ಇನ್ನು ತಡರಾತ್ರಿ ನಡೆದ ಇರಾನ್ (Iran) ಮೇಲಿನ ಪರಮಾಣು ಸ್ಥಾವರಗಳ (Nuclear plant) ಮೇಲೆ ದಾಳಿ ನಡೆದಿದೆ ಅಂತ ಇರಾನ್‌ನ ಇಸ್ಪಹಾನ್ ಪ್ರಾಂತ್ಯದ ಭದ್ರತಾ ಉಪ ಗವರ್ನರ್ ಅಕ್ಟರ್ ಸಲೇಹಿ ಹೇಳಿದ್ದಾರೆ. ನಟಾಂಜ್ ಮತ್ತು ಇಸ್ಪಹಾನ್‌ನಲ್ಲಿ ಹಲವಾರು ಸ್ಪೋಟಗಳು ಕೇಳಿಸಿವೆ ಎಂದು ಸ್ಪಷ್ಟಪಡಿಸಿದ್ದಾರೆ.

ಆದ್ರೆ ಈ ಮೂರು ಪರಮಾಣು ತಾಣಗಳಲ್ಲಿ ವಿಕಿರಣಕ್ಕೆ ಕಾರಣವಾಗುವ ಯಾವುದೇ ವಸ್ತುಗಳು ಇಲ್ಲ ಅಂತ ಹೇಳಿದ್ದಾರೆ.ಅಲ್ಲದೆ, ದಾಳಿಗೂ ಮುಂಚೆನೇ ಪರಮಾಣು ಸಾಮಗ್ರಿಗಳನ್ನು ಸ್ಥಳಾಂತರಿಸಲಾಗಿದೆ ಅಂತ ಮಾಹಿತಿ ನೀಡಿದ್ದಾರೆ.
ಇನ್ನು ಮತ್ತೊಂದೆಡೆ ಇರಾನ್ ಮೇಲಿನ ಅಮೆರಿಕದ ದಾಳಿಗೆ ಇಸ್ರೇಲ್ ಪ್ರತಿಕ್ರಿಯಿಸಿದೆ.ಇಸ್ರೇಲ್ ಪ್ರಧಾನಿ ನೆತನ್ಯಾಹು,ಟ್ರಂಪ್‌ಗೆ ಧನ್ಯವಾದ ತಿಳಿಸಿದ್ದಾರೆ.ನಾನು ಮತ್ತು ಇಸ್ರೇಲ್ ಜನರು ನಿಮಗೆ ಧನ್ಯವಾದ ಹೇಳಲು ಬಯಸುತ್ತೇವೆ.ಟ್ರಂಪ್ ಅವರ ನಾಯಕತ್ವ ಇತಿಹಾಸದ ತಿರುವು ಸೃಷ್ಟಿಸಿದೆ ಅಂತ ಬಣ್ಣಿಸಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಈ ನಿರ್ಧಾರ, ಮಧ್ಯಪ್ರಾಚ್ಯ ಮತ್ತು ಅದರಾಚೆಗೆ, ಭವಿಷ್ಯದಲ್ಲಿ ಶಾಂತಿ ಕಾಪಾಡಿಕೊಳ್ಳಲು ಸಹಾಯ ಆಗಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.











