• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, May 25, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

2020ರಲ್ಲಿ ದೆಹಲಿಯಲ್ಲಿ 920ರಿಂದ 933ಕ್ಕೆ ಏರಿದ ಲಿಂಗಾನುಪಾತ

ಫಾತಿಮಾ by ಫಾತಿಮಾ
October 30, 2021
in ದೇಶ
0
2020ರಲ್ಲಿ ದೆಹಲಿಯಲ್ಲಿ 920ರಿಂದ 933ಕ್ಕೆ ಏರಿದ ಲಿಂಗಾನುಪಾತ
Share on WhatsAppShare on FacebookShare on Telegram

ದೆಹಲಿಯ ಜನನದ ಸಮಯದ ಲಿಂಗಾನುಪಾತವು 2019 ರಲ್ಲಿ ಸಾವಿರ ಪುರುಷರಿಗೆ 920 ಮಹಿಳೆಯರಿದ್ದರೆ 2020 ರಲ್ಲಿ ಅದು 933ಕ್ಕೆ ಏರಿದೆ ಮತ್ತು ಇದೇ ಅವಧಿಯಲ್ಲಿ ಶಿಶು ಮರಣ ಪ್ರಮಾಣವು 24.19% ರಿಂದ 20.37% ಗೆ ಇಳಿದಿದೆ ಎಂದು ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಗುರುವಾರ ಸರ್ಕಾರದ ವರದಿಯೊಂದನ್ನು ಉಲ್ಲೇಖಿಸಿ ಮಾಹಿತಿ ನೀಡಿದ್ದಾರೆ.

ADVERTISEMENT

2019-20ರ ಸಮೀಕ್ಷೆಯ ಪ್ರಕಾರವೇ ಕರ್ನಾಟಕದ ಜನನ ಸಮಯದಲ್ಲಿ‌ನ ಲಿಂಗಾನುಪಾತವು ಪ್ರತಿ 1000 ಪುರುಷರಿಗೆ 1034 ಮಹಿಳೆಯರಿದ್ದರು. ಅಂಗನವಾಡಿ ಕಾರ್ತಕರ್ತೆಯರು, ಆಶಾ ಕಾರ್ಯಕರ್ತೆಯರು ನಿರಂತರವಾಗಿ ಜಾಗೃತಿ ಮೂಡಿಸುವ, ಅರಿವು  ಮೂಡಿಸುವ ಕಾರ್ಯಕ್ರಮದಿಂದಾಗಿಯೇ ಕರ್ನಾಟಕದಲ್ಲಿ  ಲಿಂಗಾನುಪಾತದಲ್ಲಿ ಈ ಮಹತ್ತರ ಬದಲಾವಣೆ ತರಲು‌ ಸಾಧ್ಯವಾಗಿದೆ.

ಆದರೆ ಶಿಕ್ಷಣ, ಜಾಗೃತಿಯ ಕೊರತೆ ಇರುವ ಉತ್ತರ ಭಾರತದಲ್ಲಿ ಈಗಲೂ ಹೆಣ್ಣು ಶಿಶು ಹತ್ಯೆ, ಹೆಣ್ಣು ಭ್ರೂಣ ಹತ್ಯೆ ನಡೆಯುತ್ತಲೇ ಇದೆ. ಇದೀಗ ದೆಹಲಿಯಲ್ಲಿ ಹೆಚ್ಚಿರುವ ಲಿಂಗಾನುಪಾತವು ಒಂದು ಆಶಾದಾಯಕ‌  ಬೆಳವಣಿಗೆಯಾಗಿದ್ದು ಅಲ್ಲಿನ ಉಪಮುಖ್ಯಮಂತ್ರಿ “ಲಿಂಗ ಅನುಪಾತ ಹೆಚ್ಚಳವು ಸಾಮಾಜಿಕ ಜಾಗೃತಿಯ ಪರಿಣಾಮವಾಗಿದೆ ಹಾಗೂ ಸಮಾಜವು ಶಿಕ್ಷಣ ಪಡೆಯುತ್ತಿದೆ ಮತ್ತು ಹೆಣ್ಣುಮಕ್ಕಳ ಮಹತ್ವವನ್ನು ಅರ್ಥಮಾಡಿಕೊಳ್ಳುತ್ತಿದೆ ಎಂಬುದು ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ” ಎಂದು ಹೇಳಿದ್ದಾರೆ.

“ದೆಹಲಿಯಲ್ಲಿ, ಸಾರ್ವಜನಿಕ ಜಾಗೃತಿ ಪ್ರಯತ್ನಗಳು  ಪ್ರಯೋಜನಕಾರಿ ಪರಿಣಾಮಗಳನ್ನು ನೀಡಿವೆ. ಜನನ ಪ್ರಮಾಣವು 2019 ರಲ್ಲಿ ಸಾವಿರಕ್ಕೆ 18.35 ರಷ್ಟಿದ್ದದ್ದು 2020ರಲ್ಲಿ ಸಾವಿರಕ್ಕೆ 14.85ಕ್ಕೆ ಇಳಿದಿದೆ. 2019 ರಲ್ಲಿ ನೋಂದಾಯಿಸಲ್ಪಟ್ಟ 3,65,868 ಜನನ ಸಂಖ್ಯೆಗೆ ಹೋಲಿಸಿದ 2020 ರಲ್ಲಿ 3,01,645 ಜನನಗಳನ್ನು ಮಾತ್ರ ನೋಂದಾಯಿಸಲಾಗಿದೆ” ಎಂದೂ ಅವರ ಹೇಳಿಕೆ ತಿಳಿಸಿದೆ.

“ಎಲ್ಲಾ ನಾಗರೀಕರಿಗೆ ಲಭ್ಯವಿರುವ ಆರೋಗ್ಯ ಸೌಲಭ್ಯಗಳು ಮತ್ತು‌ ಆರೋಗ್ಯ ಮೂಲಸೌಕರ್ಯದಲ್ಲಿನ ಮಹತ್ತರವಾದ ಬದಲಾವಣೆಗಳಿಂದ ಶಿಶು ಮರಣ ಕಡಿಮೆಯಾಗಿದೆ” ಎಂದು ಅವರು ಹೇಳಿದರು. 2019 ಕ್ಕೆ ಹೋಲಿಸಿದರೆ ದೆಹಲಿಯಲ್ಲಿ ಶಿಶು ಮರಣ ಪ್ರಮಾಣವೂ ಕಡಿಮೆಯಾಗಿದೆ. 2019 ರಲ್ಲಿ ಪ್ರತಿ ಸಾವಿರಕ್ಕೆ ಶಿಶು ಮರಣ ಪ್ರಮಾಣವು 24.19 ರಷ್ಟಿದ್ದರೆ, 2020 ರಲ್ಲಿ ಇದು 20.37 ರಷ್ಟಿತ್ತು ಎಂದು ವರದಿ ತೋರಿಸಿದೆ.

ದೆಹಲಿಯಲ್ಲಿ ತಾಯಂದಿರ ಮರಣ ಪ್ರಮಾಣವೂ ಕಡಿಮೆಯಾಗಿದೆ ಎಂದು ಸಿಸೋಡಿಯಾ ಹೇಳಿದ್ದಾರೆ.  ತಾಯಂದಿರ ಮರಣ ಪ್ರಮಾಣವು 2019 ರಲ್ಲಿ 1,000 ಜನನಗಳಿಗೆ 0.55 ರಷ್ಟಿತ್ತು, ಇದು 2020 ರಲ್ಲಿ 1,000 ಜನನಗಳಿಗೆ 0.54 ಕ್ಕೆ ಇಳಿದಿದೆ.

ನಗರದ ಆರೋಗ್ಯ ಮೂಲಸೌಕರ್ಯದಲ್ಲಿನ ಬದಲಾವಣೆಗಳು ಮತ್ತು ಎಲ್ಲಾ ನಿವಾಸಿಗಳಿಗೆ ಉತ್ತಮ ಆರೋಗ್ಯ ಸೇವೆ ಸಿಗುತ್ತಿರುವುದು ದೆಹಲಿಯಲ್ಲಿ ಸಾವಿನ ಪ್ರಮಾಣ ಕಡಿಮೆಯಾಗಲು ಮುಖ್ಯ ಕಾರಣ ಎನ್ನಲಾಗಿದೆ.

ಅಂಕಿಅಂಶಗಳ ಪ್ರಕಾರ, ಸಾವಿನ ಪ್ರಮಾಣವು 2019 ರಲ್ಲಿ ಸಾವಿರಕ್ಕೆ 7.29 ರಷ್ಡಿದ್ದದ್ದು 2020 ರಲ್ಲಿ ಸಾವಿರಕ್ಕೆ 7.03 ಕ್ಕೆ ಇಳಿದಿದೆ.

Tags: DelhiDelhi GovernmentIncreasemensexratioWomen
Previous Post

ರಾಜ್ಯ ಉಪಚುಣಾವಣೆ; ಕೊನೆ ದಿನ ಬಿರುಸಿನ ಪ್ರಚಾರ; ಎರಡು ಕ್ಷೇತ್ರಗಳ ಲೆಕ್ಕಚಾರವೇನು?

Next Post

ರಾಜ್ಯ ಬಿಜೆಪಿ ಸರ್ಕಾರಕ್ಕೆ ಸುನಾಮಿಯಂತೆ ಅಪ್ಪಳಿಸಲಿದೆಯೇ ʼಬಿಟ್‌ಕಾಯಿನ್‌ʼ ಹಗರಣ?

Related Posts

ಕಾಂಗ್ರೆಸ್‌ ವೈಫಲ್ಯಗಳಿಂದ ಗೆಲ್ತೀವಿ ಎಂಬ ಭ್ರಮೆಯಿಂದ ಹೊರಬನ್ನಿ : ಬಿಜೆಪಿ ನಾಯಕರಿಗೆ ನಿತಿನ್‌ ನಬಿನ್‌ ಸಂಘಟನೆಯ ಪಾಠ..!
Top Story

ಕಾಂಗ್ರೆಸ್‌ ವೈಫಲ್ಯಗಳಿಂದ ಗೆಲ್ತೀವಿ ಎಂಬ ಭ್ರಮೆಯಿಂದ ಹೊರಬನ್ನಿ : ಬಿಜೆಪಿ ನಾಯಕರಿಗೆ ನಿತಿನ್‌ ನಬಿನ್‌ ಸಂಘಟನೆಯ ಪಾಠ..!

by ಪ್ರತಿಧ್ವನಿ
May 24, 2026
0

ಬೆಂಗಳೂರು : ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್‌ ನಬಿನ್‌ ಕರ್ನಾಟಕ ರಾಜ್ಯ ಪ್ರವಾಸದಲ್ಲಿದ್ದಾರೆ. ಆಡಳಿತಾರೂಢ ಕಾಂಗ್ರೆಸ್‌ ಪಕ್ಷದ ಅಲೆಯ ಎದುರು ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಹಾಗೂ ಸಂಘಟನೆಯ ದೃಷ್ಟಿಯಿಂದಲೂ...

Read moreDetails
BREAKING NEWS : ಭಟ್ಕಳದಲ್ಲಿ ಭೀಕರ ದುರಂತ! : ಕಪ್ಪೆ ಚಿಪ್ಪು ತೆಗೆಯಲು ಹೋದವರು ಜಲಸಮಾಧಿ

BREAKING NEWS : ಭಟ್ಕಳದಲ್ಲಿ ಭೀಕರ ದುರಂತ! : ಕಪ್ಪೆ ಚಿಪ್ಪು ತೆಗೆಯಲು ಹೋದವರು ಜಲಸಮಾಧಿ

May 24, 2026
ವಿಶೇಷಚೇತನರ ಸಬಲೀಕರಣಕ್ಕೆ ಕೈ ಜೋಡಿಸೋಣ : ಸಂತೋಷ್‌ ಲಾಡ್‌ ಕರೆ..

ವಿಶೇಷಚೇತನರ ಸಬಲೀಕರಣಕ್ಕೆ ಕೈ ಜೋಡಿಸೋಣ : ಸಂತೋಷ್‌ ಲಾಡ್‌ ಕರೆ..

May 24, 2026
80 ಸಾವಿರ ಆಸನದ ಕ್ರೀಡಾಂಗಣ ನಿರ್ಮಾಣ ಪ್ರಗತಿಯ ದೂರದೃಷ್ಟಿ : ಸಿಎಂ ಸಿದ್ದರಾಮಯ್ಯ ಬಣ್ಣನೆ..

80 ಸಾವಿರ ಆಸನದ ಕ್ರೀಡಾಂಗಣ ನಿರ್ಮಾಣ ಪ್ರಗತಿಯ ದೂರದೃಷ್ಟಿ : ಸಿಎಂ ಸಿದ್ದರಾಮಯ್ಯ ಬಣ್ಣನೆ..

May 23, 2026
ದೇಶ ಕಟ್ಟುವ ಕಾರ್ಮಿಕರ ಬದುಕಿಗೆ ಸಹಾಯ ಮಾಡಿದ ಸಮಾಧಾನ ನಮ್ಮ ಸರ್ಕಾರದ್ದು :‌ ಸಚಿವ ಸಂತೋಷ್‌ ಲಾಡ್..

ದೇಶ ಕಟ್ಟುವ ಕಾರ್ಮಿಕರ ಬದುಕಿಗೆ ಸಹಾಯ ಮಾಡಿದ ಸಮಾಧಾನ ನಮ್ಮ ಸರ್ಕಾರದ್ದು :‌ ಸಚಿವ ಸಂತೋಷ್‌ ಲಾಡ್..

May 23, 2026
Next Post
ರಾಜ್ಯ ಬಿಜೆಪಿ ಸರ್ಕಾರಕ್ಕೆ ಸುನಾಮಿಯಂತೆ ಅಪ್ಪಳಿಸಲಿದೆಯೇ ʼಬಿಟ್‌ಕಾಯಿನ್‌ʼ ಹಗರಣ?

ರಾಜ್ಯ ಬಿಜೆಪಿ ಸರ್ಕಾರಕ್ಕೆ ಸುನಾಮಿಯಂತೆ ಅಪ್ಪಳಿಸಲಿದೆಯೇ ʼಬಿಟ್‌ಕಾಯಿನ್‌ʼ ಹಗರಣ?

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada