ಜಮ್ಮು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ಭಾನುವಾರ ಲಷ್ಕರ್-ಎ-ತೋಯ್ಬಾ(LET) ಸಂಘಟನೆಯ ಇಬ್ಬರು ಉಗ್ರರನ್ನು ಗ್ರಾಮಸ್ಥರೆ ಸೆರೆ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಸದ್ಯ ಸೆರೆ ಸಿಕ್ಕಿರುವ ಉಗ್ರರು ಪೊಲೀಸರ ಹಿಟ್‌ಲಿಸ್ಟ್‌ನಲ್ಲಿದ್ದರು ಎಂದು ತಿಳಿದು ಬಂದಿದೆ. ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಜೌರಿ ಜಿಲ್ಲೆಯ ನಿವಾಸಿ ತಾಲಿಬ್ ಹುಸೇನ್ ಮತ್ತು ಪುಲ್ವಾಮಾ ಜಿಲ್ಲೆಯ ಫಝಲ್ ಅಹ್ಮದ್ ದಾರ್ ತುಕ್ಸಾನ್ ಗ್ರಾಮದಲ್ಲಿ ಸೆರೆಸಿಕ್ಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸದ್ಯ ಸೆರೆಸಿಕ್ಕಿರುವ ಉಗ್ರರಿಂದ ಎರಡು ಎ.ಕೆ.ಅಸಾಲ್ಟ್ ರೈಫಲ್ಗಳು, ಏಳು ಗ್ರೆನೇಡ್ ಹಾಗು ಪಿಸ್ತೂಲ್ನನ್ನು ವಶಕ್ಕೆ ಪಡೆಯಲಾಗಿದೆ.