
ಬಿಜೆಪಿ ಸಂಸದ ಡಾ ಕೆ ಸುಧಾಕರ್ ವಿಜಯೇಂದ್ರ ವಿರುದ್ಧ ವಾಗ್ದಾಳಿ ಬೆನ್ನಲ್ಲೇ ವಿಜಯೇಂದ್ರ ಪ್ರತಿಕ್ರಿಯೆ ನೀಡಿದ್ದು, ರಾಜ್ಯದ ಅಧ್ಯಕ್ಷ ಆಗಿ ನಾನು ಯಾವುದೇ ಜಿಲ್ಲೆಗೆ ಜಿಲ್ಲಾಧ್ಯಕ್ಷರ ಆಯ್ಕೆಯಲ್ಲಿ ಅಭಿಪ್ರಾಯ ಕೊಟ್ಟಿಲ್ಲ, ನಾನು ಅಭಿಪ್ರಾಯ ಕೊಡಲು ಸಾಧ್ಯವೂ ಇಲ್ಲ ಎಂದಿದ್ದಾರೆ.
ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಚುನಾವಣಾಧಿಕಾರಿ ಆಗಿದ್ರು. ಅವರ ಜೊತೆಗೆ 13 ಜನ ವೀಕ್ಷಕರು ಇದ್ರು. ಇಷ್ಟೂ ಜನ ಜಿಲ್ಲೆಯಲ್ಲಿ ಎಲ್ಲರನ್ನು ವಿಶ್ವಾಸಕ್ಕೆ ತಗೊಂಡು ಜಿಲ್ಲೆಗೆ ತಲಾ ಮೂರು ಹೆಸರನ್ನು ಅಂತಿಮ ಮಾಡಿ ಹೈಕಮಾಂಡ್‌ಗೆ ಕಳಿಸಿಕೊಟ್ಟಿದ್ರು. ಜಿಲ್ಲಾಧ್ಯಕ್ಷರ ಆಯ್ಕೆಯಲ್ಲಿ ನನ್ನ ಪಾತ್ರ ಏನೂ ಇಲ್ಲ, ಶೂನ್ಯ ಎಂದಿದ್ದಾರೆ.
ನನ್ನ ಜಿಲ್ಲೆಗೆ ನಾನು ಅಭಿಪ್ರಾಯ ಕೊಡಬಹುದೇ ಹೊರತು, ಬೇರೆ ಜಿಲ್ಲೆಗೆ ಅಭಿಪ್ರಾಯ ಕೊಡುವ ಅಧಿಕಾರ ನನಗೆ ಇಲ್ಲ. ಸುಧಾಕರ್ ಅವರಿಗೆ ಇದನ್ನು ಹೇಳಲು ಇಷ್ಟಪಡ್ತೇನೆ. ವಿಜಯೇಂದ್ರ ನನ್ನನ್ನು ರಾಜಕೀಯ ಸಮಾಧಿ ಮಾಡಲು ಹೊರಟಿದ್ದಾರೆ ಅಂತ ಸುಧಾಕರ್ ಹೇಳಿದ್ದಾರೆ. ಸುಧಾಕರ್ ಅವರು ಹಿರಿಯರು ಹೀಗೆಲ್ಲ ಮಾತಾಡಬಾರದು ಎಂದು ಮನವಿ ಮಾಡಿದ್ದಾರೆ.

ಸುಧಾಕರ್ ಹಗುರವಾಗಿ ಮಾತಾಡಬಾರದು, ಅದು ಅವರಿಗೆ ಶೋಭೆ ತರಲ್ಲ ಎಂದಿರುವ ವಿಜಯೇಂದ್ರ, ಸುಧಾಕರ್ ಅವರು ಹಾಗೆಲ್ಲ ಮಾತಾಡಬಾರದು ಅಂತ ಆಗ್ರಹ ಮಾಡಲ್ಲ, ಮನವಿ ಮಾಡ್ತೇನೆ ಎಂದಿರುವ ವಿಜಯೇಂದ್ರ, ನಾನು ಸುಧಾಕರ್ ಅವರನ್ನೂ ಭೇಟಿ ಮಾಡ್ತೇನೆ. ನನ್ನ ಮೇಲೆ ಸುಧಾಕರ್ ಆರೋಪ ಮಾಡೋದು ಸರಿಯಲ್ಲ. ಸುಧಾಕರ್ ಅನ್ಯಥಾ ಭಾವಿಸಬಾರದು, ತಪ್ಪು ತಿಳ್ಕೋಬಾರದು. ನನ್ನ ಪಾತ್ರ ಏನೂ ಇಲ್ಲ ಎಂದಿದ್ದಾರೆ.

ಸುಧಾಕರ್ ಆಕ್ರೋಶದಿಂದ ಮಾತಾಡಿದ್ದಾರೆ. ಅವರು ಹಾಗೆಲ್ಲ ಮಾತಾಡೋದು ಅವರಿಗೂ ಗೌರವ ಕೊಡಲ್ಲ, ಪಕ್ಷಕ್ಕೂ ಗೌರವ ಸಿಗಲ್ಲ. ಸುಧಾಕರ್ ಆಥರ ಎಲ್ಲ ಮಾತಾಡಬಾರದು. ಪಕ್ಷ ನನ್ನ ಸ್ವತ್ತೂ ಅಲ್ಲ, ಅವರ ಸ್ವತ್ತೂ ಅಲ್ಲ. ಮುಂದಿನ ಸಿಎಂ ಆಗಲು ನಾನು ಪಕ್ಷ ಸಂಘಟನೆ ಮಾಡ್ತಿಲ್ಲ. ಸುಧಾಕರ್ ಹಾಗೆಲ್ಲ ಮಾತಾಡಬಾರದು. ಸುಧಾಕರ್ ಜಿಲ್ಲೆಯಲ್ಲಿ ಗೆದ್ದಿರೋದು ಒಬ್ಬ ಬಿಜೆಪಿ ಕಾರ್ಯಕರ್ತರೇ, ಅವರು ಸುಧಾಕರ್ ಸಂಬಂಧಿಯೂ ಹೌದು. ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷರ ಆಯ್ಕೆಯಲ್ಲಿ ನನ್ನ ಪಾತ್ರ ಇಲ್ಲ. ಯಾವ ಜಿಲ್ಲೆಯಲ್ಲೂ ನನ್ನ ಪಾತ್ರ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.