ಏಷ್ಯನ್ ಗೇಮ್ಸ್ಗೆ ( Asian games ) ವಿನೇಶ್ ಪೋಗಟ್ ( vinesh phogat ) ಆಯ್ಕೆಯಾಗಿರುವುದಕ್ಕೆ ದೇಶದ ಇತರೇ ಅಥ್ಲೆಟಿಕ್ಸ್‌ಗಳಿಂದ ಆಕ್ರೋಶ ವ್ಯಕ್ತವಾಗುತ್ತಿದೆ., ವಿನೇಶ್ ಪೋಗಟ್ ಅವರನ್ನ ಯಾವ ಆಧಾರದ ಮೇಲೆ ಏಷ್ಯನ್ ಗೇಮ್ಸ್ ಆಯ್ಕೆ ಮಾಡಲಾಗಿದೆ? ಎಂದು ಕುಸ್ತಿಪಟು ಆಂಟಿಮ್ ಪಂಗಲ್ ( antim panghal ) ಅವರು ವಿನೇಶ್ ಪೋಗಟ್ ಅವರ ವಿರುದ್ಧ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.
ವಿನೇಶ್ ಅವರ ಅಯ್ಕೆ ಅನ್ಯಾಯದ ಆಯ್ಕೆ ಎಂದು ಹರಿಯಾಣದ ( Hariyana ) ಹಿಸಾರ್‍ನಿಂದ ಬಂದಿರುವ ಮತ್ತು 53 ಕೆಜಿಯಲ್ಲಿ ಸ್ರ್ಪಧಿಸುತ್ತಿರುವ 19 ವರ್ಷದ ಪಂಗಲ್ ಅವರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದು, ಅವರ ವಿರುದ್ಧ ಹಲವು ಪ್ರಶ್ನೆಗಳನ್ನ ಕೂಡ ಎತ್ತಿಹಿಡಿಯುವ ಕೆಲಸಕ್ಕೆ ಮುಂದಾಗಿದ್ದಾರೆ.

ಅದರಲ್ಲೂ ಪ್ರಮುಖವಾಗಿ ದೀರ್ಘಕಾಲ ಅಭ್ಯಾಸ ( practice ) ಮಾಡದೆ ಇರುವಾಗ ವಿನೇಶ್ ಫೋಗಟ್‍ಗೆ ನೀಡಲಾದ ಏಷ್ಯನ್ ಗೇಮ್ಸ ಟ್ರಯಲ್ಸ ( asian games trials ) ವಿನಾಯಿತಿಯನ್ನು 20 ವರ್ಷದೊಳಗಿನವರ ವಿಶ್ವ ಚಾಂಪಿಯನ್ ಆಂಟಿಮ್ ಪಂಗಲ್ ಪ್ರಶ್ನಿಸಿದ್ದು ಈ ಕುರಿತ ವಿಡಿಯೋ ಕೂಡ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಕೇವಲ ಇಷ್ಟು ಮಾತ್ರವಲ್ಲದೆ ಇತರ ಅನೇಕ ಭಾರತೀಯ ಕುಸ್ತಿಪಟುಗಳು 53 ಕೆಜಿ ವಿಭಾಗದಲ್ಲಿ ವಿಶ್ವ ಪ್ರಸಿದ್ದ ಕುಸ್ತಿ ಪಟುಗಳನ್ನ ಸೋಲಿಸಲು ಸಮರ್ಥರಾಗಿದ್ದಾರೆ, ಆದರೆ ಅವರಿಗೆ ಬಹುಪಾಲು ಅವಕಾಶಗಳು ಕೂಡ ದೊರೆಯುವುದಿಲ್ಲ, ಅದರಲ್ಲೂ ಭಾರತದ ಕ್ರೀಡಾ ಇಲಾಖೆಯಲ್ಲಿ ಬಹುದೊಡ್ಡ ರಾಜಕೀಯವೇ ನಡೆಯುತ್ತಿದೆ ಎಂದು ಕ್ರೀಡಾಪಟುಗಳ ಬೆಂಬಲಿಗರ ಆರೋಪವಾಗಿದೆ. ವಿನೇಶ್ (53 ಕೆಜಿ) ಮತ್ತು ಬಜರಂಗ್ ಪುನಿಯಾ (65 ಕೆಜಿ) ಅವರಿಗೆ ಭಾರತೀಯ ಒಲಿಂಪಿಕ್ ಅಸೋಸಿಯೇಷನ್‍ನ ತಾತ್ಕಾಲಿಕ ಸಮಿತಿಯು ಏಷ್ಯನ್ ಗೇಮ್ಸ್ಗೆ ನೇರ ಪ್ರವೇಶವನ್ನು ನೀಡಿದ್ದು, ಇತರ ಕುಸ್ತಿಪಟುಗಳು ಜುಲೈ 22 ಮತ್ತು 23 ರಂದು ಆಯ್ಕೆ ಟ್ರಯಲ್ಸ ಮೂಲಕ ಭಾರತೀಯ ತಂಡದಲ್ಲಿ ತಮ್ಮ ಸ್ಥಾನಗಳನ್ನು ಖಚಿತ ಪಡಿಸಿಕೊಳ್ಳಲು ಕಾಯಬೇಕಾಗಿದೆ.

ಸೀನಿಯರ್ ಏಷ್ಯನ್ ಚಾಂಪಿಯನ್‍ಶಿಪ್‍ನಲ್ಲಿ ಬೆಳ್ಳಿ ಪದಕ ವಿಜೇತರಾಗಿರುವ ಪಂಗಲ್ ಅವರು ವೀಡಿಯೊ ಮೂಲಕ ವಿನಾಯಿತಿಯ ಮಾನದಂಡವನ್ನು ಪ್ರಶ್ನಿಸಿದ್ದಾರೆ. ಇದರಿಂದ ಭಾರತೀಯ ಕ್ರೀಡಾ ಇಲಾಖೆ ಬಹುದೊಡ್ಡ ಸಂಕಷ್ಟಕ್ಕೆ ಕೂಡ ಸಿಲುಕಿಕೊಂಡಿದೆ.
ವಿನೇಶ್ ಫೋಗಟ್ ಅವರು ಏಷ್ಯನ್ ಗೇಮ್ಸ್ಗೆ ನೇರ ಪ್ರವೇಶ ಪಡೆದಿದ್ದು, ಅವರು ಕಳೆದ ಒಂದು ವರ್ಷದಲ್ಲಿ ಯಾವುದೇ ಅಭ್ಯಾಸವನ್ನು ಮಾಡಿಲ್ಲ. ಕಳೆದ ಒಂದು ವರ್ಷದಲ್ಲಿ ಅವರು ಯಾವುದೇ ಸಾಧನೆ ಮಾಡಿಲ್ಲ ಎಂದು ಪಂಗಲ್ ವೀಡಿಯೊದಲ್ಲಿ ಹೇಳಿದ್ದು ಈ ವಿಚಾರ ಎಲ್ಲೆಡೆ ಭಾರೀ ಸದ್ದು ಮಾಡುತ್ತಿದೆ.