ಇಡೀ ದೇಶವೇ ಬೆಚ್ಚಿಬೀಳಿಸುವ ಯುವತಿ ಶ್ರದ್ಧಾ ವಾಲ್ಕರ್(26) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಮುಖ ಸಾಕ್ಷ್ಯಾಧಾರಗಳು ಪತ್ತೆಯಾಗಿಲ್ಲ.
ಆರೋಪಿ ಪ್ರಿಯಕರ ಅಫ್ತಾಬ್‌ನನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಹತ್ಯೆಗೆ ಸಂಬಂಧಿತ ಆಯುಧ, ಬಟ್ಟೆ, ಯುವತಿಯ ಮೊಬೈಲ್ ಇನ್ನು ಪತ್ತೆಯಾಗದಿರುವುದು ತನಿಖಾ ತಂಡಕ್ಕೆ ತೀವ್ರ ತಲೆಬಿಸಿಯನ್ನುಂಟು ಮಾಡಿದೆ ಮತ್ತು ನ್ಯಾಯಾಲಯದಿಂದ ಪ್ರಶ್ನೆ ಎದುರಿಸುವ ಸಾಧ್ಯತೆ ಇದೆ.
ಲಿವ್ ಇನ್ ರಿಲೇಷನ್‌ನಲ್ಲಿದ್ದ ವೇಳೆ ಪ್ರೇಯಸಿ ಜೊತೆ ಜಗಳವಾಡಿದ್ದ ಅಫ್ತಾಬ್ ಆಕೆಯ ಕತ್ತು ಸೀಳಿ ಕೊಲೆ ಮಾಡಿದ ದೇಹದ ಭಾಗಗಳನ್ನ 35 ತುಂಡುಗಳನ್ನಾಗಿಸಿ ದೆಹಲಿಯ ವಿವಿಧೆಡೆ ಎಸೆದು ವಿಕೃತಿ ಮೆರೆದಿದ್ದ.

ಪೊಲೀಸರು ಶ್ವಾನದಳದ ಸಹಯೋಗದೊಂದಿಗೆ ದೇಹದ ಭಾಗಗಳಗಾಗಿ ಶೋಧ ಕಾರ್ಯಾಚರಣೆ ಮುಂದುವರೆಸಿದ್ದಾರೆ ಮತ್ತು ಈವರೆಗೆ ಯುವತಿಯ ರುಂಡ ಪತ್ತೆಯಾಗದಿರುವುದು ಪೊಲೀಸರಿಗೆ ತಲೆ ನೋವಾಗಿ ಪರಿಣಮಿಸಿದೆ. ಇಲ್ಲಿಯವರೆಗೂ ಪತ್ತೆಯಗಾಇರುವ ದೇಹದ ಭಾಗಗಳೊಂದಿಗೆ ಶ್ರದ್ದಾ ತಂದೆ ಡಿಎನ್‌ಎ ತಾಳೆಯಾಗಬೇಕಿದೆ.
ಇದೇ ವೇಳೆ ಆರೋಪಿ ಅಫ್ತಾಬ್ ತನಿಖೆಗೆ ಸರಿಯಾಗಿ ಸಹಕರಿಸುತ್ತಿಲ್ಲ ಮತ್ತು ತನ್ನ ಹೇಳಿಕೆಗಳನ್ನು ಬದಲಾಯಿಸುತ್ತಿದ್ದಾನೆ. ಮೊದಲು ಶ್ರದ್ದಾ ಪೋನನ್ನು ಮಹಾರಾಷ್ಟ್ರದಲ್ಲಿ ಬಿಸಾಡಿರುವುದಾಗಿ ಹೇಳಿದ ನಂತರ ದೆಹಲಿಯಲ್ಲಿ ಎಂದು ಗೊಂದಲದ ಹೇಳಿಕೆಗಳನ್ನು ನೀಡುತ್ತಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.






