ಆಡಳಿತದಲ್ಲಿ ದೇಶದ ಮಾಧ್ಯಮ ಕ್ಷೇತ್ರ ˌ ಪೋಲಿಸ್ ಇಲಾಖೆˌ ನ್ಯಾಯಾಂಗ ಮುಂತಾದ ಸೂಕ್ಷ್ಮ ಕ್ಷೇತ್ರಗಳ ಮೇಲೆ ಫ್ಯಾಸಿಷ್ಟರ ನಿಯಂತ್ರಣ ಹೆಚ್ಚಿದ್ದನ್ನು ನಾವು ಬಲ್ಲೆವು. ಇದು ಹೀಗೆ ಮುಂದುವರೆದರೆ ದೇಶ ಮುಂದೊಂದು ದಿನ ಬಲಪಂಥೀಯ ಫ್ಯಾಸಿಷ್ಟರ ಕಪಿಮುಷ್ಟಿಗೆ ಸಿಲುಕಿ ಧ್ವಂಸವಾಗುತ್ತದೆ ಎಂದು ದೇಶದ ಸಂವೇದನಾಶೀಲ ನಾಗರಿಕರು ಆತಂಕದಲ್ಲಿರುವಾಗ ಸರಕಾರ ಈಗ ಸೈನ್ಯವನ್ನು ಕೂಡ ಬಿಜೆಪಿ ಮತ್ತು ಫ್ಯಾಸಿಷ್ಟ ಸಂಘಟನೆಗಳ ನಿಯಂತ್ರಣಕ್ಕೆ ಒಳಪಡಿಸುವ ಹುನ್ನಾರ ಮಾಡುತ್ತಿದೆ ಎನ್ನುವ ಸಂಶಯಕ್ಕೆ ಈ ವಿವಾದಾತ್ಮಕ ನಿರ್ಧಾರ ಎಡೆಮಾಡಿದೆ.

ಹೆಚ್ಚು ಓದಿದ ಸ್ಟೋರಿಗಳು

ಹಿಂದುತ್ವದ ಭ್ರಮೆ ಬಿತ್ತುವ ಮೂಲಕ ರಾಜಕೀಯದಲ್ಲಿ ಧರ್ಮದ ದುರ್ಬಳಕೆ

ಸ್ವಚ್ಚ ಭಾರತದ ಸವಿಗನಸೂ ಪೌರಕಾರ್ಮಿಕರ ಬವಣೆಯೂ – ನಾ ದಿವಾಕರ

ಝೀ ವಾಹಿನಿಯಲ್ಲಿ ಅಂತರ್‌ ಕಲಹ; ಮತ್ತೊಂದು ಕೂಗುಮಾರಿ ವಾಹಿನಿಗೆ ಹಾದಿ

ಮೋದಿ ಆಡಳಿತವು ಕಳೆದ ಎಳು ವರ್ಷಗಳಲ್ಲಿ ಎಲ್ಲ ರಂಗಗಳಲ್ಲೂ ದೇಶವನ್ನು ಸರ್ವನಾಶಗೊಳಿಸಿದೆ. ಆರ್ಥಿಕ ದಿವಾಳಿಯ ಜೊತೆಗೆ ಯುವ ಜನರು ನಿರುದ್ಯೋಗಿಗಳಾಗಿ ಹತಾಷೆಯ ಹಂತ ತಲುಪಿದ್ದಾರೆ. ಹಿಂದಿನ ದೂರದರ್ಶಿ ಸರಕಾರಗಳು ಸ್ಥಾಪಿಸಿದ ಸರಕಾರಿ ಸ್ವಾಮ್ಯದ ಸಾರ್ವಜನಿಕ ಸಂಸ್ಥೆಗಳೆಲ್ಲವೂ ಬಿಜೆಪಿ ಸಖ್ಯದಲ್ಲಿರುವ ಖಾಸಗಿ ಕಳ್ಳೋದ್ಯಮಿಗಳಿಗೆ ಸಗಟಾಗಿ ಮಾರಾಟ ಮಾಡುವ ಮೂಲಕ ದಮನಿತರ ಮೀಸಲಾತಿಯನ್ನು ಹಂತಹಂತವಾಗಿ ಮುಗಿಸಿಹಾಕಲಾಗುತ್ತಿದೆ. ಇದರಿಂದ ನಿರುದ್ಯೋಗ ಸಮಸ್ಯೆ ಬೃಹದಾಕಾರವಾಗಿ ಹೆಚ್ಚಿದೆ. ಇಂತಹ ಸಂಕಷ್ಟದ ಕಾಲದಲ್ಲಿ ಮೋದಿ ಸರಕಾರ ಸೈನ್ಯದಲ್ಲಿ ಗುತ್ತಿಗೆ ಆಧಾರದಲ್ಲಿ ಸೈನಿಕರನ್ನು ನೇಮಿಸಿಕೊಳ್ಳುವ ಅಗ್ನಿಪಥ್ ಎಂಬ ವಿವಾದಾತ್ಮಕ ಯೋಜನೆ ಘೋಷಿಸಿದೆ.

ಸರಕಾರದ ಬೇರಾವುದೇ ಇಲಾಖೆಯಲ್ಲಿ ಗುತ್ತಿಗೆ ಆಧಾರದಲ್ಲಿ ನೌಕರರ ನೇಮಕಾತಿ ಒಂದು ಕ್ಷಣ ಸಹಿಸಬಹುದೇನೊ. ಆದರೆ ದೇಶದ ರಕ್ಷಣೆಯ ಜವಾಬ್ಧಾರಿ ಹೊತ್ತಿರುವ ಸೂಕ್ಷ್ಮ ಇಲಾಖೆಯಲ್ಲಿ ಅದೂ ಸೈನ್ಯದಲ್ಲಿ ಗುತ್ತಿಗೆಯಾಧಾರದ ನೇಮಕಾತಿಯ ನಿರ್ಧಾರ ಅನೇಕ ಬಗೆಯ ಸಂಶಯಗಳನ್ನು ಜನರ ಮನಸ್ಸಿನಲ್ಲಿ ಹುಟ್ಟುಹಾಕಿದೆ. ಸರಕಾರದ ಈ ವಿವಾದಾತ್ಮಕ ನಿರ್ಧಾರದಿಂದ ಉತ್ತರ ಭಾರತದ ಯುವಕರು ಸಿಡಿದೆದ್ದಿದ್ದಾರೆ. ಮೊದಲೇ ನಿರುದ್ಯೋಗದಿಂದ ಕಂಗಾಲಾಗಿರುವ ದೇಶದ ಯುವಜನತೆಯ ಗಾಯದ ಮೇಲೆ ಸರಕಾರದ ಈ ನಿರ್ಧಾರ ಬರೆ ಎಳೆದಂತಾಗಿದೆ. ಕಳೆದ ಎರಡು ದಿನಗಳಿಂದ ಉತ್ತರ ಭಾರತ ಹೊತ್ತಿ ಉರಿಯುತ್ತಿದೆ. ಸಾವಕಾಶವಾಗಿ ಆ ದಳ್ಳುರಿ ಇಡೀ ದೇಶಾದ್ಯಂತ ಪಸರಿಸುವ ಅಪಾಯವಿದೆ. ಯುವ ಜನತೆ ಅಕ್ಷರಶಃ ಹತಾಷೆಗೊಳಗಾಗಿ ದೇಶದ ಸಾರ್ವಜನಿಕ ಆಸ್ತಿಗೆ ಹಾನಿ ಮಾಡುವಷ್ಟು ತಾಳ್ಮೆಗೆಟ್ಟಿದ್ದಾರೆ. ಇತಿಹಾಸದುದ್ದಕ್ಕೂ ಈ ದೇಶಕ್ಕೆ ನಿಷ್ಟರಾಗಿರದ ಸಂಘ ಮತ್ತು ಬಿಜೆಪಿ ಸದಾ ದೇಶಭಕ್ತಿಯ ನಾಟಕ ಮಾಡುತ್ತವಾದರೂ ದೇಶಕ್ಕೆ ಮಾರಕವಾಗಬಲ್ಲ ಈ ವಿವಾದಾತ್ಮಕ ನಿರ್ಧಾರ ಏಕೆ ತೆಗೆದುಕೊಂಡವು ಎನ್ನುವುದು ಆಶ್ಚರ್ಯಕ್ಕೆ ಎಡೆಮಾಡಿದೆ.

ಸರಕಾರ ಈ ಅಗ್ನಿಪಥ್ ಯೋಜನೆಯ ಬಗ್ಗೆ ಏನೇ ಸಮಜಾಯಿಷಿ ಅಥವಾ ಸಮರ್ಥನೆ ಮಾಡಿಕೊಳ್ಳುತ್ತಿದ್ದರೂ ಕೂಡ ಇದರ ಹಿಂದೆ ಸಂಘ ಮತ್ತು ಬಿಜೆಪಿಗೆ ಅನುಕೂಲವಾಗುವ ಏನೋ ಗೂಪ್ತಸೂಚಿ ಅಡಗಿದೆ ಎನ್ನುವ ಮಾತುಗಳು ಸಾರ್ವಜನಿಕವಾಗಿ ಕೇಳಿಬರುತ್ತಿವೆ. ಏಕೆಂದರೆ ಜಗತ್ತಿನ ಪ್ರತಿಯೊಂದು ಬಲಪಂಥೀಯ ಫ್ಯಾಸಿಷ್ಟ್ ಸಂಘಟನೆಗಳು ಮತ್ತು ಅವುಗಳ ರಾಜಕೀಯ ವೇದಿಕೆಗಳು ತಮ್ಮದೆಯಾದ ಮಿಲ್ಟ್ರಿ ಮಾದರಿಯ ಖಾಸಗಿ ಸೈನ್ಯ ಹೊಂದಿದ್ದನ್ನು ನೋಡಿದ್ದೇವೆ. ಈ ಖಾಸಗಿ ಷ್ಯಾಸಿಷ್ಟ್ ಸೈನ್ಯ ಯಾವಾಗಲು ತಮ್ಮ ವಿರೋಧಿಗಳನ್ನು ಹಣಿಯಲು ಮತ್ತು ದೇಶದ ಅಲ್ಪಸಂಖ್ಯಾತರನ್ನು ಹಿಂಸಿಸಲು ದುರ್ಬಳಕೆಯಾಗಿವೆಯೆ ಹೊರತು ದೇಶದ ರಕ್ಷಣೆಗೆ ಬಳಕೆಯಾದ ಉದಾಹಣೆಗಳು ಕಾಣಸಿಗುವುದಿಲ್ಲ. ಹಾಗಾಗಿˌ ಈ ಖಾಸಗಿ ಫ್ಯಾಸಿಷ್ಟ್ ಸೈನಿಕರಿಗೆ ಗುತ್ತಿಗೆಯಾಧಾರದಲ್ಲಿ ಒಂದು ವೇಳೆ ಮಿಲ್ಟ್ರಿ ಶಸ್ತ್ರಾಸ್ತ್ರ ತರಬೇತಿ ನೀಡಿದ್ದೆಯಾದಲ್ಲಿ ಮುಂದೊಂದು ದಿನ ದೇಶದಲ್ಲಿ ಬಲಪಂಥೀಯ ಆತಂಕವಾದ ಹೆಚ್ಚಾಗುವ ಸಾಧ್ಯತೆಗಳು ಅಲ್ಲಗಳೆಯಲಾಗದು.

ಮೋದಿ ಸರಕಾರದ ಅಗ್ನಿಪಥ್ ಯೋಜನೆಯಡಿಯಲ್ಲಿ ತರಬೇತಿ ಪಡೆಯುವ ಅಗ್ನಿವೀರರು ಭವಿಷ್ಯತ್ತಿನಲ್ಲಿ ಬಿಜೆಪಿ ಮತ್ತು ಸಂಘಕ್ಕೆ ಉಪಯೋಗವಾಗಬಲ್ಲ ಹಾಗು ಇದು ಮೇಲ್ನೋಟಕ್ಕೆ ಸೈನ್ಯದಂತೆ ಗೋಚರಿಸಿದರೂ ಒಂದು ಸೈನ್ಯದ ನಕಲಿ ತಂಡವಾಗಬಹುದು ಎನ್ನುವ ಸಂಶಯ ಜನರಿಗೆ ಕಾಡುತ್ತಿದೆ. ಕೈಯಲ್ಲಿ ಒಂದು ಕೋಲು ಅಥವಾ ಕತ್ತಿಯನ್ನು ಹಿಡಿದುಕೊಂಡು ಹಾಫ್ ಚಡ್ಡಿಯುಟ್ಟ ಸಂಘದ ಸ್ವಯಂಸೇವಕರಿಗೆ ಬಡ ತೆರಿಗೆದಾರರ ಹಣದಲ್ಲಿ ಉನ್ನತ ಮಟ್ಟದ ಮಿಲ್ಟ್ರಿ ತರಬೇತಿಯನ್ನು ನೀಡುವ ಮಹಾ ಮೋಸದ ಯೋಜನೆಯಿದು ಎಂದು ದೇಶದ ಜನ ಮಾತನಾಡಿಕೊಳ್ಳುತ್ತಿದ್ದಾರೆ. ಈ ನಿರ್ಧಾರರವನ್ನು ಅನೇಕ ಜನ ಮಿಲ್ಟ್ರಿ ಅಧಿಕಾರಿಗಳು ಸ್ವತಃ ವಿರೋಧಿಸುತ್ತಿದ್ದಾರೆ. ಜಗತ್ತಿನ ಫ್ಯಾಸಿಷ್ಟ್ ಆಡಳಿತಗಳ ಇತಿಹಾಸದಲ್ಲಿ ಈ ರೀತಿ ಆಗಿರುವ ಸಾಕಷ್ಟು ಉದಾಹರಣೆಗಳು ನಮ್ಮ ಕಣ್ಣಮುಂದಿವೆ. ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್ ಕೂಡ 𝐒𝐚𝐚𝐥 𝐒𝐜𝐡𝐮𝐭𝐳 𝐚𝐤𝐚 𝐒𝐒 ಜೊತೆ ಇದನ್ನೆ ಮಾಡಿದ್ದನ್ನು ನಾವು ಸ್ಮರಿಸಬಹುದು. ಆತ ಮೊದಲು ನಾಜಿಗಳಿಗೆ ಸುರಕ್ಷಾ ದಳದ ಸೈನಿಕರಂತೆ ತರಬೇತಿ ನೀಡುತ್ತಾ ಆನಂತರ 𝐖𝐞𝐡𝐫𝐦𝐚𝐜𝐡𝐭 ಅಥವಾ ಸಾಮಾನ್ಯ ಮಿಲ್ಟ್ರಿ ದಳದಿಂದ ಪರಿಪೂರ್ಣ ಶಸ್ತ್ರಾಸ್ತ್ರ ತರಬೇತಿ ನೀಡಿದ್ದನ್ನು ನಾವು ಓದಿ ತಿಳಿದಿದ್ದೇವೆ.

ಹಿಟ್ಲರನ ಖಾಸಗಿ ಸೈನ್ಯ ಎರಡು ವಿಂಗ್ ಗಳನ್ನು ಹೊಂದಿತ್ತು. ಒಂದನೇಯದು 𝐀𝐥𝐥𝐠𝐞𝐦𝐞𝐢𝐧𝐞 𝐒𝐒 (𝐠𝐞𝐧𝐞𝐫𝐚𝐥 𝐒𝐒) ಮತ್ತು ಎರಡನೇಯದು 𝐖𝐚𝐟𝐟𝐞𝐧 𝐒𝐒 (𝐚𝐫𝐦𝐞𝐝 𝐒𝐒). ಈ ಎರಡೂ ವಿಂಗಿಗೆ ಸೇರಿದ ಸೈನಿಕರು ನಾಜಿ ಪಕ್ಷಕ್ಕೆ ವಿಧೇಯರಾಗಿದ್ದರು. ಹಿಟ್ಲರ್ ಈ ತರಬೇತಿ ಪಡೆದ ಸೈನಿಕ ತಂಡವನ್ನು ಜರ್ಮನಿಯ ಒಳಗು ಮತ್ತು ಹೊರಗು ತನ್ನ ವಿರೋಧಿ ಧ್ವನಿಗಳನ್ನು ದಮನಿಸಲು ಬಳಸುತ್ತಿದ್ದದ್ದು ಈಗ ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ನಾಜಿ ಪಕ್ಷವು 𝐀𝐥𝐥𝐠𝐞𝐦𝐞𝐢𝐧𝐞 𝐒𝐒 ವಿಂಗ್ ನ್ನು ಯಹೂದಿಗಳ ವಿರುದ್ಧ ಜನಾಂಗೀಯ ದಂಗೆಗಳನ್ನು ಹತ್ತಿಕ್ಕಲು ಬಳಸಿದರೆ 𝐖𝐚𝐟𝐟𝐞𝐧 𝐒𝐒 ವಿಂಗ್ ನ್ನು ಯಹೂದಿಗಳೂ ಒಳಗೊಂಡಂತೆ ಕಮ್ಯುನಿಸ್ಟರಾದಿಯಾಗಿ ತಮ್ಮ ಎಲ್ಲ ಬಗೆಯ ವಿರೋಧಿಗಳನ್ನು ಹಣಿಯಲು ಬಳಸಲಾಗುತ್ತಿತ್ತು ಎನ್ನುವ ಸಂಗತಿ ನಾವೆಲ್ಲ ಬಲ್ಲೆವು. ಹೆನ್ರಿಚ್ಛ್ ಹಿಮ್ಲರ್ ಈ ಖಾಸಗಿ ಫ್ಯಾಸಿಷ್ಟ್ ವಿಂಗನ್ನು ಮುನ್ನೆಡೆಸುವ ಮುಂದಾಳಾಗಿದ್ದ ಮತ್ತು ಆತ ನಾಜಿ ಪಕ್ಷಕ್ಕೆ ವಿಧೇಯನಾಗಿದ್ದನೆ ಹೊರತು ದೇಶದ ಸೈನ್ಯಕ್ಕೆ ಯಾವತ್ತೂ ವಿಧೇಯನಾಗಿರಲಿಲ್ಲ.

ಭಾರತದಲ್ಲಿ ಪ್ರಸ್ತುತ ಬಹುವಾಗಿ ಚರ್ಚೆಯಲ್ಲಿರುವ ಹಾಗು ದೇಶದಲ್ಲಿ ಅಶಾಂತಿಯ ವಾತಾವರಣವನ್ನು ಸೃಷ್ಟಿಸಿರುವ ಮೋದಿ ಸರಕಾರದ ಈ ವಿವಾದಾತ್ಮಕ ಅಗ್ನಿಪಥ್ ಮತ್ತು ಅಗ್ನಿವೀರ್ ಯೋಜನೆಯು ಕೂಡ ಜರ್ಮನಿಯ ಹಿಟ್ಲರನ ಫ್ಯಾಸಿಷ್ಟ್ ಸೈನ್ಯ ಮಾದರಿಯಲ್ಲಿ ಭಾರತೀಯ ಫ್ಯಾಸಿಸ್ಟರು ಕೂಡ ಶಸ್ತ್ರ ಸಜ್ಜಿತ ನಾಜಿ ಮಾದರಿಯ ಹಿಂದೂ ಮಿಲಿಟಂಟ್ ಸೈನವನ್ನು ರೂಪಿಸಲು ಮಾಡಿದ ಒಂದು ಹುನ್ನಾರವಾಗಿದೆ ಎನ್ನುವ ಸಂಶಯ ಪ್ರಜ್ಞಾವಂತ ಜನರಲ್ಲಿ ಬಲವಾಗುತ್ತಿದೆ. ಇದಷ್ಟೇ ಅಲ್ಲದೆˌ ಸೈನ್ಯದಂತ ಸೂಕ್ಷ್ಮ ಇಲಾಖೆಯಲ್ಲಿ ಯಾವ ಬದ್ಧತೆˌ ಜವಾಬ್ಧಾರಿಯೂ ಇಲ್ಲದ ಗುತ್ತಿಗೆಯಾಧಾರದ ನೇಮಕಾತಿ ಮುಂದೊಂದು ದಿನ ದೇಶದ ರಕ್ಷಣಾ ಇಲಾಖೆಗೆ ಬಹುದೊಡ್ಡ ಅಪಾಯವನ್ನು ಒಡ್ಡಬಹುದಾಗಿದೆ. ಸೈನ್ಯದಲ್ಲಿ ಈಗ ಪೂರ್ಣ ಪ್ರಮಾಣದ ನೇಮಕಾತಿ ಇದ್ದಾಗ್ಯೂ ಸಹ ಅನೇಕ ಜನ ನಿವೃತ್ತ ಮತ್ತು ಸೇವೆಯಲ್ಲಿರುವ ಝಾˌ ಅಝಾದ್ˌ ಮಿಶ್ರಾˌ ವೇದಿˌ ದ್ವಿವೇದಿˌ ತ್ರಿವೇದಿˌ ಚತುರ್ವೇದಿˌ ಶರ್ಮಾˌ ತ್ರಿಪಾಠಿˌ ಪಾಂಡೆˌ ಭಾರಧ್ವಜ ಮುಂತಾದ ಹೆಸರಿನ ಅನೇಕರು ಸೈನ್ಯದ ಗುಟ್ಟುಗಳನ್ನು ಹಣಕ್ಕಾಗಿ ವೈರಿ ದೇಶಗಳಿಗೆ ಮಾರಾಟ ಮಾಡುತ್ತಿರುವ ಅಧಿಕೃತ ಸುದ್ದಿಗಳು ನಾವು ಕೇತ್ತಿದ್ದೇವೆ.

ಈ ಯೋಜನೆಯ ಘೋಷಣೆಯು ಈಗಾಗಲೆ ದೇಶದಲ್ಲಿ ಬೆಂಕಿಯ ಕೆನ್ನಾಲಿಗೆ ಚಾಚಲು ಕಾರಣವಾಗಿದೆ. ಇನ್ನು ದೇಶದ ಸೈನ್ಯವನ್ನು ಅತಂತ್ರಗೊಳಿಸುವ ಈ ಗುತ್ತಿಗೆಯಾಧಾರದ ಅಗ್ನಿಪಥ್ ಯೋಜನೆಯು ಅನುಷ್ಟಾನಕ್ಕೆ ಬಂದದ್ದೆಯಾದಲ್ಲಿ ಇದು ದೇಶದ ರಕ್ಷಣೆಗೆ ಅಗ್ನಿಸ್ಪರ್ಶ ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ ಎನ್ನುವ ಮಾತು ಪ್ರಜ್ಞಾವಂತರು ಆಡುತ್ತಿದ್ದಾರೆ. ಭಾರತೀಯ ಪ್ರಜ್ಞಾವಂತ ನಾಗರಿಕರಲ್ಲಿ ಸರಕಾರದ ಈ ವಿವಾದಾತ್ಮಕ ನಿರ್ಧಾರವು ಅತ್ಯಂತ ಹೆಚ್ಚಿನ ಆತಂಕವನ್ನು ಸೃಷ್ಟಿಸಿದೆ. ಈ ನಿರ್ಧಾರವನ್ನು ಸಾಂಘಿಕವಾಗಿ ವಿರೋಧಿಸುವ ಮಾತುಗಳು ದೇಶಾದ್ಯಂತ ಕೇಳಿಬರುತ್ತಿವೆ. ಸಂಘ ಬೆಂಬಲಿತ ಸರಕಾರದ ಈ ವಿವಾದಾತ್ಮಕ ನಿರ್ಧಾರವು ಮತ್ತೊಂದು 𝐅𝐫𝐚𝐧𝐤𝐞𝐧𝐬𝐭𝐞𝐢𝐧 ರೂಪಿಯುವ ಹುನ್ನಾರವೆಂದು ಜನರು ಮಾತನಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಗುತ್ತಿಗೆ ಅವಧಿ ಮುಗಿಸಿ ಹೊರಬರುವ ಈ ಅಗ್ನಿವೀರರನ್ನು ಸಂಘವು ತಮ್ಮ ಸೈದ್ಧಾಂತಿಕ ವಿರೋಧಿಗಳ ಹಾಗು ದೇಶದ ಅಲ್ಪಸಂಖ್ಯಾತರ ಮೇಲೆ ಅಥವಾ ದೇಶದ ಪ್ರತಿಯೊಬ್ಬ ನಾಗರಿಕನ ಮೇಲೂ ಪ್ರಯೋಗಿಸಬಹುದು ಎನ್ನುವ ಆತಂಕ ಜನರಲ್ಲಿ ಮನೆಮಾಡಿದೆ.

ಈ ಯೋಜನೆ ಒಂದು ವೇಳೆ ಯಶಸ್ವಿಯಾಗಿ ಅನುಷ್ಟಾನಗೊಂಡರೆ ಅದರ ಫಲಿತಾಂಶವು ಭವಿಷ್ಯತ್ತಿನಲ್ಲಿ ದೇಶದ ಜನರನ್ನು ಅಳಿಸುತ್ತದೊ ಅಥವಾ ನಗಿಸುತ್ತದೊ ಎನ್ನುವುದು ಮುಂದಿನ ದಿನಗಳು ನಿರ್ಧರಿಸುತ್ತವೆ. ಈ ಯೋಜನೆಯನ್ನು ಕುರುಡಾಗಿ ಬೆಂಬಲಿಸುತ್ತಿರುವ ಬಲಪಂಥೀಯರು ಇದರ ಸಾದಕ-ಬಾದಕಗಳ ಬಗ್ಗೆ ಕೂಲಂಕುಷವಾಗಿ ಚಿಂತಿಸಬೇಕಿದೆ. ಕೇವಲ ಏಳೆಂಟು ವರ್ಷಗಳ ಫ್ಯಾಸಿಷ್ಟಕ ನಾಗರಿಕ ಆಡಳಿತವೇ ದೇಶದ ಪ್ರಜೆಗಳಲ್ಲಿ ಇಷ್ಟೊಂದು ಬೃಹತ್ ಪ್ರಮಾಣದ ಅಸುರಕ್ಷತೆˌ ಆತಂಕˌ ಅಶಾಂತಿ ಹಾಗು ಭಯವನ್ನು ಹುಟ್ಟಿಸಿರುವಾಗ ಇನ್ನು ಫ್ಯಾಸಿಷ್ಟರು ಈ ದೇಶದ ನಾಗರಿಕರ ತೆರಿಗೆ ಹಣದಲ್ಲಿ ಅಧಿಕೃತವಾಗಿ ಶಸ್ತ್ರಾಸ್ತ್ರ ತರಬೇತಿ ಹೊಂದಿದರೆ ಈ ದೇಶವನ್ನು ಯಾರು ಕಾಪಾಡಬಲ್ಲರು ಎನ್ನುವ ಆತಂಕ ದೇಶದ ಪ್ರಜ್ಞಾವಂತ ನಾಗರಿಕರನ್ನು ಕಾಡುತ್ತಿದೆ.

RS 500
RS 1500

SCAN HERE

don't miss it !

ಸಿದ್ದರಾಮೋತ್ಸವ ಬಗ್ಗೆ ಅನಗತ್ಯ ಗೊಂದಲ ಸೃಷ್ಟಿ : ಎಚ್.ಸಿ ಮಹಾದೇವಪ್ಪ ಅಸಮಾಧಾನ
ಕರ್ನಾಟಕ

ಸಿದ್ದರಾಮೋತ್ಸವ ಬಗ್ಗೆ ಅನಗತ್ಯ ಗೊಂದಲ ಸೃಷ್ಟಿ : ಎಚ್.ಸಿ ಮಹಾದೇವಪ್ಪ ಅಸಮಾಧಾನ

by ಪ್ರತಿಧ್ವನಿ
July 4, 2022
ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ಧರೆಗುರುಳಿದ ವಿದ್ಯುತ್ ಕಂಬಗಳು!
ಕರ್ನಾಟಕ

ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ಧರೆಗುರುಳಿದ ವಿದ್ಯುತ್ ಕಂಬಗಳು!

by ಪ್ರತಿಧ್ವನಿ
July 5, 2022
ಮೇ 21ರವರೆಗೆ 17 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್‌
ಕರ್ನಾಟಕ

ರಾಜ್ಯದಲ್ಲಿ 4 ದಿನ ಮುಂಗಾರು ಅಬ್ಬರ: 7 ಜಿಲ್ಲೆಗಳಲ್ಲಿ ಆರೆಂಜ್‌ ಅಲರ್ಟ್!‌

by ಪ್ರತಿಧ್ವನಿ
July 2, 2022
ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಶಾಸಕರೊಬ್ಬರ ಮೇಲೆ ACB ದಾಳಿ : ಅಷ್ಟಕ್ಕೂ ACB ಕೆಲಸ ಏನು.!?
ಕರ್ನಾಟಕ

ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಶಾಸಕರೊಬ್ಬರ ಮೇಲೆ ACB ದಾಳಿ : ಅಷ್ಟಕ್ಕೂ ACB ಕೆಲಸ ಏನು.!?

by ಕರ್ಣ
July 5, 2022
ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್‌ರನ್ನು ಬಂಧಿಸಿದ ಗುಜರಾತ್ ಭಯೋತ್ಪಾದನಾ ನಿಗ್ರಹ ದಳ!
ದೇಶ

ತೀಸ್ತಾ ಬಂಧನದ ಕುರಿತು UN ಅಧಿಕಾರಿಯ ಹೇಳಿಕೆಗೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದ್ದೇನು?

by ಪ್ರತಿಧ್ವನಿ
June 29, 2022
Next Post
ನಮ್ಮ ಕ್ಷೇತ್ರ ಎಂದು ಮೆರೆಯುತ್ತಿದ್ದ ಬಿಜೆಪಿ, ಜೆಡಿಎಸ್‌ ಭದ್ರಕೋಟೆಯನ್ನು ಕಸಿದುಕೊಂಡಿದ್ದೇವೆ : ಸಿದ್ದರಾಮಯ್ಯ

ನಾವು ಸ್ಥಾಪಿಸಿದ ಡಾ.ಬಿ.ಆರ್.ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಅನ್ನು ಮೋದಿ ಉದ್ಘಾಟಿಸುತಿದ್ದಾರೆ : ಸಿದ್ದರಾಮಯ್ಯ

ಮುಂದಿನ ಒಂದೂವರೆ ವರ್ಷದಲ್ಲಿ 10 ಲಕ್ಷ ಉದ್ಯೋಗ ಸೃಷ್ಟಿ : ಪ್ರಧಾನಿ ನರೇಂದ್ರ ಮೋದಿ

ಮೈಸೂರಿಗೆ ಮೋದಿ ಆಗಮನ ಹಿನ್ನೆಲೆ ರೈಲುಗಳ ಸಂಚಾರದಲ್ಲಿ ವ್ಯತ್ಯಾಯ!

ಬೆಂಗಳೂರಿನಲ್ಲಿ ಪೊಲೀಸ್‌ ಸಬ್‌ ಇನ್‌ ಸ್ಪೆಕ್ಟರ್‌ ಆತ್ಮಹತ್ಯೆ

ಬೆಂಗಳೂರಿನಲ್ಲಿ ಪೊಲೀಸ್‌ ಸಬ್‌ ಇನ್‌ ಸ್ಪೆಕ್ಟರ್‌ ಆತ್ಮಹತ್ಯೆ

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist