ಭಾರತದಲ್ಲಿ ಕರೋನಾ ವೈರಸ್ ನ ಟ್ರಿಪಲ್ ಮ್ಯೂಟಂಟ್ ಪತ್ತೆ :ವಿಜ್ಞಾನಿ ವಿನೋದ್ ಸ್ಕರಿಯಾ

[Sassy_Social_Share]

ಬುಧವಾರ ನವದೆಹಲಿಯ ‘ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ ಇನ್ಸ್ಟಿಟ್ಯೂಟ್ ಆಫ್ ಜೀನೋಮಿಕ್ ಅಂಡ್ ಇಂಟಿಗ್ರೇಟಿವ್ ಬಯಾಲಜಿ (ಸಿಎಸ್ಐಆರ್‌ಐಜಿಐಬಿ) ಯ ವಿಜ್ಞಾನಿ ವಿನೋದ್ ಸ್ಕರಿಯಾ ಅವರು ಹೊಸ ರೂಪಾಂತರಿತ ವಿಶಿಷ್ಟವಾದ ಆನುವಂಶಿಕ ಗುಂಪಿನೊಂದಿಗೆ ರೋಗನಿರೋಧಕಗಳಿಂದ ಪಾರಾಗುವ ರೂಪಾಂತರಿ ಕರೋನವೈರಸ್ ಪತ್ತೆಯಾಗಿರುವುದರ ಬಗ್ಗೆ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ‌. ಹೊಸ ರೂಪಾಂತರಿ ವೈರಸನ್ನು ಬಿ.1.618 ಎಂದು‌ ಗುರುತಿಸಲಾಗಿದ್ದು ಆರಂಭಿಕ ಹಂತದಲ್ಲಿ ಪಶ್ಚಿಮ ಬಂಗಾಳದಲ್ಲಿ ಕಂಡು ಬಂದಿದೆ.

ದೆಹಲಿ, ಮಹಾರಾಷ್ಟ್ರ ಮತ್ತು ಇತರ ಕೆಲವು ಸ್ಥಳಗಳಲ್ಲಿ ವ್ಯಾಪಕವಾಗಿ ಹೊಸ “ಡಬಲ್ ಮ್ಯೂಟಂಟ್” ಬಿ.1.617 ಪತ್ತೆಯಾದ ಬೆನ್ನಲ್ಲೇ ಈ ಪ್ರಕಟಣೆ ಬಂದಿದೆ. ಡಬಲ್ ಮ್ಯೂಟಂಟ್ ವೈರಸ್ ಹೆಚ್ಚಿನ ಪ್ರಸಾರ ಮತ್ತು ನಿರೋಧಕ ಪ್ರಕ್ರಿಯೆಯನ್ನು ಬೈಪಾಸ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ವರದಿಯಾಗಿದೆ.

ಡಬಲ್ ಮ್ಯೂಟಂಟ್ ಭಾರತದಲ್ಲಿ ಪ್ಯಾಥೋಜನ್ (pathogen)ನ ಸ್ಪೈಕ್ ಪ್ರೊಟೀನ್ ಭಾಗದಲ್ಲಿ E484Q ಮತ್ತು L452R ರೂಪಾಂತರಗಳನ್ನು ಹೊಂದಿತ್ತು. ಈ ಎರಡೂ ರೂಪಾಂತರಗಳು ಹೆಚ್ಚಿನ ಬೈಂಡಿಂಗ್ ಸಾಮರ್ಥ್ಯ ಮತ್ತು‌ ರೋಗನಿರೋಧಕಗಳನ್ನು ಪ್ರತಿರೋಧಿಸುವ ಸಾಮರ್ಥ್ಯ ಹೊಂದಿವೆ.

ಸ್ಕೇರಿಯಾ ಅವರು ತನ್ನ ಟ್ವಿಟರ್ ಥ್ರೆಡ್ ‌ನಲ್ಲಿ ಹೊಸ ಸ್ಟ್ರೈನ್ ಎರಡು ಅಮೈನೊ ಆಮ್ಲಗಳಾದ H146del Y145del ಡಿಲೀಷನ್‌ನಿಂದ ಉಂಟಾಗುತ್ತದೆ ಮತ್ತು ಇದು ಸ್ಪೈಕ್ ಪ್ರೊಟೀನ್ ಭಾಗದಲ್ಲಿ E484k D614G ರೂಪಾಂತರಗಳನ್ನು ಹೊದಿರುತ್ತದೆ. ಅವರ ಪ್ರಕಾರ ಅಮೈನೋ ಆಮ್ಲದಲ್ಲಿನ ಬದಲಾವಣೆಗಳು ಸಾಂಕ್ರಾಮಿಕದ ಸಾಮರ್ಥ್ಯವನ್ನು ಹೆಚ್ಚಿಸಲು ನೆರವಾಗುತ್ತದೆ.

ತಜ್ಞರೊಂದಿಗೆ ಮಾತನಾಡಿದ ಎನ್‌ಡಿಟಿವಿ ಹೊಸ ರೂಪಾಂತರವನ್ನು “ಟ್ರಿಪಲ್ ಮ್ಯೂಟಂಟ್” ಎಂದು ಬಣ್ಣಿಸಿದೆ, ಇದರರ್ಥ ಮೂರು ವಿಭಿನ್ನ ಕೋವಿಡ್ ತಳಿಗಳು ಸೇರಿ ಹೊಸ ರೂಪಾಂತರವನ್ನು ರೂಪಿಸುತ್ತವೆ. “ಇದು ಹೆಚ್ಚು ಹರಡುವ ರೂಪಾಂತರವಾಗಿದೆ, ಇದು ಸಾಕಷ್ಟು ಜನರನ್ನು ಶೀಘ್ರವಾಗಿ ರೋಗಿಗಳನ್ನಾಗಿ ಮಾಡುತ್ತಿದೆ” ಎಂದು ಮೆಕ್‌ಗಿಲ್ ವಿಶ್ವವಿದ್ಯಾಲಯದ ಸಾಂಕ್ರಾಮಿಕ ರೋಗಶಾಸ್ತ್ರದ ಪ್ರಾಧ್ಯಾಪಕ ಮಧುಕರ್ ಪೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. “ನಾವು ಟ್ವೀಕಿಂಗ್ ಲಸಿಕೆಗಳನ್ನು ಇಟ್ಟುಕೊಳ್ಳಬೇಕು. ಅದಕ್ಕಾಗಿ ನಾವು ರೋಗವನ್ನು ಅರ್ಥಮಾಡಿಕೊಳ್ಳಬೇಕು. ಆದರೆ ಯುದ್ಧೋಪಾದಿಯಲ್ಲಿ ಕಾರ್ಯ ನಿರ್ವಹಿಸಬೇಕಾಗುತ್ತದೆ” ಎಂದು ಅವರು ಹೇಳಿದ್ದಾರೆ.

ಮಹಾರಾಷ್ಟ್ರ, ದೆಹಲಿ, ಪಶ್ಚಿಮ ಬಂಗಾಳಗಳಲ್ಲಿ ಸಂಗ್ರಹಿಸಿರುವ ಸ್ಯಾಂಪಲ್‌ಗಳಲ್ಲಿ ಟ್ರಿಪಲ್ ವೇರಿಯಂಟ್ ಕಂಡು ಬಂದಿದೆ ಎಂದು ಸ್ಕೇರಿಯಾ ತಿಳಿಸಿದ್ದಾರೆ.

ಕಳೆದ ವಾರ ಹೇಳಿಕೆ ಬಿಡುಗಡೆ ಮಾಡಿದ ಆರೋಗ್ಯ ಸಚಿವಾಲಯವು “ಈ ರೂಪಾಂತರಗಳು ಹೆಚ್ಚಿನ ಪ್ರಸರಣವನ್ನು ಹೊಂದಿವೆ. ಯುಕೆ ರೂಪಾಂತರವು ಇಂಗ್ಲಡ್ ಮತ್ತು ಯುರೋಪಿನಾದ್ಯಂತ ವ್ಯಾಪಕವಾಗಿ ಕಂಡುಬಂದಿದೆ ಮತ್ತು ನಂತರ ಇದು ಏಷ್ಯಾ ಮತ್ತು ಅಮೆರಿಕಕ್ಕೆ ಹರಡಿತು. ಡಬಲ್ ಮ್ಯುಟೇಷನ್ ಆಸ್ಟ್ರೇಲಿಯಾ, ಬೆಲ್ಜಿಯಂ, ಜರ್ಮನಿ, ಐರ್ಲೆಂಡ್, ನಮೀಬಿಯಾ, ನ್ಯೂಜಿಲೆಂಡ್, ಸಿಂಗಾಪುರ್, ಯುನೈಟೆಡ್ ಕಿಂಗ್‌ಡಮ್, ಯುಎಸ್ಎ ಮುಂತಾದ ಹಲವಾರು ದೇಶಗಳಲ್ಲಿ ಕಂಡುಬಂದಿದೆ” ಎಂದು ತಿಳಿಸಿದೆ.

Related posts

Latest posts

ವಿದ್ಯಾವಂತ ನಿರುದ್ಯೋಗಿ ಪದವೀಧರರ ಬದುಕಿಗೆ ಆಸರೆ -ನರೇಗಾ

ಕರೊನಾ ಮಹಾಮಾರಿ ಮಹಾನಗರಗಳಲ್ಲಿ ಹೆಚ್ಚುತ್ತಿರುವುದರಿಂದ ಮತ್ತು ಸೋಂಕು ತಡೆಗಾಗಿ ಸರ್ಕಾರ ಕಪ್ರ್ಯೂ ಜಾರಿಗೊಳಿಸಿದ್ದರಿಂದ ತಮ್ಮ ಹಳ್ಳಿಗಳತ್ತ ವಲಸೆ ಬರುತ್ತಿರುವ ಯುವಕರಿಗೆ ನರೇಗಾ ಕೆಲಸ ಬದುಕಿಗೆ ಆಸರೆಯಾಗಿದೆ. ಪ್ರತಿ ವರ್ಷ ಬೇಸಿಗೆ ಹಂಗಾಮಿನಲ್ಲಿ ಗ್ರಾಮೀಣ ಪ್ರದೇಶಗಳ...

ಮೈಸೂರು, ಚಾಮರಾಜನಗರ ಡಿಸಿ ಕಚೇರಿ, ಆಸ್ಪತ್ರೆಯ ಎಲ್ಲ ದಾಖಲೆ ಜಪ್ತಿ: ಹೈಕೋರ್ಟ್ ಆದೇಶ

ಕರೋನಾ ಸಂದರ್ಭದಲ್ಲಿ ರಾಷ್ಟ್ರದ ನಾನಾ ಸರಕಾರಗಳ ನಿಷ್ಕ್ರಿಯತೆಗಳ ಬಗ್ಗೆ ಚಾಟಿ ಬೀಸುತ್ತಿರುವ ದೇಶದ ನ್ಯಾಯಾಲಯಗಳ ಸಾಲಿಗೆ ರಾಜ್ಯದ ಹೈಕೋರ್ಟ್ ಕೂಡ ಸೇರ್ಪಡೆಗೊಂಡಿದ್ದು, ಚಾಮರಾಜನಗರ ಕೋವಿಡ್ ಆಸ್ಪತ್ರೆಯಲ್ಲಿ ಇತ್ತೀಚೆಗೆ ಆಮ್ಲಜನಕದ ಕೊರತೆಯಿಂದ ರೋಗಿಗಳು ಮೃತರಾಗಿರುವ...

ಚಾಮರಾಜನಗರ ಆಕ್ಸಿಜನ್ ‌ದುರಂತ ಮರೆ ಮಾಚಲು ಬೆಡ್ ಬ್ಲಾಕಿಂಗ್ ನಾಟಕ‌ – ಹೆಚ್‌ಡಿ ಕುಮಾರಸ್ವಾಮಿ

ಚಾಮರಾಜನಗರ ಘಟನೆ ಮರೆಮಾಚಲು ಬೆಡ್ ಬ್ಲಾಕಿಂಗ್ ದಂಧೆ ಎಂದು ನಾಟಕ ಆರಂಭಿಸಿದ್ದಾರೆ. ಇದೊಂದು ಜನರನ್ನು ಹಾದಿ ತಪ್ಪಿಸುವ ಪರ್ಯಾಯ ಮಾರ್ಗ ಅಷ್ಟೇ ಎಂದು ಮಾಜಿ ಸಿ ಎಂ ಹೆಚ್ ಡಿ ಕುಮಾರಸ್ವಾಮಿ ಬಿಜೆಪಿ...