ಹೈದ್ರಾಬಾದ್:ಪಕ್ಕದ ರಾಜ್ಯದ ರಾಜಧಾನಿ ಹೈದ್ರಾಬಾದ್ನಲ್ಲಿ ಮತ್ತೆ ಪಟಾಕಿ ದುರಂತ ನಡೆದಿದೆ. ದೀಪಾವಳಿಯ ದಿನವೇ ಆಂಧ್ರಪ್ರದೇಶದಿಂದ ಭೀಕರ ಸ್ಫೋಟದ ಸುದ್ದಿ ಬೆಳಕಿಗೆ ಬಂದಿದೆ. ಏಲೂರು ನಗರದಲ್ಲಿ ಸ್ಕೂಟರ್ನಲ್ಲಿ ಪಟಾಕಿ ತೆಗೆದುಕೊಂಡು ಹೋಗುತ್ತಿದ್ದಾಗ ಏಕಾಏಕಿ ಸ್ಫೋಟಗೊಂಡು ಚಾಲಕ ಮೃತಪಟ್ಟಿದ್ದಾನೆ.
ಈ ಅಪಘಾತದಲ್ಲಿ ಇನ್ನೂ ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಏಲೂರು ನಗರದ ವಸತಿ ಪ್ರದೇಶದಲ್ಲಿ ಈ ಅವಘಡ ಸಂಭವಿಸಿದೆ. ಇಡೀ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಅಪಘಾತದ ಭೀಕರತೆಯನ್ನು ನೋಡಿದರೆ ಎದೆ ನಡುಗುತ್ತದೆ.
ಪಟಾಕಿ ಚೀಲ ಕೆಳಗೆ ಬಿದ್ದು ಸ್ಫೋಟ!,
https://twitter.com/TeluguScribe/status/1851927831929897382?t=n0nvL-rvrLkvXjBNjW7bqA&s=19
ಮಾಹಿತಿ ಪ್ರಕಾರ, ಈ ಘಟನೆ ನಡೆದಾಗ ಯುವಕನೊಬ್ಬ ಸ್ಕೂಟರ್ನಲ್ಲಿ ಪಟಾಕಿ ಚೀಲವನ್ನು ಹೊತ್ತು ರಸ್ತೆಯಲ್ಲಿ ನಿಂತಿದ್ದ ಜನರ ಬಳಿ ಹೋಗುತ್ತಿದ್ದ. ಅಷ್ಟರಲ್ಲಿ ಸ್ಕೂಟಿಯ ಟೈರ್ ಹೊಂಡಕ್ಕೆ ಬಿದ್ದಿದ್ದು, ಚಾಲಕ ಸಮತೋಲನ ತಪ್ಪಿ ಪಟಾಕಿ ಚೀಲ ಕೆಳಗೆ ಬಿದ್ದಿದೆ.ಪಟಾಕಿ ಚೀಲ ಬಿದ್ದ ತಕ್ಷಣ ಭಾರೀ ಸ್ಫೋಟ ಸಂಭವಿಸಿದೆ.ಸ್ಕೂಟರ್ ಚಲಾಯಿಸುತ್ತಿದ್ದ ಯುವಕನ ಜೊತೆಗೆ ಅಕ್ಕಪಕ್ಕದಲ್ಲಿ ನಿಂತಿದ್ದವರೂ ಸ್ಫೋಟಕ್ಕೆ ಸಿಲುಕಿದ್ದಾರೆ. ಈ ಭೀಕರ ಅಪಘಾತದಲ್ಲಿ ಸ್ಕೂಟರ್ ನಲ್ಲಿದ್ದ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ಆರು ಮಂದಿ ಗಾಯಗೊಂಡಿದ್ದಾರೆ.
ದೀಪಾವಳಿ ಸಂಭ್ರಮ ಕಿತ್ತುಕೊಂಡ ಘಟನೆ :
ಅಪಘಾತದ ಬಳಿಕ ಅಲ್ಲಿದ್ದ ಸ್ಥಳೀಯರು ಗಾಯಾಳುಗಳ ನೆರವಿಗೆ ಓಡಿ ಬಂದರು. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕಾಗಮಿಸಿ ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಇದರೊಂದಿಗೆ ಗಾಯಾಳುಗಳನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು. ಅಪಘಾತದ ಬಳಿಕ ಸ್ಥಳದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ಈ ದುರ್ಘಟನೆಯು ಹಲವು ಕುಟುಂಬಗಳ ದೀಪಾವಳಿಯ ಸಂತಸವನ್ನು ಕಿತ್ತುಕೊಂಡಿದೆ.