ಮೈಸೂರು : ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ಮೂವರನ್ನು ರಕ್ಷಿಸಿದ ಘಟನೆಯು ಮೈಸೂರು ಜಿಲ್ಲೆ ತಲಕಾಡಿನ ಕಾವೇರಿ ನಿಸರ್ಗಧಾಮದ ಬಳಿಯಲ್ಲಿ ಸಂಭವಿಸಿದೆ.

ತಲಕಾಡಿಗೆ ಪ್ರವಾಸಕ್ಕೆಂದು ಮಂಡ್ಯ ಜಿಲ್ಲೆ ಕೆಸ್ತೂರು ಗ್ರಾಮದಿಂದ ಏಳು ಮಂದಿ ಯುವಕರು ಆಗಮಿಸಿದ್ದರು ಎನ್ನಲಾಗಿದೆ. ಇವರಲ್ಲಿ ಮೂವರು ನೀರಿನ ಸೆಳೆತಕ್ಕೆ ಕೊಚ್ಚಿಕೊಂಡು ಹೋಗಿದ್ದರು. ಈ ವೇಳೆ ಅಲ್ಲೇ ತೆಪ್ಪ ನಡೆಸುತ್ತಿದ್ದ ಕಿಟ್ಟ ಎಂಬವರು ಮೂವರು ಯುವಕರನ್ನು ರಕ್ಷಿಸುವ ಮೂಲಕ ಸಮಯಪ್ರಜ್ಞೆ ಮೆರೆದಿದ್ದಾರೆ.
ಮೂವರು ಯುವಕರನ್ನು ಕಿಟ್ಟ ಎಂಬವರು ರಕ್ಷಿಸುತ್ತಿರುವ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದು ತೆಪ್ಪ ಓಡಿಸುವ ಕಿಟ್ಟ ಎಂಬವರ ಸಾಹಸಕ್ಕೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗ್ತಿದೆ.