ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಸಂಘಟನೆಯ ಅಂಗ ಸಂಸ್ಥೆ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (CFI) ಸೇರುವಂತೆ ಗೋಡೆ ಬರಹಗಳನ್ನ ಬರೆದಿರುವ ಘಟನೆ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕಿನ ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಶಿರಾಳಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ 9ಕ್ಕು ಹೆಚ್ಚು ಕಡೆ ಗೋಡೆ ಬರಹಗಳನ್ನ ಬರೆಯಲಾಗಿದ್ದು ಗಸ್ತಿನಲ್ಲಿದ್ದ ಪೊಲೀಸರು ಇದನ್ನು ಕಂಡ ಕೂಡಲೇ ಅಳಿಸಿ ಹಾಕಿದ್ದಾರೆ.
ನವೆಂಬರ್ 28ರಂದು ಘಟನೆ ನಡೆದಿದ್ದು ಪೊಲೀಸರು ಸುಮೊಟೊ ಪ್ರಕರಣದ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.