
ವಿಧಾನ ಪರಿಷತ್ನಲ್ಲಿ ಸಿಎಂ ಸಿದ್ದರಾಮಯ್ಯ ಗುಡುಗಿದ್ದಾರೆ. ಮುಂದಿನ ಬಾರಿಯೂ ಬಿಜೆಪಿಯನ್ನು ಧೂಳಿಪಟ ಮಾಡ್ತೀವಿ. ಈಗ ರಾಜ್ಯದಲ್ಲಿ ಕಾಂಗ್ರೆಸ್ ಗೆದ್ದಿದೆ. ಮುಂದೆಯೂ ಗೆಲ್ಲಲಿದೆ. ನಿಮ್ಮನ್ನ ಧೂಳಿಪಟ ಮಾಡ್ತೀವಿ. ಜನ ಒಂದು ಬಾರಿಯೂ ನಿಮಗೆ ಆಶಿರ್ವಾದ ಮಾಡಿಲ್ಲ ಎಂದು ಬಿಜೆಪಿ ಸದಸ್ಯರ ಕಾಲೆಳೆದಿದ್ದಾರೆ ಸಿಎಂ ಸಿದ್ದರಾಮಯ್ಯ..

ಮೋದಿ ಕಿ ಗ್ಯಾರಂಟಿ, ಹಿಂದಿ ಮೆ ಹೇ.. ಎಂದಿರುವ ಸಿದ್ದರಾಮಯ್ಯ. ಜನ ಒಂದು ಬಾರಿಯೂ ನಿಮಗೆ 113 ಸೀಟು ಕೊಟ್ಟಿದ್ದಾರಾ.? ಆಪರೇಷನ್ ಕಮಲದ ಮೂಲಕ ಸರ್ಕಾರ ಮಾಡಿ ಅಧಿಕಾರಕ್ಕೆ ಬಂದಿದ್ರಿ ಎಂದಿದ್ದಾರೆ ಸಿದ್ದರಾಮಯ್ಯ. ಈ ವೇಳೆ ನೀವೇ ಸೂತ್ರದಾರರು ಅಂತ ಕೆಣಕಿದ್ದಾರೆ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ.
ಆಗ ಛಲವಾದಿ ನಾರಾಯಣಸ್ವಾಮಿ ನಮ್ಮಲ್ಲಿದ್ರು, ಈಗ ಬಿಜೆಪಿಗೆ ಹೋಗಿದ್ದಾರೆ. ಅವರಿಗೆ ಎರಡೂ ಕಡೆ ಏನು ಅಂತ ಗೊತ್ತಿದೆ. ಅವರು ಎಲ್ಲಿದ್ರೆ ಅಲ್ಲಿ ಪಕ್ಷ ನಿಷ್ಟೆ ತೋರ್ತಾರೆ ಅಂತ ಹೇಳಿದ್ದಾರೆ ಸಿಎಂ ಸಿದ್ದರಾಮಯ್ಯ. ಈ ವೇಳೆ ಮಧ್ಯಪ್ರವೇಶ ಮಾಡಿದ ಪೂಜಾರ್, ನೀವು ಕೂಡ ಜೆಡಿಎಸ್ ಪಕ್ಷದಲ್ಲಿ ಇದ್ರಿ ಅಂತ ಸಿಎಂ ಕಾಲೆಳೆದಿದ್ದಾರೆ ಪೂಜಾರ.
ನೀನು ಕಾಂಗ್ರೆಸ್ನಲ್ಲಿದ್ದೆ, ಬಿಜೆಪಿಗೆ ಹೋಗಿದ್ಯಾ ಎಂದಿರುವ ಸಿಎಂ ಸಿದ್ದರಾಮಯ್ಯ, ನೀವೇ ಅದಕ್ಕೆ ಮಾರ್ಗದರ್ಶಕರು ಎಂದು ತಿರುಗೇಟು ನೀಡಿದ್ದಾರೆ ಪೂಜಾರ. ಆಗ ಹಾಗೆಲ್ಲಾ ಹೇಳೋದು ಸರಿಯಲ್ಲ ಎಂದಿದ್ದಾರೆ ಸಿದ್ದರಾಮಯ್ಯ. ಆಗ ಸಿಎಂ ಸಿದ್ದರಾಮಯ್ಯ ಮೋದಿ, ಕಾರ್ಪೋರೇಟ್ ಟ್ಯಾಕ್ಸ್ 30 ರಿಂದ ಶೇಕಡ 22ಕ್ಕೆ ಇಳಿಸಿದ್ರು. ಯಡಿಯೂರಪ್ಪ ಸಿಎಂ ಇದ್ದಾಗ ನೋಟ್ ಪ್ರಿಂಟ್ ಮಾಡೊ ಮಶಿನ್ ಇಟ್ಟಿಲ್ಲ ಎಂದು ಹೇಳಿದ್ರು ಎಂದಿದ್ದಾರೆ.

ಸಿಎಂ ಮಾತಿಗೆ ಬಿಜೆಪಿ ಸದಸ್ಯರ ವಿರೋಧ ವ್ಯಕ್ತಪಡಿಸಿದ್ದು, ಯಡಿಯೂರಪ್ಪ ರೈತರ ಸಾಲ, ಮೀನುಗಾರರ ಸಾಲ, ನೇಕಾರರ ಸಾಲ ಮನ್ನ ಮಾಡಿದ್ರು ಎಂದಿದ್ದಾರೆ ರವಿಕುಮಾರ್. ಆಗ ಕೇಂದ್ರ ಸರ್ಕಾರ Corporate tax ನ್ನು 30 ರಿಂದ 20ಕ್ಕೆ ಇಳಿಸಿದರು. ಜನ ಸಾಮಾನ್ಯರ ತೆರಿಗೆ ಪ್ರಮಾಣ ವಿಪರೀತ ಹೆಚ್ಚಿಸಿತು. ಸತ್ಯ ಎಂದಿಗೂ ಕಹಿಯಾಗಿರುತ್ತದೆ. ಸತ್ಯ ಹೇಳುವಾಗ ನಾನು ಯಾರಿಗೂ ಹೆದರಲ್ಲ, ಬಿಜೆಪಿಯ ಸುಳ್ಳುಗಳಿಗೂ ಹೆದರಲ್ಲ ಎಂದಿದ್ದಾರೆ ಸಿಎಂ ಸಿದ್ದರಾಮಯ್ಯ, ಕೇಂದ್ರ ಸರ್ಕಾರ Corporate tax ನ್ನು ಶೇಕಡ 30 ರಿಂದ ಶೇಕಡ 20ಕ್ಕೆ ಇಳಿಸಿದ್ದು ನಿಜವಲ್ಲವೇ? ಎಂದು ಪ್ರಶ್ನೆ ಮಡಿದ್ದಾರೆ.

ಯಡಿಯೂರಪ್ಪನವರು 2008 ರಲ್ಲಿ ಮುಖ್ಯಮಂತ್ರಿ ಆಗಿದ್ದಾಗ ‘ಸಾಲ ಮನ್ನಾ ಮಾಡಲು ನೋಟ್ ಪ್ರಿಂಟ್ ಮಾಡುವ ಮಿಷನ್ ನಮ್ಮಲ್ಲಿ ಇಲ್ಲ’ ಎಂದಿರುವುದು ದಾಖಲೆಯಲ್ಲಿ ಇದೆ. ನಾನು ಮುಖ್ಯಮಂತ್ರಿ ಆಗಿರುವಾಗ 50 ಸಾವಿರದವರೆಗಿನ ಸೊಸೈಟಿ ಸಾಲ ಮನ್ನಾ ಮಾಡಿದ್ದೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು 72 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಿದ್ದರು. ಆದರೆ ನರೇಂದ್ರ ಮೋದಿಯವರು ರೈತರ ಸಾಲ ಮನ್ನಾ ಮಾಡಲಿಲ್ಲ. ನಮ್ಮ ಸರ್ಕಾರ ನುಡಿದಂತೆ ನಡೆದಿದೆ. ಗ್ಯಾರಂಟಿಗಳನ್ನು ವಿರೋಧಿಸಿದ ಬಿಜೆಪಿಯವರು ಮದ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ತಾನಗಳೂ ಸೇರಿದಂತೆ ಹಲವು ರಾಜ್ಯಗಳಲ್ಲಿ ನಮ್ಮ ಗ್ಯಾರಂಟಿಗಳನ್ನು ಕಾಪಿ ಮಾಡಿದರು ಎಂದು ಟೀಕಿಸಿದ್ದಾರೆ.

ಕಾಂಗ್ರೆಸ್ ಸರ್ಕಾರ ಜಾರಿ ಮಾಡಿರುವ ಐದು ಗ್ಯಾರಂಟಿಗಳನ್ನು ಬಡವರಿಗೆ ಸಾಮಾಜಿಕ, ಆರ್ಥಿಕವಾಗಿ ಶಕ್ತಿ ತುಂಬಿದ ಯೋಜನೆಗಳನ್ನು ಪ್ರತಿಪಕ್ಷಗಳು ಒಪ್ಪಿಕೊಳ್ಳಲಿ. ಬಿಜೆಪಿಯವರು ಸುಳ್ಳು ಭಾಷಣ ಮಾಡುವುದರಲ್ಲಿ ನಿಸ್ಸೀಮರು ಎಂದು ಎಲ್ಲರಿಗೂ ತಿಳಿದಿದೆ. ನಾನು ಉತ್ತರ ನೀಡುವಾಗ ಅಡ್ಡಿಪಡಿಸಿದರೆ, ನಾನು ಯಾರಿಗೂ ಹೆದರುವುದಿಲ್ಲ. ನಮ್ಮ ಸರ್ಕಾರದಲ್ಲಿ ಯಾವುದೇ ತಪ್ಪು ಹುಡುಕಲು ಸಾಧ್ಯವಿಲ್ಲ. ಆದ್ದರಿಂದ ಪ್ರತಿಪಕ್ಷಗಳು ಸುಳ್ಳು ಹೇಳುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳು ಶಕ್ತಿ ನೀಡುವುದಿಲ್ಲ ಎಂದು ವಿರೋಧ ಪಕ್ಷದ ನಾಯಕರು ಹೇಳಿದರು. ಶಕ್ತಿ ಯೋಜನೆಯಡಿ 409 ಕೋಟಿ ಜನ ಉಚಿತವಾಗಿ ಓಡಾದಿದ್ದಾರೆ. ಇದು ಮಹಿಳೆಯರಿಗೆ ಸಾಮಾಜಿಕ ಆರ್ಥಿಕ ಶಕ್ತಿ ನೀಡಿದ ಕಾರ್ಯಕ್ರಮ.

1.26 ಕೋಟಿ ಜನರಿಗೆ ಅನ್ನಭಾಗ್ಯದ ಅಡಿ 170 ಕೋಟಿ ರೂಪಾಯಿ ಹಣವನ್ನು ಡಿಬಿಟಿ ಮಾಡಲಾಗಿದೆ.4 ಕೋಟಿಗೂ ಹೆಚ್ಚು ಜನ ಗ್ಯಾರಂಟಿಗಳಿಂದ ಲಾಭ ಪಡೆದಿದ್ದಾರೆ. ಗೃಹಲಕ್ಷ್ಮಿ ಯೋಜನೆಯಿಂದ ಮಹಿಳೆಯರ ಜೀವನ ಸುಧಾರಿಸಿರುವ ಉದಾಹರಣೆಗಳಿವೆ. ಗೃಹಲಕ್ಷ್ಮಿಯ ಫಲಾನುಭವಿಯೊಬ್ಬರು, ಈ ಯೋಜನೆಯಿಂದ 10 ರಿಂದ 20 ಸಾವಿರ ಉಳಿಸಿ, ಇಡೀ ಊರಿಗೆ ಹೋಳಿಗೆ ಊಟ ಹಾಕಿಸಿ, ಸೊಸೆಗೆ ಬಳೆ ಅಂಗಡಿ ಇಟ್ಟುಕೊಟ್ಟಿದ್ದೇನೆ ಎಂದು ತಮ್ಮ ಸಂತಸವನ್ನು ವ್ಯಕ್ತಪಡಿಸಿದ್ದರು ಎಂದು ಜನರ ಅಭಿಪ್ರಾಯ ತಿಳಿಸಿದ್ದಾರೆ.