ಹೊಸದಿಲ್ಲಿ: ಕೇಸರಿ ಬಣ್ಣದ ವಂದೇ ಭಾರತ್ ರೈಲುಗಳನ್ನು ಪರಿಚಯಿಸುವುದರ ಹಿಂದೆ ಯಾವ ರಾಜಕೀಯವೂ ಇಲ್ಲ ಎಂದು ರಾಜಕೀಯ ಪಕ್ಷಗಳ ಆರೋಪಗಳನ್ನು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅಲ್ಲಗಳೆದಿದ್ದಾರೆ. ಬಣ್ಣಗಳ ಆಯ್ಕೆಯು ಸಂಪೂರ್ಣ ವೈಜ್ಞಾನಿಕ ಆಲೋಚನೆಗಳ ಸಲಹೆಯಂತೆ ನಡೆದಿದೆ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.
“ಮನುಷ್ಯರ ಕಣ್ಣಿಗೆ ಹಳದಿ ಮತ್ತು ಕಿತ್ತಳೆ ಈ ಎರಡು ಬಣ್ಣಗಳು ಹೆಚ್ಚು ಎದ್ದು ಕಾಣಿಸುತ್ತವೆ. ಯುರೋಪ್ನಲ್ಲಿ ಸುಮಾರು ಶೇ 80ರಷ್ಟು ರೈಲುಗಳು ಒಂದೋ ಕೇಸರಿ ಬಣ್ಣದ್ದಾಗಿರುತ್ತದೆ, ಇಲ್ಲವೇ ಹಳದಿ ಮತ್ತು ಕೇಸರಿ ಎರಡರ ಸಮ್ಮಿಶ್ರಣದ್ದಾಗಿರುತ್ತದೆ” ಎಂದು ಸುದ್ದಿಗಾರರಿಗೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದರು.
ಕಚ್ಚಾ ತೈಲ ದರ ಒಂದೇ ದಿನದಲ್ಲಿ ಶೇ. 5ರಷ್ಟು ಕುಸಿತ ಕಂಡಿದ್ದು, ಒಂದು ವಾರದಲ್ಲಿ ಬರೋಬ್ಬರಿ ಶೇ. 8ರಷ್ಟು ಇಳಿಕೆಯಾಗಿದೆ. ಈ ಮೂಲಕ ಒಂದು ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಈ ಮೂಲಕ ಕಳೆದ ವರ್ಷದ ಏರಿಕೆ ಪ್ರವೃತ್ತಿಗೆ ವಿರುದ್ಧವಾಗಿ ದರ ಇಳಿಕೆ ಹಾದಿಯಲ್ಲಿದೆ.