• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, April 11, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ದರ್ಶನ್‌‌ ಬರೆದ ಮೂರು ಪತ್ರಗಳು.. ಅದರಲ್ಲಿ ಇದ್ದಿದ್ದೇನು..?

ಕೃಷ್ಣ ಮಣಿ by ಕೃಷ್ಣ ಮಣಿ
July 31, 2024
in Top Story, ಇದೀಗ, ಕರ್ನಾಟಕ, ವಿಶೇಷ, ಸಿನಿಮಾ
0
ದರ್ಶನ್‌‌ ಬರೆದ ಮೂರು ಪತ್ರಗಳು.. ಅದರಲ್ಲಿ ಇದ್ದಿದ್ದೇನು..?
Share on WhatsAppShare on FacebookShare on Telegram

‘ಜೈಲೂಟ ಬೇಡ.. ಮನೆಯೂಟಕ್ಕೆ ಅವಕಾಶ ಕೊಡಿ’ ಎಂದು ಹೈಕೋರ್ಟ್‌ಗೆ ರಿಟ್‌ ಅರ್ಜಿ ಹಾಕಿದ್ದ ದರ್ಶನ್‌ ಆ ಬಳಿಕ ಹೈಕೋರ್ಟ್‌ ಸೂಚನೆಯಂತೆ ಮ್ಯಾಜಿಸ್ಟ್ರೇಟ್‌ ಕೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡಿದ್ದರು. ಇದೀಗ ಮ್ಯಾಜಿಸ್ಟ್ರೇಟ್‌ ಕೋರ್ಟ್‌ನಲ್ಲಿ ಅರ್ಜಿ ವಜಾ ಆದ ಬಳಿಕ ಮ್ಯಾಜಿಸ್ಟ್ರೇಟ್‌ ಕೋರ್ಟ್‌ ಆದೇಶ ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ. ಅದಕ್ಕೂ ಮೊದಲು ಹೈಕೋರ್ಟ್‌ನಲ್ಲಿದ್ದ ರಿಟ್‌ ಅರ್ಜಿಯನ್ನು ವಾಪಸ್‌ ಪಡೆದಿದ್ದರು. ಇದೀಗ ದರ್ಶನ್‌‌, ಬರೆದಿದ್ದ ಮೂರು ಪತ್ರಗಳು ಬಯಲಾಗಿವೆ. ಮನೆಯೂಟಕ್ಕಾಗಿ ದರ್ಶನ್‌‌ ನೇರ ಮನವಿ ಮಾಡಿದ್ದರು ಎನ್ನುವುದು ಬಯಲಾಗಿದೆ.

ADVERTISEMENT

ಜೂನ್‌ 8ರಂದು ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ನಡೆದ ಬಳಿಕ ಮೈಸೂರಿನಲ್ಲಿ ಜೂನ್‌ 11ರಂದು ದರ್ಶನ್‌ ಬಂಧನ ಮಾಡಲಾಗಿತ್ತು. ವಿಚಾರಣೆ ಬಳಿಕ ಜೂನ್‌ 22ರಂದು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿತ್ತು. ಈ ನಡುವೆ ಜೈಲಿನ ಊಟ ನನಗೆ ಒಗ್ಗುತ್ತಿಲ್ಲ. ಮನೆಯೂಟಕ್ಕೆ ಅವಕಾಶ ಮಾಡಿಕೊಡಿ ಎಂದು ದರ್ಶನ್‌ ಕೋರ್ಟ್‌ಗೆ ಮನವಿ ಮಾಡಿದ್ದರು. ಅದಕ್ಕೂ ಮೊದಲು ದರ್ಶನ್‌ ಮೂವರಿಗೆ ಪತ್ರ ಬರೆದಿರುವುದು ಗೊತ್ತಾಗಿದೆ. ಕಾರಾಗೃಹ ಮತ್ತು ಸೇವೆಗಳ DG, ಜೈಲಿನ ಮುಖ್ಯ ವೈದ್ಯಾಧಿಕಾರಿ ಹಾಗು 24ನೇ ಮ್ಯಾಜಿಸ್ಟ್ರೇಟ್‌ ನ್ಯಾಯಾಧೀಶರಿಗೆ ದರ್ಶನ್‌ ಪತ್ರ ಬರೆದು ಮನೆಯೂಟ ನೀಡುವಂತೆ ಮನವಿ ಮಾಡಿದ್ದಾರೆ.

ದರ್ಶನ್‌ ಮನೆಯೂಟಕ್ಕಾಗಿ ಮೂರು ಪತ್ರ ಬರೆದಿದ್ದು, ಜೈಲು ಅಧಿಕಾರಿ ಮೂಲಕ ಕಾರಾಗೃಹ ಮತ್ತು ಸೇವೆಗಳ DG, ಜೈಲಿನ ಮುಖ್ಯ ವೈದ್ಯಾಧಿಕಾರಿ ಹಾಗು 24ನೇ ಮ್ಯಾಜಿಸ್ಟ್ರೇಟ್‌ ನ್ಯಾಯಾಧೀಶರಿಗೆ ಪತ್ರದ ಮೂಲಕ ಮನವಿ ಮಾಡಿಕೊಳ್ಳಲಾಗಿದೆ. ಜೂನ್‌ 22ರಂದು ನಾನು ಕೇಂದ್ರ ಕಾರಾಗೃಹಕ್ಕೆ ಬಂದಿದ್ದು, ದಿನನಿತ್ಯ ಮನೆಯಲ್ಲಿ ವ್ಯಾಯಾಮ ಮಾಡುತ್ತಿದ್ದೆ, ಅದರ ಜೊತೆಗೆ ಪೌಷ್ಠಿಕಾಂಶ ಉಳ್ಳ ಆಹಾರ ಸೇವಿಸುತ್ತಿದ್ದೆ. ಆದರೆ ಕೇಂದ್ರ ಕಾರಾಗೃಹದಲ್ಲಿ ನನಗೆ ಬೇಕಾದ ಆಹಾರದ ಕೊರತೆ ಎದುರಾಗಿದ್ದು, ನನ್ನ ದೇಹದ ತೂಕದಲ್ಲಿ ಸುಮಾರು 10 ಕೆಜಿಯಷ್ಟು ಇಳಿದಿದೆ. ಆದ ಕಾರಣ ಮನೆಯೂಟಕ್ಕೆ ಅವಕಾಶ ಮಾಡಿಕೊಡಿ ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.

ಕಾರಾಗೃಹ ಮತ್ತು ಸೇವೆಗಳ DG ಅವರಿಗೆ ಬರೆದ ಪತ್ರದಂತೆಯೇ ಮತ್ತೊಂದು ಪತ್ರವನ್ನು 24ನೇ ಅಪರ ಮುಖ್ಯ ಮಹಾನಗರ ದಂಡಾಧಿಕಾರಿಗಳಿಗೂ ಬರೆದಿದ್ದಾರೆ. ಜೈಲಿನ ವೈದ್ಯಾಧಿಕಾರಿಗಳಿಗೂ ದರ್ಶನ್‌ ಪತ್ರ ಬರೆದಿದ್ದು, ಕಾರಾಗೃಹದಲ್ಲಿ ನೀಡುತ್ತಿರುವ ಆಹಾರ ಸೇವಿಸಿ, ನನ್ನ ಆರೋಗ್ಯ ಮತ್ತು ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಹೀಗಾಗಿ ಎಕ್ಸ್‌ಟ್ರಾ ಪ್ರೋಟಿನ್‌ ಡಯಟ್‌‌ಗೆ ಅವಕಾಶ ಕೊಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ಆದರೆ ಕಾನೂನು ಪ್ರಕಾರ ಇದೆಲ್ಲಾ ಸಾಧ್ಯವಿಲ್ಲ ಅನ್ನೋ ಕಾರಣಕ್ಕೆ ಮನವಿಯನ್ನು ತಳ್ಳಿ ಹಾಕಲಾಗಿತ್ತು. ಆ ಬಳಿಕ ಹೈಕೋರ್ಟ್‌ ರಿಟ್‌ ಹಾಗು ಮ್ಯಾಜಿಸ್ಟ್ರೇಟ್‌ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಇದೀಗ ಮತ್ತೆ ಮ್ಯಾಜಿಸ್ಟ್ರೇಟ್‌ ಕೋರ್ಟ್‌ ಆದೇಶ ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಿಲೇರಲಾಗಿದೆ. ಮನೆಯೂಟ ಸಿಗುತ್ತಾ ಇಲ್ವಾ ಅನ್ನೋದು ಇನ್ನಷ್ಟೇ ತಿಳಿಯಬೇಕಿದೆ.

ಕೃಷ್ಣಮಣಿ

Tags: bailDarshandarshan and gangDarshan ArrestRenukaswamyRenukaswamy Murder Case
Previous Post

ಮೃತಪಟ್ಟ ಕನ್ನಡಿಗರಿಗೆ ತಲಾ ರೂ.5 ಲಕ್ಷ ಪರಿಹಾರ ನೀಡಲಾಗುವುದು. ಸಿಎಂ ಸಿದ್ದರಾಮಯ್ಯ

Next Post

ಸಿಎಂ ಮತ್ತು ಡಿಸಿಎಂ ನಡುವೆ ಬೆಂಕಿ ಹಚ್ಚಲು ಯತ್ನಾಳ್‌ ಯತ್ನ: ಲಕ್ಷ್ಮಿ ಹೆಬ್ಬಾಳ್ಕರ್ ಟೀಕೆ!

Related Posts

ದೋಸೆ ಹಿಟ್ಟು ದುರಂತಕ್ಕೆ ಹೊಸ ತಿರುವು: ಮಕ್ಕಳ ಸಾವು ಪ್ರಕರಣದಲ್ಲಿ  ಕಾರಣ ಬೇರೆ ಇದೆ!
Top Story

ದೋಸೆ ಹಿಟ್ಟು ದುರಂತಕ್ಕೆ ಹೊಸ ತಿರುವು: ಮಕ್ಕಳ ಸಾವು ಪ್ರಕರಣದಲ್ಲಿ  ಕಾರಣ ಬೇರೆ ಇದೆ!

by ಪ್ರತಿಧ್ವನಿ
April 11, 2026
0

ಅಹಮದಾಬಾದ್‌ನ ಚಾಂದ್‌ಖೇಡಾ ಪ್ರದೇಶದಲ್ಲಿ ದೋಸೆ ಹಿಟ್ಟು ಸೇವನೆಯ ಬಳಿಕ ಇಬ್ಬರು ಮಕ್ಕಳು ಮೃತಪಟ್ಟಿರುವ ಪ್ರಕರಣಕ್ಕೆ ಇದೀಗ ಹೊಸ ತಿರುವು ದೊರೆತಿದೆ. ಪ್ರಾರಂಭದಲ್ಲಿ ಆಹಾರ ವಿಷಬಾಧೆ ಎಂದು ಭಾವಿಸಲಾಗಿದ್ದ...

Read moreDetails
ರಾಜ್ಯದ ಮೊದಲ ಸರ್ಕಾರಿ ಶಾಲೆಯಲ್ಲಿ ಎಐ ಟೀಚರ್ ‘ಐರಿಸ್’ ಪ್ರವೇಶ

ರಾಜ್ಯದ ಮೊದಲ ಸರ್ಕಾರಿ ಶಾಲೆಯಲ್ಲಿ ಎಐ ಟೀಚರ್ ‘ಐರಿಸ್’ ಪ್ರವೇಶ

April 11, 2026
ಭೂಮಿಗೆ ಮೀರಿದ ಜನಸಂಖ್ಯೆ ಒತ್ತಡ: 2070ರೊಳಗೆ ಗಂಭೀರ  ಸಂಕಟದ ಎಚ್ಚರ

ಭೂಮಿಗೆ ಮೀರಿದ ಜನಸಂಖ್ಯೆ ಒತ್ತಡ: 2070ರೊಳಗೆ ಗಂಭೀರ  ಸಂಕಟದ ಎಚ್ಚರ

April 11, 2026
ಪ್ರತಿಧ್ವನಿ: ಸತ್ಯದ ಧ್ವನಿಯಾಗಿ ಏಳು ವರ್ಷದ ಯಶಸ್ವಿ ಪಯಣ

ಪ್ರತಿಧ್ವನಿ: ಸತ್ಯದ ಧ್ವನಿಯಾಗಿ ಏಳು ವರ್ಷದ ಯಶಸ್ವಿ ಪಯಣ

April 11, 2026
ಎಸ್‌ಎಸ್‌ಎಲ್‌ಸಿ ಪರೀಕ್ಷಾ ನಿಯಮಗಳಲ್ಲಿ ಮಹತ್ವದ ಬದಲಾವಣೆ: ಉತ್ತೀರ್ಣತೆಗೆ ಹೊಸ ಅಂಕಗಳ ನಿಯಮ ಜಾರಿ

ಎಸ್‌ಎಸ್‌ಎಲ್‌ಸಿ ಪರೀಕ್ಷಾ ನಿಯಮಗಳಲ್ಲಿ ಮಹತ್ವದ ಬದಲಾವಣೆ: ಉತ್ತೀರ್ಣತೆಗೆ ಹೊಸ ಅಂಕಗಳ ನಿಯಮ ಜಾರಿ

April 11, 2026
Next Post

ಸಿಎಂ ಮತ್ತು ಡಿಸಿಎಂ ನಡುವೆ ಬೆಂಕಿ ಹಚ್ಚಲು ಯತ್ನಾಳ್‌ ಯತ್ನ: ಲಕ್ಷ್ಮಿ ಹೆಬ್ಬಾಳ್ಕರ್ ಟೀಕೆ!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada