ಟಿಪ್ಪು ಒಬ್ಬ ನರಹಂತಕ , ಜನರನ್ನು ಬಲವಂತವಾಗಿ ಮತಾಂತರ ಮಾಡಿದ ಅಧರ್ಮಿ, ಸಾವರ್ಕರ್ ಒಬ್ಬ ಮಹಾನ್ ದೇಶಭಕ್ತ ಎನ್ನುವ ಮೂಲಕ ಟಿಪ್ಪು ಬ್ಯಾನರ್ ಹರಿದು ಹಾಕಿದ ಘಟನೆಯನ್ನು ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಸಮರ್ಥಿಸಿಕೊಂಡಿದ್ದಾರೆ.
ರಾಮನಗರದಲ್ಲಿ ಧ್ವಜಾರೋಹಣ ನೇರವೇರಿಸಿ ನಂತರ ಮಾತನಾಡಿದ ಅವರು, ಎಲ್ಲ ಜಾತಿ, ಭಾಷಿಗರ ಧರ್ಮವನ್ನು ನಾವು ಗೌರವಿಸುತ್ತೆವೆ. ಟಿಪ್ಪುವನ್ನು ಮೀರಿದ ಕೋಟ್ಯಂತರ ಸಜ್ಜನರು ಇದ್ದಾರೆ. ಟಿಪ್ಪು ನಡೆಸಿದ ಕ್ರೌರ್ಯ, ನರಹತ್ಯೆ, ಬಲವಂತದ ಮತಾಂತರ ನಮ್ಮ ಮುಂದಿರುವ ಇತಿಹಾಸ. ಇದನ್ನೇ ನಾವು ಒಪ್ಪಿ ಸುಮ್ಮನೆ ಕುಳಿತುಕೊಳ್ಳಬೇಕಾ ಅಥವಾ ಹಿಂದಿನ ತಪ್ಪನ್ನು ತಿದ್ದಿಕೊಳ್ಳಬಾರದ? ಧರ್ಮದ ದೃಷ್ಟಿಕೋನ ಎನ್ನುವುದಕ್ಕಿಂತ ಇತಿಹಾಸದ ಸತ್ಯಾಸತ್ಯತೆ ತಿಳಿದುಕೊಳ್ಳುವುದು ಮುಖ್ಯ ಎನ್ನುವ ಮೂಲಕ ಟಿಪ್ಪು ಭಾವಚಿತ್ರವನ್ನು ಹರಿದುಹಾಕಿದನ್ನು ಸಮರ್ಥಿಸಿಕೊಂಡಿದ್ದಾರೆ.
ಟಿಪ್ಪು ಸ್ವಾತಂತ್ರ್ಯ ಹೋರಾಟಗಾರ ಎನ್ನಲು ಹೇಗೆ ಸಾಧ್ಯ ?. ಅವರ ಅಸ್ತಿತ್ವ ಉಳಿಸಿಕೊಳ್ಳಲು ಅಷ್ಟೇ ಹೋರಾಡಿದ್ದರು. ಟಿಪ್ಪು ವೀರ ಯೋಧ ಎಂದಷ್ಟೆ ಹೇಳಬಹುದು, ಆದರೆ ಅತ ಸ್ವಾತಂತ್ರ್ಯ ಹೋರಾಟಗಾರನಲ್ಲ ಎಂದು ಹೇಳಿದ್ದಾರೆ.

ಸಾವರ್ಕರ್ ಸಾಧನೆ ಇಡೀ ಜಗತ್ತಿಗೆ ಗೊತ್ತಿದೆ, ಸಾವರ್ಕರ್ ಮಹಾನ್ ದೇಶಭಕ್ತ, ದೇಶಕ್ಕಾಗಿ ಸಮರ್ಪಣೆ ಮಾಡಿಕೊಂಡಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಅವರನ್ನು ಸ್ಮರಿಸಬೇಕು. ಹೀಗಾಗಿ ಸಾರ್ವಕರ್ರನ್ನು ನೆನೆದಿದ್ದೇವೆ. ಇದನ್ನು ಮಾಡದ ಕಾಂಗ್ರೆಸ್ ಪಕ್ಷವನ್ನು ಜನರು ತಿರಸ್ಕಾರ ಮಾಡಿದ್ದಾರೆ ಎಂದು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.