ಭಾರತೀಯ ಸಿನಿಮಾ ರಂಗದ ಅತ್ಯುನ್ನತ ಪ್ರಶಸ್ತಿಯಾದ ಹಿರಿಯ ನಟಿ ಆಶಾ ಪರೇಖ್ ಗೆ 2020ನೇ ಸಾಲಿನ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಪಾತ್ರರಾಗಲಿದ್ದಾರೆ.
ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಅನುರಾಗ್ ಠಾಕೂರ್ ಮಂಗಳವಾರ ಈ ವಿಷಯ ತಿಳಿಸಿದ್ದು, 79 ವರ್ಷದ ಹಿರಿಯ ನಟಿ ಆಶಾ ಪರೇಖ್ ಅವರಿಗೆ 2020ನೇ ಸಾಲಿ ಫಾಲ್ಕೆ ಪ್ರಶಸ್ತಿಗೆ ಆಯ್ಕೆ ಮಾಡಲು ಚಿಂತನೆ ನಡೆದಿದೆ ಎಂದು ತಿಳಿಸಿದ್ದಾರೆ.
ದಿಲ್ ದೇಖೆ ದೇಖೋ, ಕಟಿ ಪತಂಗ್, ತೀಸ್ರಿ ಮನ್ಸಿಲ್, ಕಾರ್ವನ್ ಸೇರಿದಂತೆ ಹಲವು ಸೂಪರ್ ಹಿಟ್ ಚಿತ್ರಗಳಲ್ಲಿ ಆಶಾ ಪರೇಖ್ ನಟಿಸಿದ್ದರು. ಅಲ್ಲದೇ 1990ರಲ್ಲಿ ಟೀವಿ ಧಾರವಾಹಿ ಕೋರಾ ಕಾಗಜ್ ಧಾರವಾಹಿಯನ್ನು ನಿರ್ಮಿಸಿದ್ದರು.
2019ನೇ ಸಾಲಿನ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ನೀಡಿ ಗೌರವಿಸಲಾಗಿತ್ತು.