ದೊರೆಸ್ವಾಮಿ ದೈಹಿಕವಾಗಿ ನಮ್ಮೊಂದಿಗೆ ಇಲ್ಲವಾದರೂ, ಅವರ ಆದರ್ಶಗಳು ಸಮಾಜದ ಎಲ್ಲಾ ವರ್ಗದ ಜನರಿಗೆ ದಾರಿ ದೀಪವಾಗಲಿದೆ -ವಿ ಗೋಪಾಲಗೌಡ

ಎಚ್.ಎಸ್. ದೊರೆಸ್ವಾಮಿ ಒಬ್ಬ ಶತಾಯುಶಿ ಮತ್ತು ಸ್ವಾತಂತ್ರ್ಯ ಹೋರಾಟಗಾರ. ಸರಳತೆ, ನಮ್ರತೆ, ಸಮಗ್ರತೆ ಮತ್ತು ಸಮಾಜಿಕ ಬದ್ಧತೆಗೆ ಅವರು ಹೆಸರುವಾಸಿಯಾದವರು.

ಅವರ ಸಾವು ದೇಶಕ್ಕೆ ತುಂಬಲಾರದ ನಷ್ಟ. ಅವರು ಯಾವತ್ತೂ ಜನತೆಯ ಪರ ನಿಂತವರು. ದೈಹಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ ಅವರ ಆಲೋಚನೆಗಳು, ಅರ್ಧ ಮುಗಿಸಿದ ಕೆಲಸಗಳೊಂದಿಗೆ ಅವರು ಈ ದೇಶದ ಜನತೆಯ ಹೃದಯದಲ್ಲಿರುತ್ತಾರೆ. ಅವರ ಇಡೀ ಬದುಕನ್ನು ಸಮಾಜದ ದುರ್ಬಲ ವಿಭಾಗದ ಅಂದರೆ ಶೋಷಿತ ಸಮುದಾಯ, ಹಿಂದುಳಿದ ಜನರ ಒಳಿತಿಗೆ, ಹೋರಾಟಕ್ಕಾಗಿಯೇ ಕಳೆದಿದ್ದಾರೆ. ಅವರಿಗೆ ಸಾಮಾಜಿಕ, ಆರ್ಥಿಕ, ರಾಜಕೀಯ ಸವಲತ್ತುಗಳನ್ನು ಒದಗಿಸಿಕೊಡಲು ಹೋರಾಡಿದ್ದಾರೆ. ಸಮಾಜದ ಎಲ್ಲಾ ವರ್ಗದ ಜನರಿಗೂ ಸಮಾನತೆಯನ್ನು ಕಲ್ಪಿಸುವುದು ಅವರ ಕನಸಾಗಿತ್ತು.

ರಾಷ್ಟ್ರಪಿತ ಮಹಾತ್ಮಾಗಾಂಧಿಯವರಿಂದ ಪ್ರೇರಣೆಗೊಂಡ ಅವರು ಸ್ವಾತಂತ್ರ್ಯ ಚಳವಳಿಗಳಲ್ಲಿ ಭಾಗವಹಿಸಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ಅವರು ಒಂದು ವರ್ಷಕ್ಕಿಂತಲೂ ಹೆಚ್ಚು ಕಾಲ ಜೈಲು ಶಿಕ್ಷೆ ಅನುಭವಿಸಿದ್ದರು. ಅಲ್ಲದೆ ಸ್ವಾತಂತ್ರ್ಯಾನಂತರ ತುರ್ತು ಪರಿಸ್ಥಿತಿಯ ಕಾಲದಲ್ಲೂ ಸರ್ಕಾರವನ್ನು ಪ್ರಶ್ನೆ ಮಾಡಿದ ಕಾರಣಕ್ಕೆ ಜೈಲು ಶಿಕ್ಷೆ ಅನುಭವಿಸಿದ್ದಾರೆ.

ಅವರು‌ ಇಲ್ಲವಾದರೂ ಅವರ ಆದರ್ಶಗಳು ಯುವಕರಿಗೆ, ರೈತರಿಗೆ, ಹೋರಾಟಗಾರರಿಗೆ, ಕಾರ್ಮಿಕರಿಗೆ, ಬುದ್ಧಿಜೀವಿಗಳಿಗೆ, ಬರಹಗಾರರಿಗೆ ಮತ್ತು ಸಮಾಜದ ಎಲ್ಲಾ ವರ್ಗದ ಜನರಿಗೆ ದಾರಿದೀಪವಾಗಲಿವೆ.

ಅನ್ಯಾಯದ ವಿರುದ್ಧ ಸಮಾಜದ ಜನರನ್ನು ಜಾಗೃತಗೊಳಿಸುವ ಅವರ ಒರಟಾದ ಆದರೆ ನಿಜವಾದ ಮತ್ತು ಗಂಭೀರ ಪ್ರಯತ್ನಗಳಿಗೆ ನಾನೇ ಸಾಕ್ಷಿ.

ಎಲ್ಲಾ ಕಾರ್ಯಕರ್ತರಿಗೆ ಕೇಂದ್ರ, ರಾಜ್ಯ ಮತ್ತು ಸ್ಥಳೀಯ ಸರ್ಕಾರಗಳಿಂದ ಪಟ್ಟುಬಿಡದೆ ಉತ್ತಮ ಆಡಳಿತವನ್ನು ಪಡೆಯಲು ಅವರು ಪ್ರೇರಣೆ ಮತ್ತು ಶಕ್ತಿಯನ್ನು ತಮ್ಮ ಜೀವನದುದ್ದಕ್ಕೂ ನೀಡುತ್ತಿದ್ದರು.

ಗೌರವಾನ್ವಿತ ಸುಪ್ರೀಂ ಕೋರ್ಟ್ ನಿಂದ ನಿವೃತ್ತಿಯನ್ನು ಪಡೆದ ನಂತರ ನಿರಂತರವಾಗಿ ನಾನು ಅವರೊಂದಿಗೆ ಸಂಪರ್ಕದಲ್ಲಿದ್ದೆ. ಅವರನ್ನು ಹಲವಾರು ಸಂದರ್ಭಗಳಲ್ಲಿ ಭೇಟಿಯಾಗುವ ಮತ್ತು ದೇಶದ ಜನರ ಬಗ್ಗೆ ,ಅನೇಕ ವಿಷಯಗಳ ಬಗ್ಗೆ ದೀರ್ಘವಾಗಿ ಚರ್ಚಿಸುವ ಅವಕಾಶ ನನಗೆ ದೊರಕಿತ್ತು. ಕಾಲಕಾಲಕ್ಕೆ ಅವರ ಆರೋಗ್ಯದ ಬಗ್ಗೆಯೂ ವಿಚಾರಿಸುತ್ತಿದ್ದೆ. ಅವರು ಸ್ವಾತಂತ್ರ್ಯ ಹೋರಾಟಗಾರನಲ್ಲ ಎಂದು ಪಟ್ಟಭದ್ರ ಹಿತಾಸಕ್ತಿಯ ರಾಜಕಾರಣಿಗಳು ಅವರ ರುಜುವಾತುಗಳ ಬಗ್ಗೆ ಪ್ರಶ್ನಿಸಿದಾಗ ನಾನು ಖಂಡಿಸಿದ್ದೇನೆ.

ಅವರ 104 ನೇ ಜನ್ಮದಿನದಂದು ಅವರ ಸ್ನೇಹಿತರು ಮತ್ತು ಬೆಂಬಲಿಗರು ವೆಬ್‌ನಾರ್ ಆಯೋಜಿಸಿದ್ದರು. ಅದರ ಅಧ್ಯಕ್ಷತೆ ವಹಿಸಲು ಮತ್ತು ಅವರ ಉತ್ತಮ ಆರೋಗ್ಯಕ್ಕಾಗಿ ಹಾರೈಸಲು ನನಗೆ ಅವಕಾಶ ದೊರಕಿತ್ತು. ದೇಶವನ್ನು ಸರಿಯಾದ ಹಾದಿಯಲ್ಲಿ ಸಾಗಿಸಲು, ದೇಶದ ಜನರಿಗೆ ಮಾರ್ಗದರ್ಶಕ ಶಕ್ತಿಯಾಗಿ ಇರಲು ಅವರಿಗೆ ದೀರ್ಘಾಯುಷ್ಯವನ್ನು ಪ್ರಾರ್ಥಿಸಿದೆ.
ಅವರು ರಾಷ್ಟ್ರದ ಜನರಿಗೆ, ವಿಶೇಷವಾಗಿ ಯುವಕರಿಗೆ, ಸಾಮಾಜಿಕ ಕಾರ್ಯಕರ್ತರಿಗೆ ಮಾರ್ಗದರ್ಶನ ನೀಡುವುದನ್ನು ಮುಂದುವರೆಸುತ್ತಾ ದೀರ್ಘಕಾಲ ಆರೋಗ್ಯಕರವಾಗಿ ಮತ್ತು ದೃಢವಾಗಿ ಇರಬೇಕೆಂದು ನಾನು ಬಯಸಿದ್ದೆ.

ಇದೀಗ ಇಲ್ಲವಾಗಿರುವ ಅವರ ಬಗ್ಗೆ ನಾನು ಹಂಚಿಕೊಳ್ಳಬಯಸುವ ಅಚ್ಚುಮೆಚ್ಚಿನ ಸ್ಮರಣೆ ಇದು. ಅವರು ಕೇವಲ ಕೇಂದ್ರ ಮತ್ತು ರಾಜ್ಯ ಮಟ್ಟಗಳಲ್ಲಿ ಜನರ ಪರ ಸರ್ಕಾರವನ್ನು ಹೊಂದಲು ಮಾತ್ರ ಯುವಕರು, ವಿದ್ಯಾರ್ಥಿಗಳು ಮತ್ತು ಜನರ ಪರ ಗುಂಪುಗಳ ಆಂದೋಲನವನ್ನು ಬೆಂಬಲಿಸಿದ್ದಲ್ಲ. ಬದಲಾಗಿ ದೇಶದ ಜನರಿಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಸಮಾನತೆಯನ್ನು ಸಾಧಿಸಲು ಪ್ರಯತ್ನಿಸಿದರು.
ಸಮಾಜದ ಪ್ರತಿ ವಿಭಾಗವು ಅವರ ನಿಧನಕ್ಕೆ ಗೌರವ ಸಲ್ಲಿಸುತ್ತದೆ ಮತ್ತು ತಮ್ಮ ಹೃದಯದ ಸಂತಾಪವನ್ನು ವ್ಯಕ್ತಪಡಿಸುತ್ತದೆ ಹಾಗೂ ಅವರ ಆತ್ಮಕ್ಕೆ ಶಾಂತಿಯನ್ನು ಕೋರುತ್ತದೆ

ನ್ಯಾಯಮೂರ್ತಿ ವಿ ಗೋಪಾಲಗೌಡ
ಭಾರತದ ಸುಪ್ರೀಂ ಕೋರ್ಟ್

Related posts

Latest posts

ಭಾರತದ ಶ್ರೇಷ್ಠ ಓಟಗಾರ ಮಿಲ್ಖಾ ಸಿಂಗ್ ಇನ್ನಿಲ್ಲ

ಭಾರತದ ಶ್ರೇಷ್ಠ ಓಟಗಾರ ಮಿಲ್ಖಾ ಸಿಂಗ್ ಕೊರೊನಾ ಸೋಂಕಿನಿಂದ ಉಂಟಾದ ಹಲವಾರು ಸಮಸ್ಯೆಗಳಿಂದ ಕೊನೆಯುಸಿರೆಳೆದಿದ್ದಾರೆ. ಚಂಡೀಗಡದ ಪಿಜಿಐ ಆಸ್ಪತ್ರೆಯಲ್ಲಿ ತಮ್ಮ 91 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಕಳೆದ ತಿಂಗಳು ಮಿಲ್ಖಾ ಸಿಂಗ್ ಅವರಿಗೆ...

ಒಂದೇ ದಿನದಲ್ಲಿ ಎರಡು ವಿವಿಧ ಕೋವಿಡ್-19 ಲಸಿಕೆಗಳನ್ನು ಪಡೆದ ಬಿಹಾರದ ಮಹಿಳೆ

ಬಿಹಾರದ 63 ವರ್ಷದ ಮಹಿಳೆಗೆ ಒಂದೇ ದಿನದಲ್ಲಿ ಎರಡು ವಿಭಿನ್ನ ಕಂಪನಿಯ ಕರೋನ ಲಸಿಕೆ ನೀಡಲಾಗಿದೆ. ಅವರು ಈಗ ವೈದ್ಯರ ನಿಗದಲ್ಲಿದ್ದು ಆರೋಗ್ಯವಾಗಿದ್ದಾರೆ ಎನ್ನಲಾಗಿದೆ. ಬಿಹಾರದ ಮಹಿಳೆ ಸುನಿಲಾ ದೇವಿ ಎಂಬುವವರಿಗೆ ಜೂನ್ 16...

ಮಸೀದಿಗೆ ಜಾಗ ದಾನ ನೀಡಿದ ಸಿಖ್ ವ್ಯಕ್ತಿ: ಮಸೀದಿಯಲ್ಲಿ ಕಾರ್ಯಕ್ರಮ ಆಯೋಜಿಸಿದ ಗುರುದ್ವಾರ

ಕೋಮು‌‌ ಸಂಘರ್ಷಗಳು, ಪ್ರಚೋದನೆಗಳು ಮತ್ತು ವಿಭಿನ್ನ ಕೋಮಿನ ಜನರ ಮೇಲೆ ವಿನಾಕಾರಣ ಹಲ್ಲೆ, ಕೊಲೆ ನಡೆಯುವ ವಿದ್ಯಮಾನಗಳ ನಡುವೆ ಪಂಜಾಬಿನ‌ ಎರಡು ಜಿಲ್ಲೆಗಳು ಕೋಮುಸಾಮರಸ್ಯವನ್ನು ಉತ್ತೇಜಿಸುವಂತಹ ಘಟನೆಗೆ ಸಾಕ್ಷಿಯಾಗಿವೆ. ಸ್ವಾಭಿಮಾನಕ್ಕೆ, ಕೆಚ್ಚೆದೆಗೆ ಹಠಕ್ಕೆ...