• Home
  • About Us
  • ಕರ್ನಾಟಕ
Sunday, December 7, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ಬೆಂಗಳೂರು ಅರಮನೆ ಮೈದಾನದ ಜಾಗವನ್ನು ಬಳಸಿಕೊಳ್ಳಲು ಮತ್ತು ನಿಯಂತ್ರಿಸಲು ಸುಗ್ರಿವಾಜ್ಞೆ ಹೊರಡಿಸಲು ರಾಜ್ಯ ಸರ್ಕಾರ ತೀರ್ಮಾನ

ಪ್ರತಿಧ್ವನಿ by ಪ್ರತಿಧ್ವನಿ
January 25, 2025
in ಕರ್ನಾಟಕ, ರಾಜಕೀಯ
0
ಬೆಂಗಳೂರು ಅರಮನೆ ಮೈದಾನದ ಜಾಗವನ್ನು ಬಳಸಿಕೊಳ್ಳಲು ಮತ್ತು ನಿಯಂತ್ರಿಸಲು ಸುಗ್ರಿವಾಜ್ಞೆ ಹೊರಡಿಸಲು ರಾಜ್ಯ ಸರ್ಕಾರ ತೀರ್ಮಾನ
Share on WhatsAppShare on FacebookShare on Telegram



ಬೆಂಗಳೂರು ಅರಮನೆ ಮೈದಾನದ ಜಾಗಕ್ಕೆ ಟಿ.ಡಿ.ಆರ್ ವಿತರಿಸುವುದು ರಾಜ್ಯದ ಹಿತಾಸಕ್ತಿಗೆ ಪ್ರತಿಕೂಲ: ಎಚ್.ಕೆ ಪಾಟೀಲ

ADVERTISEMENT

ಬೆಂಗಳೂರು ಅರಮನೆ (ಆರ್ಜನೆ ಮತ್ತು ವರ್ಗಾವಣೆ) ಅಧಿನಿಯಮ, 1996ಕ್ಕೆ ಸಂಬಂಧಪಟ್ಟ ಸಿವಿಲ್ ಅಪೀಲುಗಳು ಸರ್ವೋಚ್ಛ ನ್ಯಾಯಾಲಯದಲ್ಲಿ ಬಾಕಿಯಿರುವ ಹಿನ್ನೆಲೆಯಲ್ಲಿ ಅಭಿವೃದ್ಧಿ ಹಕ್ಕುಗಳನ್ನು (ಟಿ.ಡಿ.ಆರ್) ವಿತರಿಸಿದ್ದಲ್ಲಿ ರಾಜ್ಯದ ಹಿತಾಸಕ್ತಿಯ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ. ಅದಕ್ಕಾಗಿ ಬೆಂಗಳೂರು ಅರಮನೆ ಮೈದಾನದ ಜಾಗವನ್ನು ಬಳಸಿಕೊಳ್ಳಲು ಮತ್ತು ನಿಯಂತ್ರಿಸಲು ಸುಗ್ರಿವಾಜ್ಞೆ ಹೊರಡಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ ಎಂದು ಕಾನೂನು ಮತ್ತು ಪ್ರವಾಸೋದ್ಯಮ ಸಚಿವ ಎಚ್.ಕೆ ಪಾಟೀಲ ರವರು ತಿಳಿಸಿದರು.

ಬೆಂಗಳೂರು ಅರಮನೆ ಮೈದಾನದ ಒಟ್ಟು 472 ಎಕರೆ 16 ಗುಂಟೆ ಜಾಗಕ್ಕೆ ಬೆಂಗಳೂರು ಅರಮನೆ (ಆರ್ಜನೆ ಮತ್ತು ವರ್ಗಾವಣೆ) ಅಧಿನಿಯಮ 1996ರ ಕಂಡಿಕೆ 8 ಮತ್ತು 9ರಲ್ಲಿ ರೂ.11.00 ಕೋಟಿಗಳನ್ನು ನಿಗದಿಗೊಳಿಸಲಾಗಿತ್ತು.13-3-1997 ರಂದು ಸದರಿ ಕಾನೂನಿನ ಸಾಂವಿಧಾನಿಕ ಸಿಂಧುತ್ವವನ್ನು ಕರ್ನಾಟಕ ರಾಜ್ಯ ಉಚ್ಛ ನ್ಯಾಯಾಲಯವು ಎತ್ತಿಹಿಡಿದಿರುತ್ತದೆ. 27 ವರ್ಷಗಳ ನಂತರ ಈ ವ್ಯಾಜ್ಯ ಮುಂಚೂಣಿಗೆ ಬಂದಿದ್ದು, 1996 ರಲ್ಲಿ 472 ಎಕರೆ 16 ಗುಂಟೆ ಜಾಗಕ್ಕೆ ರೂ.11.00 ಕೋಟಿಗಳನ್ನು (ಪ್ರತಿ ಎಕರೆಗೆ 2.30ಲಕ್ಷ ರೂ. ಅಂದಾಜು ಮೊತ್ತ)ನಿಗದಿಗೊಳಿಸಲಾಗಿತ್ತು. 1996ರ ಈ ಕಾಯ್ದೆಗೆ ಮಾನ್ಯ ಸರ್ವೋಚ್ಛ ನ್ಯಾಯಾಲಯದಿಂದ ಯಾವುದೇ ತಡೆಯಾಜ್ಞೆ ಇಲ್ಲ. ಆದರೆ, ದಿನಾಂಕ: 10.12.2024ರ ಮಾನ್ಯ ಸರ್ವೋಚ್ಛ ನ್ಯಾಯಾಲಯದ ತೀರ್ಪಿನಲ್ಲಿ ನ್ಯಾಯಾಂಗ ನಿಂದನೆ ಪ್ರಕರಣ ಮತ್ತುಇತರೆ ಪ್ರಕರಣಗಳಲ್ಲಿ ಕರ್ನಾಟಕ ಸ್ಟಾಂಪ್ ಕಾಯ್ದೆಯ ಸೆಕ್ಷನ್ 45ಬಿ ಗೆ ಅನುಗುಣವಾಗಿ ಬೆಂಗಳೂರು ಅರಮನೆ ಮೈದಾನಕ್ಕೆ ಹೊಂದಿಕೊಂಡಂತಹ ಪ್ರದೇಶಗಳಿಗೆ ಚಾಲ್ತಿಯಲ್ಲಿರುವ ಮಾರ್ಗಸೂಚಿ ಮೌಲ್ಯಕ್ಕೆ ಅನುಗುಣವಾಗಿ ರಸ್ತೆ ಅಗಲೀಕರಣ ಉದ್ದೇಶಕ್ಕಾಗಿ ಬೆಂಗಳೂರು ಅರಮನೆ ಜಾಗವನ್ನು ಮೌಲ್ಯೀಕರಿಸಿ ವರ್ಗಾವಣೆ ಮಾಡಬಹುದಾದ ಅಭಿವೃದ್ಧಿ ಹಕ್ಕುಗಳನ್ನು (ಟಿ.ಡಿ.ಆರ್) ನೀಡುವಂತೆ ನಿರ್ದೇಶಿಸಿದೆ.

ರಾಜ್ಯದಲ್ಲಿ ಕೇವಲ 2 ಕಿ.ಮೀ ರಸ್ತೆ ಅಭಿವೃದ್ಧಿಗೆ ರೂ.3014.00 ಕೋಟಿ ಅಂದರೆ ಪ್ರತಿ ಎಕರೆಗೆ ರೂ.200.00 ಕೋಟಿ ನೀಡಿದರೆ ಆರ್ಥಿಕ ಪರಿಸ್ಥಿತಿ ಗಂಡಾಂತರ ಉಂಟಾಗಿ ಅಭಿವೃದ್ಧಿಗೆ ಪೂರಕವಾದ ವಾತಾವರಣ ನಿರ್ಮಾಣವಾಗದೇ ಪ್ರಗತಿ ವಿರೋಧವಾದ ಕ್ರಮವಾಗುತ್ತದೆ. 1996ರ ಕಾಯ್ದೆಗೆ ಪೂರಕವಾದ ಈ ಸುಗ್ರಿವಾಜ್ಞೆಯನ್ನು ರಾಜ್ಯಪಾಲರಿಗೆ ಮಂಡಿಸಲು ರಾಜ್ಯ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ ಎಂದು ಸಚಿವರು ತಿಳಿಸಿದರು.

ಮಾರುಕಟ್ಟೆ ಮೊತ್ತ ಒಂದು ಕಡೆಯಾದರೆ, ಸರ್ಕಾರ ಈಗಾಗಲೇ ಪಡೆದಿರುವುದಕ್ಕೆ ನಿಗದಿ ಮಾಡಿರುವ ಮೊತ್ತ ಬೇರೆಯಿದೆ. ಅಭಿವೃದ್ಧಿ ಕಾಮಗಾರಿಗಳು ಜಾರಿಯಲ್ಲಿರುವಾಗ ಈ ವ್ಯಾಜ್ಯದಿಂದ ಕರ್ನಾಟಕ ಸರ್ಕಾರ ಸುಮಾರು 3014 ಕೋಟಿ ರೂಪಾಯಿ ಗಳನ್ನು 15.36 ಗಂಟೆ ಭೂಮಿಗೆ ಕೊಡಬೇಕಾಗಿ ಬರುತ್ತದೆ. ಇದು ಅತ್ಯಂತ ಅವ್ಯವಹಾರಿಕ.ಇದನ್ನು ಜಾರಿ ಮಾಡಿದರೆ ಅಭಿವೃದ್ಧಿಗೆ ಗಂಡಾಂತರ ಬರಲಿದೆ. 3014 ಕೋಟಿ ಕಡಿಮೆ ಮೊತ್ತವಲ್ಲ. ಈ ಮೊತ್ತವನ್ನು ಕೊಡಲಾಗುವುದಿಲ್ಲವಾದ್ದರಿಂದ ಅರಮನೆಯ ಭೂಮಿಯನ್ನು ತೆಗೆದುಕೊಳ್ಳುವುದು ಅಥವಾ ಬಿಡುವುದರ ಬಗ್ಗೆ ಅಧ್ಯಾದೇಶದ ಮೂಲಕ ನಿರ್ಧಾರ ಮಾಡಲು ಅಧ್ಯಾದೇಶ ಹೊರಡಿಸಲಾಗಿದೆ ಎಂದು ಸಚಿವರು ತಿಳಿಸಿದರು.

ರಾಜ್ಯದ ಬೊಕ್ಕಸವನ್ನು ಗಮನದಲ್ಲಿರಿಸಿಕೊಂಡು ರಾಜ್ಯ ಸರ್ಕಾರ ಹಿಂದೆ ಮಾಡಿರುವ ಕಾನೂನು ಅನ್ವಯ ಅದನ್ನು ಮುಂದುವರೆಸುವ ದೃಷ್ಟಿಯಿಂದ ಅಧ್ಯಾದೇಶ ಹೊರಡಿಸಿದೆ ಎಂದು ಸಚಿವರು ತಿಳಿಸಿದರು.

ಕರ್ನಾಟಕ ಕಾರ್ಯಕಲಾಪ ನಿರ್ಣಯಗಳ ಪ್ರಕಾರ ಯಾವುದಾದರೂ ನಿರ್ಣಯ ಅಥವಾ ಪ್ರಸ್ತಾವನೆಗಳನ್ನು .ನಮ್ಮ ನಿರ್ಧಾರ ರಾಜ್ಯ ಸರ್ಕಾರದ ಹಿತಾಸಕ್ತಿಯನ್ನು ಗಮನದಲ್ಲಿರಿಸಿಕೊಂಡು ಮಾಡಲಾಗಿದೆ.

Mysuru wadeyar : ಸರ್ಕಾರ ವಿರುದ್ಧ ಕಾನೂನು ಸಮರ ಸಾರಿದ ರಾಜ ವಂಸ್ಥಸ್ತೆ  #pratidhvani #mysuru

ಸುಗ್ರಿವಾಜ್ಞೆ ಜಾರಿ ಮಾಡುವುದರಿಂದ ಅಗತ್ಯವಿರುವಷ್ಟು ಜಾಗವನ್ನು ಬಳಸಿಕೊಳ್ಳಲು ಮತ್ತು ಉದ್ದೇಶಿತ ಪ್ರಸ್ತಾವನೆಯನ್ನು ಕೈಬಿಡಲು ರಾಜ್ಯ ಸರ್ಕಾರಕ್ಕೆ ಅಧಿಕಾರ ದೊರೆಯುತ್ತದೆ. ಯಾವುದೇ ನ್ಯಾಯಾಲಯದ ತೀರ್ಪು ಅಥವಾ ಸರ್ಕಾರವು ಈ ಮೊದಲು ಕೈಗೊಂಡ ಯಾವುದೇ ತೀರ್ಮಾನದಂತೆ ಯಾವುದೇ ಮೂಲಸೌಕರ್ಯ ಯೋಜನೆಯಿಂದ ಭಾಗಶ: ಅಥವಾ ಸಂಪೂರ್ಣವಾಗಿ ಹಿಂದೆ ಸರಿಯಲು ಈ ಸುಗ್ರಿವಾಜ್ಞೆ ಅವಕಾಶ ಕಲ್ಪಿಸುತ್ತದೆ ಎಂದು ಸಚಿವರು ವಿವರಿಸಿದರು.

15 ಎಕರೆಗೆ 3000 ಕೋಟಿಗಳನ್ನು ಕೊಡಲು ಸಾಧ್ಯವಿಲ್ಲ. 11 ಎಕರೆ ಜಾಗವನ್ನು 1996ರಲ್ಲಿಯೇ ಕೋಟಿಗಳನ್ನು ಕೊಟ್ಟು ಪಡೆಯಲಾಗಿದೆ. ಈ ಸಮಸ್ಯೆಗಳು ವ್ಯಾಜ್ಯಗಳು ಪರಿಹಾರವಾಗದ ಕಾರಣ ಉಂಟಾಗಿದೆ. ಟಿ.ಡಿ.ಆರ್ ಕೊಡದಿರಲು ಸುಗ್ರೀವಾಜ್ಞೆ ಹೊರಡಿಸಲಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.

2011ರಲ್ಲಿ ಬೆಂಗಳೂರು ಅರಮನೆ ಮೈದಾನಕ್ಕೆ ಸೇರಿದ ಆಸ್ತಿಯ 15 ಎಕರೆ 39 ಗುಂಟೆ ಜಾಗವನ್ನು ಬಳಸಿಕೊಂಡು ಬೆಂಗಳೂರು ಅರಮನೆ ಮೈದಾನಕ್ಕೆ ಹೊಂದಿಕೊಂಡಿರುವ ಬಳ್ಳಾರಿ ರಸ್ತೆ ಮತ್ತು ಜಯಮಹಲ್ ರಸ್ತೆಯನ್ನು ಅಗಲೀಕರಣಗೊಳಿಸುವ ಸಂಬಂಧ ಮಧ್ಯಂತರ ಅರ್ಜಿ ದಾಖಲಿಸಿದಾಗ ಸದರಿ ಮಧ್ಯಂತರ ಅರ್ಜಿಯ ವಿಚಾರಣೆ ನಡೆಸಿದ ಸರ್ವೋಚ್ಛ ನ್ಯಾಯಾಲಯವು 2014 ರಲ್ಲಿ ಟಿ.ಡಿ.ಆರ್ ನಿಯಮಗಳ ಪ್ರಕಾರ ಟಿ.ಡಿ.ಆರ್ ಷರತ್ತಿಗೊಳಪಡಿಸಿ, ಜಾಗವನ್ನು ಬಳಸಿಕೊಳ್ಳಲು ಅನುಮತಿ ನೀಡಿರುತ್ತದೆ.

ಮಾನ್ಯ ಸರ್ವೋಚ್ಛ ನ್ಯಾಯಾಲಯವು ನಿಗದಿಪಡಿಸಿರುವ ಭೂಸ್ವಾಧಿನ ಮೊತ್ತವು ರಾಜ್ಯದ ಮೇಲೆ ಹೆಚ್ಚಿನ ಆರ್ಥಿಕ ಹೊರೆಯಾಗಲಿದ್ದು, ಆರ್ಥಿಕ ಶಿಸ್ತಿನ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಆರ್ಥಿಕ ಶಿಸ್ತಿನ ತತ್ವಗಳನ್ನು ಅನುಸರಿಸದೇ ಅಂತಹ ಮೂಲಸೌಕರ್ಯ ಯೋಜನೆಗಳ ಮೇಲೆ ನೀತಿ-ನಿರ್ಣಯಗಳನ್ನು ತೆಗೆದುಕೊಳ್ಳುವುದು ಕಷ್ಟಸಾಧ್ಯ. ನೀತಿ-ನಿಯಮಕ ವಿಷಯಗಳಿಗೆ ಸಂಬಂಧಿಸಿದ ವಿಷಯಗಳ ಕುರಿತು ನಿರ್ಧರಿಸುವಾಗ ರಾಜ್ಯದ ಆರ್ಥಿಕ ನೀತಿಯನ್ನು ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ. ಆರ್ಥಿಕವಾಗಿ ಕಾರ್ಯಸಾಧುವಲ್ಲದ ಯಾವುದೇ ಯೋಜನೆಯು ಸಾರ್ವಜನಿಕ ಹಿತಾಸಕ್ತಿಗೆ ಮತ್ತು ಸಾರ್ವಜನಿಕ ನೀತಿಗೆ ವಿರುದ್ಧವಾಗಿರುತ್ತದೆ.

ಮಾನ್ಯ ಸರ್ವೋಚ್ಛ ನ್ಯಾಯಾಲಯದಲ್ಲಿ ಸಿವಿಲ್ ಅಪಿಲ್ನಲ್ಲಿ ರಾಜ್ಯದ ಪರವಾಗಿ ಆದೇಶವಾದಲ್ಲಿ ಮಾರಾಟ ಅಥವಾ ಇನ್ನಾವುದೇ ರೀತಿಯಲ್ಲಿ ಬಳಕೆಯಾದ ಟಿ.ಡಿ.ಆರ್ ಗಳನ್ನು ಹಿಂಪಡೆಯಲಾಗಲೀ ಅಥವಾ ಮರುಪಡೆಯಲಾಗಲೀ ಅಸಾಧ್ಯವಾಗುವುದರಿಂದ ಸುಗ್ರಿವಾಜ್ಞೆಯ ಮೂಲಕ ಅಧಿಕಾರ ಪಡೆಯಲು ರಾಜ್ಯ ಸಚಿವ ಸಂಪುಟ ತೀರ್ಮಾನಿಸಿದೆ ಎಂದು ಕಾನೂನು ಮತ್ತು ಪ್ರವಾಸೋದ್ಯಮ ಸಚಿವರು ತಿಳಿಸಿದರು.

Tags: #bangalore fort#bangalore torpedo#governmentBangalorebangalore international centrebangalore latest newsbangalore news todaygovernment exam gkhow to become an air hostessIndian Institute of Scienceinternet of thingslearn while on the movetexas state investigation uvalde policethe hindu analysis in englishthe hindu editorial discussionthe hindu newspaper analysisthe hindu newspaper analysis in english
Previous Post

ಉಡುಪಿಯಲ್ಲಿ ಬಾಲಕಿಗೆ ಲೈಂಗಿಕ ಕಿರುಕುಳ: ತ್ವರಿತ ಕ್ರಮಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೂಚನೆ

Next Post

ಕರ್ನಾಟಕ ಸರ್ಕಾರ ಕಾರ್ಯಕಲಾಪಗಳ ನಿರ್ವಹಣೆ ನಿಯಮಗಳಿಗೆ ತಿದ್ದುಪಡಿ.

Related Posts

ಸಾಕ್ಷ್ಯ ನಾಶಕ್ಕೆ ಹಣ ಕೇಸ್ – ಪ್ರದೋಷ್ ಹೇಳಿಕೆಯಿಂದ ದರ್ಶನ್ ಗೆ ಸಂಕಷ್ಟ
ಕರ್ನಾಟಕ

ಸಾಕ್ಷ್ಯ ನಾಶಕ್ಕೆ ಹಣ ಕೇಸ್ – ಪ್ರದೋಷ್ ಹೇಳಿಕೆಯಿಂದ ದರ್ಶನ್ ಗೆ ಸಂಕಷ್ಟ

by ಪ್ರತಿಧ್ವನಿ
December 7, 2025
0

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಮತ್ತೊಬ್ಬ ಆರೋಪಿ ಪ್ರದೋಷ್ ಈಗ ಐಟಿ ವಿಚಾರಣೆ ಎದುರಿಸಿದ್ದು, ಅದು ನಟ ಹಾಗೂ ಆರೋಪಿ ದರ್ಶನ್ ಗೂ ಸಂಕಷ್ಟ ತರುವ ಸಾಧ್ಯತೆ...

Read moreDetails
ಬುದ್ಧಿಗೇಡಿತನಕ್ಕೂ ಮಿತಿ ಬೇಡವೇ?: ಮನುವಾದಿ ಎಂದ ಸಿದ್ದರಾಮಯ್ಯ ವಿರುದ್ಧ ಗುಡುಗಿದ HDK

ಬುದ್ಧಿಗೇಡಿತನಕ್ಕೂ ಮಿತಿ ಬೇಡವೇ?: ಮನುವಾದಿ ಎಂದ ಸಿದ್ದರಾಮಯ್ಯ ವಿರುದ್ಧ ಗುಡುಗಿದ HDK

December 7, 2025
IndiGo Crisis: ಏರ್‌ಲೈನ್ಸ್‌ಗಳಿಗೆ ಶಾಕ್‌: ವಿಮಾನ ಟಿಕೆಟ್ ದರ ಏರಿಕೆಗೆ ಕೇಂದ್ರ ಬ್ರೇಕ್‌

IndiGo Crisis: ಏರ್‌ಲೈನ್ಸ್‌ಗಳಿಗೆ ಶಾಕ್‌: ವಿಮಾನ ಟಿಕೆಟ್ ದರ ಏರಿಕೆಗೆ ಕೇಂದ್ರ ಬ್ರೇಕ್‌

December 7, 2025
Daily Horoscope: ಇಂದು ಸಂಪತ್ತು ಹೆಚ್ಚುವ ರಾಶಿಗಳಿವು..!

Daily Horoscope: ಇಂದು ಸಂಪತ್ತು ಹೆಚ್ಚುವ ರಾಶಿಗಳಿವು..!

December 7, 2025

ನನ್ನ ಶ್ರಮ, ನನ್ನ ಸಂಪಾದನೆ, ನನ್ನ ಆಸ್ತಿ, ನನಗೆ ಇಷ್ಟವಾದ ಶೂ, ವಾಚ್ ಧರಿಸುವೆ: ಡಿಸಿಎಂ ಡಿ.ಕೆ. ಶಿವಕುಮಾರ್

December 6, 2025
Next Post
ಕರ್ನಾಟಕ ಸರ್ಕಾರ ಕಾರ್ಯಕಲಾಪಗಳ ನಿರ್ವಹಣೆ ನಿಯಮಗಳಿಗೆ ತಿದ್ದುಪಡಿ.

ಕರ್ನಾಟಕ ಸರ್ಕಾರ ಕಾರ್ಯಕಲಾಪಗಳ ನಿರ್ವಹಣೆ ನಿಯಮಗಳಿಗೆ ತಿದ್ದುಪಡಿ.

Recent News

ಪಲಾಶ್ ಮುಚ್ಚಲ್ ಜೊತೆಗಿನ ಮದುವೆ ರದ್ದಾಗಿದೆ: ಸ್ಮೃತಿ ಮಂಧಾನಾ ಸ್ಪಷ್ಟನೆ
Top Story

ಪಲಾಶ್ ಮುಚ್ಚಲ್ ಜೊತೆಗಿನ ಮದುವೆ ರದ್ದಾಗಿದೆ: ಸ್ಮೃತಿ ಮಂಧಾನಾ ಸ್ಪಷ್ಟನೆ

by ಪ್ರತಿಧ್ವನಿ
December 7, 2025
ಬುದ್ಧಿಗೇಡಿತನಕ್ಕೂ ಮಿತಿ ಬೇಡವೇ?: ಮನುವಾದಿ ಎಂದ ಸಿದ್ದರಾಮಯ್ಯ ವಿರುದ್ಧ ಗುಡುಗಿದ HDK
Top Story

ಬುದ್ಧಿಗೇಡಿತನಕ್ಕೂ ಮಿತಿ ಬೇಡವೇ?: ಮನುವಾದಿ ಎಂದ ಸಿದ್ದರಾಮಯ್ಯ ವಿರುದ್ಧ ಗುಡುಗಿದ HDK

by ಪ್ರತಿಧ್ವನಿ
December 7, 2025
IndiGo Crisis: ಏರ್‌ಲೈನ್ಸ್‌ಗಳಿಗೆ ಶಾಕ್‌: ವಿಮಾನ ಟಿಕೆಟ್ ದರ ಏರಿಕೆಗೆ ಕೇಂದ್ರ ಬ್ರೇಕ್‌
Top Story

IndiGo Crisis: ಏರ್‌ಲೈನ್ಸ್‌ಗಳಿಗೆ ಶಾಕ್‌: ವಿಮಾನ ಟಿಕೆಟ್ ದರ ಏರಿಕೆಗೆ ಕೇಂದ್ರ ಬ್ರೇಕ್‌

by ಪ್ರತಿಧ್ವನಿ
December 7, 2025
ಬಿಗ್‌ ಬಾಸ್‌ ಮನೆಯಿಂದ ಅಭಿಷೇಕ್‌ ಔಟ್‌? ಮುಂದಿನ ಕ್ಯಾಪ್ಟನ್‌ ಇವರೇನಾ..?
Top Story

ಬಿಗ್‌ ಬಾಸ್‌ ಮನೆಯಿಂದ ಅಭಿಷೇಕ್‌ ಔಟ್‌? ಮುಂದಿನ ಕ್ಯಾಪ್ಟನ್‌ ಇವರೇನಾ..?

by ಪ್ರತಿಧ್ವನಿ
December 7, 2025
Daily Horoscope: ಇಂದು ಸಂಪತ್ತು ಹೆಚ್ಚುವ ರಾಶಿಗಳಿವು..!
Top Story

Daily Horoscope: ಇಂದು ಸಂಪತ್ತು ಹೆಚ್ಚುವ ರಾಶಿಗಳಿವು..!

by ಪ್ರತಿಧ್ವನಿ
December 7, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಪಲಾಶ್ ಮುಚ್ಚಲ್ ಜೊತೆಗಿನ ಮದುವೆ ರದ್ದಾಗಿದೆ: ಸ್ಮೃತಿ ಮಂಧಾನಾ ಸ್ಪಷ್ಟನೆ

ಪಲಾಶ್ ಮುಚ್ಚಲ್ ಜೊತೆಗಿನ ಮದುವೆ ರದ್ದಾಗಿದೆ: ಸ್ಮೃತಿ ಮಂಧಾನಾ ಸ್ಪಷ್ಟನೆ

December 7, 2025
ಸಾಕ್ಷ್ಯ ನಾಶಕ್ಕೆ ಹಣ ಕೇಸ್ – ಪ್ರದೋಷ್ ಹೇಳಿಕೆಯಿಂದ ದರ್ಶನ್ ಗೆ ಸಂಕಷ್ಟ

ಸಾಕ್ಷ್ಯ ನಾಶಕ್ಕೆ ಹಣ ಕೇಸ್ – ಪ್ರದೋಷ್ ಹೇಳಿಕೆಯಿಂದ ದರ್ಶನ್ ಗೆ ಸಂಕಷ್ಟ

December 7, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada