ಕಳೆದ ಕೆಲ ದಿನಗಳಿಂದ ಕ್ರಿಕೆಟಿಗ ರಿಷಭ್ ಪಂತ್ ಜೊತೆಗಿನ ವಾಗ್ವಾದದಿಂದ ಸುದ್ದಿಯಲ್ಲಿರುವ ನಟಿ ಉರ್ವಶಿ ರೌಟೆಲಾ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ಡಿ ಬಾಸ್ ದರ್ಶನ್ ಅಭಿನಯದ ಐರಾವತ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ್ದ ಊರ್ವಶಿ ನಂತರದ ದಿನಗಳಲ್ಲಿ ಬಾಲಿವುಡ್ನ್ಲಿ ಸಾಕಷ್ಟು ಸದ್ದು ಮಾಡಿದ್ದರು.
ಇದೀಗ ಈ ನಟಿ ಒಂದು ಟ್ವೀಟ್ ಮಾಡುವ ಮೂಲಕ ಅಭಿಮಾನಿಗಳಿಂದ ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ಚಾಲೆಂಜಿಂಗ್ ಸ್ಟಾರ್ ಹುಟ್ಟುಹಬ್ಬಕ್ಕೆ ಶುಭ ಕೋರುವ ಮೂಲಕ ನಟಿ ಸುದ್ದಿಯಲಿದ್ದಾರೆ ಅದು ಆಗಸ್ಟ್ ತಿಂಗಳಲ್ಲಿ.
ನಟ ದರ್ಶನ್ ಜನುಮದಿನ ಆಚರಿಸಿಕೊಳ್ಳುವುದು ಫೆಬ್ರವರಿ 16ರಂದು ಆದರೆ, ನಟಿ ಆಗಸ್ಟ್ 29ರಂದು ಶುಭಕೋರುವ ಮೂಲಕ ಟೀಕೆಗೆ ಗುರಿಯಾಗಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ನೆಟ್ಟಿಗರು ನಟಿಯನ್ನು ಅಪಹಾಸ್ಯ(ಟ್ರೋಲ್) ಮಾಡಿ ಕಮೆಂಟ್ಗಳನ್ನು ಹಾಕಿದ್ದಾರೆ.