ಭಾರತ ಮತ್ತು ಪಾಕಿಸ್ತಾನ (India Pakistan war) ನಡುವಿನ ಯುದ್ಧ ನಿಲ್ಲಿಸಿದೆ..ರಷ್ಯಾ ಮತ್ತು ಇರಾನ್ (Russia vs Iran)ನಡುವಿನ ಯುದ್ಧ ನಿಲ್ಲಿಸಿದೆ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald trump),ಇದೀಗ ಮತ್ತೊಂದು ಯುದ್ದ ನಿಲ್ಲಿಸಿರೋದಾಗಿ ಘೋಷಣೆ ಮಾಡಿದ್ದಾರೆ.

ಇಸ್ರೇಲ್ ಮತ್ತು ಸಿರಿಯಾ (Israel vs syria) ನಡುವಿನ ಯುದ್ಧಕ್ಕೆ ಕದನಕ್ಕೆ ವಿರಾಮ ಹಾಡಲಾಗಿದ್ದು ಈ ಕದನ ವಿರಾಮಕ್ಕೆ ಎರಡು ದೇಶಗಳು ಒಪ್ಪಿಗೆ ಸೂಚಿಸಿವೆ ಎನ್ನಲಾಗಿದೆ. ಇಸ್ರೇಲ್ ದಾಳಿಗೆ ಸಿರಿಯಾದಲ್ಲಿ 300ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಆದ್ರೆ ಈಗ ಕದನ ವಿರಾಮಕ್ಕೆ ಉಭಯ ದೇಶಗಳು ಸಮ್ಮತಿ ಸೂಚಿಸಿವೆ ಎಂದು ಡಾ ಅಲ್ಡ್ ಟ್ರಂಪ್ ಹೇಳಿದ್ದಾರೆ. ಡೊನಾಲ್ಡ್ ಟ್ರಂಪ್ ತಮ್ಮ ಮಧ್ಯಸ್ಥಿಕೆಯಲ್ಲಿ ಇಸ್ರೇಲ್, ಸಿರಿಯಾ ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿವೆ ಎಂದು ಅಧಿಕೃತವಾಗಿ ಘೋಷಿಸಿದ್ದಾರೆ.

ಈ ಹಿಂದೆ ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ದ ನಿಲ್ಲಿಸಿರೋದಾಗಿ ಟ್ರಂಪ್ ಹೇಳಿಕೊಂಡಿದ್ದರು. ಇದಕ್ಕೂ ಮುನ್ನ ಭಾರತ ಪಾಕ್ ನಡುವಿನ ಯುದ್ದ ನಿಲ್ಲಿಸಿರೋದಾಗಿ ಟ್ರಂಪ್ ಹೇಳಿದ್ದರು.ಆದರೆ ಟ್ರಂಪ್ ಈ ಹೇಳಿಕೆಯನ್ನ ಭಾರತ ವಿರೋಧ ಮಾಡಿತ್ತು.