ಸಂಸತ್ ಅಧಿವೇಶನವು ಜನವರಿ 31ರಂದು ಶುರುವಾಗಲಿದ್ದು ಏಪ್ರಿಲ್ 8ರಂದು ಮುಕ್ತಾಯವಾಗಲಿದೆ. ಬಜೆಟ್ ಅಧಿವೇಶನದ ಮೊದಲಾರ್ಧವು ಜನವರಿ 31ರಿಂದ-ಫೆಬ್ರವರಿ 11ರವರೆಗೆ ನಡೆಯುತ್ತದೆ. ದ್ವಿತಿಯಾರ್ಧವು ಮಾರ್ಚ್ 14ಕ್ಕೆ ಪ್ರಾರಂಭವಾಗಿ ಏಪ್ರಿಲ್ 8ರರಂದು ಕೊನೆಗೊಳ್ಳಲಿದೆ.
ಜನವರಿ 31ರಂದು ರಾಷ್ಟ್ರಪತಿಗಳು ಜಂಟಿ ಸದನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಫೆಬ್ರವರಿ 1ರಂದು 2022-23ನೇ ಸಾಲಿನ ಬಜೆಟ್ಅನ್ನು ಕೇಂದ್ರ ಸರ್ಕಾರ ಮಂಡಿಸಲಿದೆ.