ಕೆಲವೊಂದು ಸಿನಿಮಾಗಳೇ ಹಾಗೆ ವಿವಾದಗಳಿಂದ ಸದ್ದು ಮಾಡುವ ಸಿನಿಮಾಗಳು ಪೂರ್ವಗ್ರಹ ಪೀಡಿತವಾಗಿ ಅಜೆಂಡಗಳಿಂದಲೇ ದುಡ್ಡು ಮಾಡುತ್ತವೆ. ಕೆಲವೊಮ್ಮೆ ನೈಜ ಘಟನೆ ಆಧಾರಿತ ಚಿತ್ರ ಅಂತ ಹೇಳಿಕೊಂಡು ಸಣ್ಣ ಕಥೆಗೆ ದೊಡ್ಡ ದೊಡ್ಡ ಅಂಶಗಳನ್ನು ಸೇರಿಸಿ ಸಮಾಜದ ಸಾಮರಸ್ಯವನ್ನು ಕಾದಾಡುವ ಕೆಲಸವನ್ನು ಮಾಡುತ್ತವೆ.
ಆದರೆ ಇಂತಹ ಸಿನಿಮಾಗಳಿಂದ ದುಡ್ಡು ಮಾಡೋದು ಮಾತ್ರ ನಿರ್ಮಾಪಕ, ಇಲ್ಲಿ ವಿವಾದಗಳಿಗೆ ಸಿಕ್ಕಿಕೊಳ್ಳುವುದು ನಿರ್ದೇಶಕ ಮತ್ತು ನಟ ನಟಿಯರು ಅನ್ನೋದು ನಗ್ನ ಸತ್ಯ, ಕೆಲವೊಮ್ಮೆ ಅತ್ಯುತ್ತಮ ಕಥೆಗಳನ್ನ ಹೊಂದಿ ಅದರ ಮೂಲಕ ಸಿನಿಪ್ರೇಕ್ಷಕರನ್ನ ಸೆಳೆಯುವ, ಮನೋರಂಜನೆ ನೀಡುವ ಉತ್ತಮ ಗುಣಮಟ್ಟದ ಕಥೆಗಳು ನಿರ್ದೇಶಕನ ಬಳಿ ಇಲ್ಲದಿದ್ದಾಗ ಇಂತಹ ಸಿನಿಮಾಗಳು ಹುಟ್ಟುತ್ತವೆ
ಇನ್ನು ಕಥಾಗಾರನ ಬಳಿ ಅತ್ಯುತ್ತಮ ಸರಕುಗಳು ಇಲ್ಲದಿದ್ದಾಗ ವಿವಾದಾತ್ಮಕ ಅಂಶಗಳನ್ನು ಇಟ್ಟುಕೊಂಡು ಸಾಕಷ್ಟು ಮಂದಿ ಸಿನಿಮಾ ಮಾಡಿ ಗೆಲ್ಲುತ್ತಾರೆ ಅಂತ ಕೇರಳ ಸ್ಟೋರಿ ನೋಡಿದ ಸಾಕಷ್ಟು ಮಂದಿ ಜನಸಾಮಾನ್ಯರು ಹಾಗೂ ಸ್ವತಃ ಕೇರಳದ ಶೇ.70ರಷ್ಟು ಸಿನಿಮಾ ನೋಡಿದ ಪ್ರೇಕ್ಷಕರು ಈ ರೀತಿಯಾದ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.

ಆದರೆ ಇದನ್ನು ಹೊರತುಪಡಿಸಿ ಕೇರಳಿಗರು ಮತ್ತೊಂದು ಸಿನಿಮಾವನ್ನು ಇದು ನಿಜವಾದ ಕೇರಳ ಸ್ಟೋರಿ ಅಂತ ಒಪ್ಪಿಕೊಂಡಿದ್ದಾರೆ. ಆ ಸಿನಿಮಾ ಈಗ ಬಾಕ್ಸ್ ಆಫೀಸ್ ನಲ್ಲಿ ಸಂಚಲನವನ್ನ ಮೂಡಿಸಿದ ಅದರ ಹೆಸರೇ 2018
ಹೌದು..ಮಾಲಿವುಡ್ ಸಿನಿಮಾ ಇಂಡಸ್ಟ್ರಿಯಲ್ಲಿ ಇತ್ತೀಚೆಗೆ ಬಿಡುಗಡೆಯಾದ 2018 ಸಿನಿಮಾ ಬರೀ 17 ದಿನಕ್ಕೆ ಭರ್ಜರಿ ದಾಖಲೆಯನ್ನು ಮಾಡಿದೆ. ಈ ಸಿನಿಮಾ ಈಗ 150 ಕೋಟಿ ಕ್ಲಬ್ ಸೇರುತ್ತಿದ್ದು, ಕೇರಳ ಸೇರಿದಂತೆ ದೇಶಾದ್ಯಂತ ಸಂಚಲನ ಮೂಡಿಸಿದೆ.
ಕಳದ ವಾರ 2018 ಸಿನಿಮಾ ಕಲೆಕ್ಷನ್ 72 ಕೋಟಿ ಇತ್ತು. ಅದರೆ ಈ ವಾರ ದೇಶಾದ್ಯಂತ 150 ಕೋಟಿ ಗಳಿಕೆಯನ್ನ ಮಾಡಿದೆ. ಈ ಸಿನಿಮಾ ಕೇರಳದಲ್ಲಿ ಸದ್ಯಕ್ಕೆ 72 ಕೋಟಿ ಗಳಿಕೆಯನ್ನ ಕಂಡಿದೆ ಕೇರಳದಲ್ಲಿ, ಇನ್ನು ಬಾಹುಬಳಿ ಕೇರಳದಲ್ಇ ಗಳಿಸಿದ್ದು 73 ಕೋಟಿ ರೂಪಾಯಿ. ಮಲಯಾಳಂ ಸೂಪರ್ಸ್ಟಾರ್ ಮೋಹನ್ಲಾಲ್ ಅವರ ಪುಲಿಮುರುಗನ್ ಸಿನಿಮಾ 78.50 ಕೋಟಿ ಗಳಿಸಿತ್ತು. ಈಗ 2018 ಸಿನಿಮಾ ಭರ್ಜರಿಯಾಗಿ ಗಳಿಕೆ ಮಾಡಿಕೊಂಡು ಸೂಪರ್ ಹಿಟ್ ಆಗಿರೋದ್ರ ಜೊತೆ ಕೇರಳದಲ್ಲಿ ಹೊಸ ದಾಖಲೆಯನ್ನ ಬರೆಯುವ ನಿರೀಕ್ಷೆ ಇದೆ.
ಇನ್ನು ಈ ಸಿನಿಮಾದ ಕತೆ 2018ರಲ್ಲಿ ಕೇರಳದಲ್ಲಿ ಪ್ರವಾಹ ಬಂದಾಗ ಮಿಲಿಟರಿ, ಎನ್ಡಿಆರ್ಎಫ್ ಎಲ್ಲಕ್ಕಿಂತ ಹೆಚ್ಚು ನೆರವಾಗಿದ್ದು ಅಲ್ಲಿನ ಸ್ಥಳೀಯ ಮೀನುಗಾರರು. ಕಡಲ ತಟದ ಮೀನುಗಾರರು ತಮ್ಮ ದೋಣಿಗಳನ್ನು ಬಳಸಿಯೇ ಬಹಳಷ್ಟು ಜನರನ್ನು ರಕ್ಷಿಸಿದ್ದರು. ಹಾಗೂ ಆ ಸಂದರ್ಭದಲ್ಲಿ ಕೇರಳಿಗರು ಅನುಭವಿಸಿದ ನರಕವನ್ನು ಕೂಡ ಬಹಳ ನೈಜವಾಗಿ ತೋರಿಸಲಾಗಿದೆ. ಇದು ಕೇರಳ ಪ್ರೇಕ್ಷಕರ ಮನ ಗೆದ್ದಿದೆ.
ಇನ್ನು ಈ ಸಿನಿಮಾ ನೋಡಿ ಹೊರಬಂದ ಪ್ರೇಕ್ಷಕರು ಇದು ನಿಜವಾದ ಕೇರಳದ ಸಿನಿಮಾ ಕೇರಳದ ನೈಜ ಕಥೆ ಈ ಸಿನಿಮಾದಲ್ಲಿದೆ ಇದಕ್ಕೆ ಸಾಕ್ಷಿ ಕೇರಳದ ಜನರೇ ಆಗಿರುತ್ತಾರೆ ಆದರೆ ಯಾವುದೇ ಸಾಕ್ಷಿ ಇಲ್ಲದೆ ಕೇರಳ ಸ್ಟೋರಿ ಎಂಬ ಸಿನಿಮಾವನ್ನು ಮಾಡಿ ಕೇರಳದ ಮರ್ಯಾದೆಯನ್ನು ರಾಷ್ಟ್ರಮಟ್ಟದಲ್ಲಿ ಹರಾಜು ಹಾಕುವ ಕೆಟ್ಟ ಸಿನಿಮಾನ ನಾವು ನೋಡುವುದಿಲ್ಲ ನಿಮಗೆ ನಿಜವಾದ ಕೇರಳ ಸಿನಿಮಾ ನೋಡಬೇಕು ಅಂದ್ರೆ 2018 ಸಿನಿಮಾ ವನ್ನ ನೋಡಿ ಅಂತ ಸಾಕಷ್ಟು ಜನ ಪ್ರೇಕ್ಷಕರು ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರಂತೆ
ಒಟ್ಟಾರೆಯಾಗಿ ಕೇರಳ ಸ್ಟೋರಿ ಸಿನಿಮಾ ಗಿಂತ 2018 ಸಿನಿಮಾ ಕೇರಳದಲ್ಲಿ ಭರ್ಜರಿಯಾಗಿ ಸದ್ದು ಮಾಡ್ತಾ ಇರೋದ್ರ ಜೊತೆಗೆ ಯಾವುದೇ ವಿವಾದಗಳನ್ನು ತನ್ನ ಮೈಗೆ ಅಂಟಿಸಿಕೊಳ್ಳದೆ ಈ ಸಿನಿಮಾ ಮುನ್ನುಗ್ತಾ ಇರೋದು 2018ರ ಸಿನಿಮಾ ತಂಡಕ್ಕೆ ಸಂತಸವನ್ನು ಉಂಟುಮಾಡಿದೆ