ಮೈಸೂರು ನಗರಾಭಿವೃದ್ದಿ ಪ್ರಾಧಿಕಾರ (ಮುಡಾ) ಹಗರಣ ( Muda Scam ) ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ( Siddaramaiah) ಅವರು ಕಾನೂನು ಸಂಕಷ್ಟ ಎದುರಾಗಿದೆ.
🎉 This Dussehra, don’t miss the mind-blowing Muda "Site" Seeing tour—valued at a casual ₹5000 crores! 💰✨ Witness the wonders of corruption up close and personal like never before! 🧐 Want a Gold Pass? Please contact @siddaramaiah (terms and bribes apply). And remember,… pic.twitter.com/u97mtX3Cmr
— BJP Karnataka (@BJP4Karnataka) October 4, 2024
ಇದರ ನಡುವೆ ಬಿಜೆಪಿ ಸಾಮಾಜಿಕ ಮಾಧ್ಯಮ ಎಕ್ಸ್ (ಟ್ವಿಟರ್)ನಲ್ಲಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ವ್ಯಂಗ್ಯವಾಗಿ ಪೋಸ್ಟ್ ಹಾಕಿದೆ. ‘ಈ ದಸರಾದಲ್ಲಿ, ಐದು ಸಾವಿರ ಕೋಟಿ ಮೌಲ್ಯದ ಅದ್ಭುತವಾದ ಮುಡಾ ‘ಸೈಟ್’ ಸೀಯಿಂಗ್ ಟೂರ್ಅನ್ನು ತಪ್ಪಿಸಿಕೊಳ್ಳಬೇಡಿ. ಸೈಟ್ ಸೀಯಿಂಗ್ನಲ್ಲಿ ನೀವು ಹಿಂದೆಂದು ನೋಡದ ಭ್ರಷ್ಟಾಚಾರವನ್ನು ಹತ್ತಿರದಿಂದ ನೋಡಬಹುದು. ಸೈಟ್ ಸೀಯಿಂಗ್ಗೆ ಗೋಲ್ಡ್ ಪಾಸ್ ಬೇಕೇ? ದಯವಿಟ್ಟು ಸಂಪರ್ಕಿಸಿ ಸಿಎಂ ಸಿದ್ದರಾಮಯ್ಯ (ನಿಯಮಗಳು ಮತ್ತು ಲಂಚ ಅನ್ವಯಿಸುತ್ತವೆ) ಮತ್ತು ನೆನಪಿಡಿ, ವಾಮ ಮಾರ್ಗವಾಗಿ ಪ್ರವೇಶಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ತಮಾಷೆ ಅಲ್ಲ! ಕರ್ನಾಟಕದಲ್ಲಿ ನಾವು ಈಗಾಗಲೇ ಮುಖ್ಯಮಂತ್ರಿಗಳನ್ನು ವಿಚಾರಣೆಗೆ ಒಳಪಡಿಸಿದ್ದೇವೆ’ ಎಂದು ಪೋಸ್ಟ್ ಹಾಕಿದೆ.