ಬೆಂಗಳೂರು;ಪ್ಯಾನಿಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಯುವತಿಯ ಮೃತದೇಹ ಪತ್ತೆಯಾದ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.
ನಗರದ ದೀಪಾಂಜಲಿ ನಗರದಲ್ಲಿ 22 ವರ್ಷದ ಝೈದಾ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತಯಾದ ಬಗ್ಗೆ ವರದಿಯಾಗಿದೆ.ಕಳೆದ ಮೂರು ವರ್ಷಗಳ ಹಿಂದೆ ಸೈಫ್ ಅಲಿಯೊಂದಿಗೆ ಮೃತ ಝೈದಾಗೆ ಪೋಷಕರು ವಿವಾಹ ಮಾಡಿಸಿದ್ದರು.
ಆ ಬಳಿಕ ಪತಿ ಝೈದಾಗೆ ಕಿರುಕುಳ ನೀಡುತ್ತಿದ್ದ ಎಂಬ ಆರೋಪವನ್ನು ಕುಟುಂಬ ಮಾಡಿದೆ.ಈ ಕುರಿತು ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.