ಗುಜರಾತ್;ಅಹಮದಾಬಾದ್ ನ ಅಸರ್ವದಲ್ಲಿ ಮಹಿಳೆಯೋರ್ವಳು ತನ್ನ ಹೆತ್ತ ಕಂದಮ್ಮನನ್ನು ಮೂರನೇ ಮಹಡಿಯಿಂದ ಎಸೆದು ಕೊಲೆ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ.
ಗುಜರಾತ್ನ ಅಹಮದಾಬಾದ್ನ ಸರ್ಕಾರಿ ಆಸ್ಪತ್ರೆ ಕಟ್ಟಡದ 3ನೇ ಮಹಡಿಯಿಂದ 2 ತಿಂಗಳ ನವಜಾತ ಶಿಶುವನ್ನು ಎಸೆದು 30 ವರ್ಷದ ಮಹಿಳೆ ಕೊಲೆ ಮಾಡಿದ್ದಾರೆ.
ಶಾಹಿಬಾಗ್ ಪೊಲೀಸ್ ಠಾಣೆಯಲ್ಲಿ ಮಗುವಿನ ತಂದೆ ನೀಡಿದ ದೂರಿನ ಮೇರೆಗೆ ಎಫ್ಐಆರ್ ದಾಖಲಾಗಿದೆ.
ಈ ಮಗುವಿಗೆ 2 ತಿಂಗಳು 25 ದಿನಗಳಾಗಿತ್ತು. ಆದರೆ, ಮಗು ಹುಟ್ಟಿದಾಗಿನಿಂದ ಅದರ ಆರೋಗ್ಯ ಸರಿಯಾಗಿ ಇರುತ್ತಿರಲಿಲ್ಲ. ತನ್ನ ಮಗು ನೋವಿನಿಂದ ಬಳಲುತ್ತಿರುವುದನ್ನು ನೋಡಿದ ತಾಯಿ ನೊಂದುಕೊಂಡು ಈ ರೀತಿ ಮಾಡಿದ್ದಾರೆ ಎಂದು ಶಾಹಿಬಾಗ್ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.