• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, April 11, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಬಿಜೆಪಿ ಅವಧಿಯಲ್ಲಿ ನಡೆದಿದ್ದ ಬೆಂಗಳೂರು ಹಬ್ಬಕ್ಕೆ ಕೋಟಿ ಕೋಟಿ ಹಣ ಅವ್ಯವಹಾರ ಆರೋಪ

Any Mind by Any Mind
June 24, 2023
in Top Story, ಇದೀಗ, ಕರ್ನಾಟಕ, ರಾಜಕೀಯ
0
ಬಿಜೆಪಿ ಅವಧಿಯಲ್ಲಿ ನಡೆದಿದ್ದ ಬೆಂಗಳೂರು ಹಬ್ಬಕ್ಕೆ ಕೋಟಿ ಕೋಟಿ ಹಣ ಅವ್ಯವಹಾರ ಆರೋಪ
Share on WhatsAppShare on FacebookShare on Telegram

ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ನಡೆಸಿದ್ದ ನಮ್ಮ ಬೆಂಗಳೂರು ಹಬ್ಬದಲ್ಲಿ ಭಾರಿ ಅವ್ಯವಹಾರ ನಡೆದಿತ್ತು ಎಂದು ಆರೋಪಗಳು ಕೇಳಿಬಂದಿದೆ. ಬೆಂಗಳೂರಿನಲ್ಲಿ ನಡೆದ ಎರಡುಗಳ ಹಬ್ಬಕ್ಕೆ (ಉತ್ಸವಕ್ಕೆ) ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸುಮಾರು 5.60 ಕೋಟಿ ವೆಚ್ಚಮಾಡಿದೆ.

ADVERTISEMENT

ಸರಳವಾಗಿ ‘ನಮ್ಮ ಬೆಂಗಳೂರು ಹಬ್ಬ’ ಆಚರಿಸುವುದಾಗಿ ಹೇಳಿದ್ದ ಅಂದಿನ ಬಿಜೆಪಿ ಸರ್ಕಾರ, 2022ರ ಮಾರ್ಚ್ 25 ಮತ್ತು 26ರಂದು ಈ ಹಬ್ಬವನ್ನು ಹಮ್ಮಿಕೊಂಡಿತ್ತು. ಕಬ್ಬನ್ ಉದ್ಯಾನ ಹಾಗೂ ವಿಧಾನಸೌಧದ ಆವರಣದಲ್ಲಿ ನಮ್ಮ ಬೆಂಗಳೂರು ಹಬ್ಬ ನಡೆದಿತ್ತು. ಬೆಂಗಳೂರಿನ ಸಂಸ್ಕೃತಿ, ಕಲೆ ಹಾಗೂ ಪರಂಪರೆಯನ್ನು ಇಲ್ಲಿ ನೆಲೆಸಿರುವವರಿಗೆ ಪರಿಚಯಿಸುವುದು ಈ ಹಬ್ಬದ ಮುಖ್ಯ ಉದ್ದೇಶವಾಗಿತ್ತು. ಈ ಹಬ್ಬದ ನಿರ್ವಹಣೆಯನ್ನು ಇಲಾಖೆ ಸಂಸ್ಥೆಯೊಂದಕ್ಕೆ ನೀಡಿತ್ತು. ಇದರಿಂದಾಗಿ ಕುರ್ಚಿ ಟೇಬಲ್ ಸೇರಿ ಹಬ್ಬಕ್ಕೆ ಬೇಕಾದ ವಸ್ತುಗಳಿಗೆ ದುಪ್ಪಟ್ಟು ಹಣ ಪಾವತಿಸಲಾಗಿದೆ ಎಂದು ಕಲಾವಿದರು ಆರೋಪಿಸಿದ್ದಾರೆ.

‘ನಮ್ಮ ಬೆಂಗಳೂರು ಹಬ್ಬಕ್ಕೆ ಸಂಬಂಧಿಸಿದಂತೆ ಇಲಾಖೆಯು ಕರ್ನಾಟಕ ಸ್ಟೇಟ್ ಮಾರ್ಕೆಟಿಂಗ್ ಕಮ್ಯೂನಿಕೇಷನ್ & ಅಡ್ವರ್ಟೈಸಿಂಗ್ ಲಿಮಿಟೆಡ್ ಗೆ ಹಣ ಪಾವತಿಸಿದೆ. ಪ್ಲಾಸ್ಟಿಕ್ ಕುರ್ಚಿಗಳಿಗೆ ತಲಾ 375ರಿಂದ 7 100 ಬಾಡಿಗೆ ಪಾವತಿಸಿದರೆ, ಟೇಬಲ್‌ಗಳಿಗೆ ತಲಾ 1 750 ಸಂದಾಯವಾಗಿದೆ. ಬೆಂಗಳೂರು ಮಾರುಕಟ್ಟೆಯಲ್ಲಿ ಸದ್ಯ ಪ್ಲಾಸ್ಟಿಕ್ ಕುರ್ಚಿಗಳು ತಲಾ 3 8ರಿಂದ 10ಗೆ ಬಾಡಿಗೆಗೆ ದೊರೆಯುತ್ತಿವೆ. ಅದೇ ರೀತಿ ಟೇಬಲ್‌ಗಳು 7 80ರಿಂದ 1100ಗೆ ಲಭ್ಯವಾಗುತ್ತಿವೆ.

ವಿಧಾನಸೌಧದಲ್ಲಿ ನಡೆದ ಮುಖ್ಯ ಕಾರ್ಯಕ್ರಮದಲ್ಲಿ ಅತಿ ಗಣ್ಯರಿಗಾಗಿ ಹಾಕಲಾಗಿದ್ದ 50 ಸೋಫಾಗಳಿಗೆ 1.2.50 ಲಕ್ಷ ಪಾವತಿಸಲಾಗಿದೆ. ಪ್ರತಿ ಸೋಫಾಗೆ 7 5 ಸಾವಿರ ಬಾಡಿಗೆ ನೀಡಿದಂತಾಗಿದೆ. ಬ್ಯಾಂಕ್ವೆಟ್ ಕುರ್ಚಿಗಳಿಗೆ ತಲಾ 200 ಬಾಡಿಗೆ ಪಾವತಿಸಲಾಗಿದೆ. ಹಬ್ಬದ ಎರಡು ಪ್ರವೇಶ ಕಮಾನು ಹಾಗೂ ವೇದಿಕೆಯ ಹಿಂದಿನ ಪರದೆಗೆ 7 32.50 ಲಕ್ಷ ಹಣ ಬಿಲ್ ಮಾಡಲಾಗಿದೆ.

ತಾರತಮ್ಯ ಆರೋಪ: ಇಲಾಖೆಯು ಟೆಂಡರ್ ಕರೆಯದ ಸಂಸ್ಥೆಯೊಂದಕ್ಕೆ ಕಾರ್ಯಕ್ರಮ ನಿರ್ವಹಣೆಯ ಅವಕಾಶ ನೀಡಿ, ಹಣ ಪಾವತಿಸಿರುವುದಕ್ಕೂ ಸಾಂಸ್ಕೃತಿಕ ವಲಯದಲ್ಲಿ ಆಕ್ಷೇಪ ವ್ಯಕ್ತವಾಗಿದೆ. ಚಲನಚಿತ್ರ ಗಾಯಕರ ಬ್ಯಾಂಡ್‌ಗಳು ಹಾಗೂ ಜಾನಪದ ಸೇರಿ ವಿವಿಧ ಸಾಂಪ್ರದಾಯಿಕ ಕಲಾ ಪ್ರಕಾರಗಳ ತಂಡಗಳಿಗೆ ಪಾವತಿಸಿದ ಗೌರವಧನದಲ್ಲಿ ತಾರತಮ್ಯ ಮಾಡಲಾಗಿದೆ ಎಂಬ ಆರೋಪವೂ ಕೇಳಿ ಬಂದಿದೆ. ಅನನ್ಯಾ ಭಟ್, ನವೀನ್ ಸಜ್ಜು ಅವರ ಬ್ಯಾಂಡ್ ಹಾಗೂ ರಿಯಾಲಿಟಿ ಶೋಗಳ ಗಾಯಕರಿಗೆ ಒಟ್ಟು 7:41:50 ಲಕ್ಷ ಪಾವತಿಸಿದರೆ, ಇಲಾಖೆ ವತಿಯಿಂದ ಎರಡು ದಿನ ಪ್ರದರ್ಶನ ನೀಡಿದ ಕಲಾ ತಂಡಗಳು ಹಾಗೂ ಕಲಾವಿದರಿಗೆ ಒಟ್ಟು 7 25 ಲಕ್ಷ ನೀಡಲಾಗಿದೆ.

‘ನಿಯಮಿತವಾಗಿ ಸಾಂಸ್ಕೃತಿಕ ಕಾರ್ಯಕ್ರಮ ನೀಡುತ್ತಿರುವ ಸಂಘ-ಸಂಸ್ಥೆಗಳಿಗೆ ಧನಸಹಾಯ ನೀಡದ ಇಲಾಖೆ, ಬೆಂಗಳೂರು ಹಬ್ಬದ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ವೆಚ್ಚ ಮಾಡಿದೆ. ಜಾನಪದ ಸೇರಿ ವಿವಿಧ ಸಾಂಪ್ರದಾಯಿಕ ಕಲೆಗಳನ್ನು ಕಡೆಗಣಿಸಿ, ಚಲನಚಿತ್ರದ ಗಾಯಕರಿಗೆ ಮಣೆ ಹಾಕಲಾಗಿತ್ತು ಎಂದು ಕಲಾವಿದ ಜಯಸಿಂಹ ಎಸ್, ಅವರು ಅಸಮಾಧಾನ ವ್ಯಕ್ತಪಡಿಸಿದರು.

‘ನಮ್ಮ ಬೆಂಗಳೂರು ಹಬ್ಬದ ಬಗ್ಗೆ, ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ನಡೆಸಿರುವುದಕ್ಕೆ 725 ಲಕ ಪಾವತಿಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಹಬ್ಬದ ಒಟ್ಟು 18 ವಿಡಿಯೊ ಪೋಸ್ಟ್ ಮಾಡಲಾಗಿದೆ, 2 ಸಾವಿರ ಆಮಂತ್ರಣ ಪತ್ರಿಕೆಗಳಿಗೆ 13 ಲಕ್ಷ ಪಾವತಿಸಲಾಗಿದೆ, ಇದೇ ರೀತಿ ಕನ್ನ ವಿದ್ಯುತ್ ದೀಪಗಳು ಸೇರಿ ವಿವಿಧ ವಸ್ತುಗಳು ಹಾಗೂ ಉಪಕರಣಗಳಿಗೆ ಹೆಚ್ಚಿನ ಬಾಡಿಗೆ ಪಾವತಿಸಲಾಗಿದೆ ಎಂದು ಆಕ್ಷೇಪ ವ್ಯಕ್ತವಾಗಿದೆ.

Tags: 5.60 croresBangaloreBangalore festivalBJP Governmentbjpvscongressbsbommaibsyediyurappacelebrate 'Namma Bangalore HabbacmsiddaramiahCongress PartyCultureDepartment of Kannadafestivalrashoketwo-day festivalUdyan and Vidhana Soudha
Previous Post

ಮತಾಂತರಕ್ಕೆ ಸಿದ್ದು ರಾಯಭಾರಿ! ಕಾಯ್ದೆ ರದ್ಧತಿಗೆ ಆರ್. ಅಶೋಕ್ ಛೀಮಾರಿ

Next Post

ಗೃಹ ಜ್ಯೋತಿ ಯೋಜನೆ : 45.61 ಲಕ್ಷ ನೋಂದಣಿ

Related Posts

ರಾಜ್ಯದ ಮೊದಲ ಸರ್ಕಾರಿ ಶಾಲೆಯಲ್ಲಿ ಎಐ ಟೀಚರ್ ‘ಐರಿಸ್’ ಪ್ರವೇಶ
ಕರ್ನಾಟಕ

ರಾಜ್ಯದ ಮೊದಲ ಸರ್ಕಾರಿ ಶಾಲೆಯಲ್ಲಿ ಎಐ ಟೀಚರ್ ‘ಐರಿಸ್’ ಪ್ರವೇಶ

by ಪ್ರತಿಧ್ವನಿ
April 11, 2026
0

ಕುಂದಾಪುರ: ವಂಡ್ಸೆ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮುಂದಿನ ಶೈಕ್ಷಣಿಕ ವರ್ಷದಿಂದ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಪ್ರಯೋಗಕ್ಕೆ ಮುಂದಾಗಿದೆ. ಶಿಕ್ಷಕರ ಜೊತೆಗೂಡಿ ಎಐ (Artificial Intelligence)...

Read moreDetails
ಭೂಮಿಗೆ ಮೀರಿದ ಜನಸಂಖ್ಯೆ ಒತ್ತಡ: 2070ರೊಳಗೆ ಗಂಭೀರ  ಸಂಕಟದ ಎಚ್ಚರ

ಭೂಮಿಗೆ ಮೀರಿದ ಜನಸಂಖ್ಯೆ ಒತ್ತಡ: 2070ರೊಳಗೆ ಗಂಭೀರ  ಸಂಕಟದ ಎಚ್ಚರ

April 11, 2026
ಪ್ರತಿಧ್ವನಿ: ಸತ್ಯದ ಧ್ವನಿಯಾಗಿ ಏಳು ವರ್ಷದ ಯಶಸ್ವಿ ಪಯಣ

ಪ್ರತಿಧ್ವನಿ: ಸತ್ಯದ ಧ್ವನಿಯಾಗಿ ಏಳು ವರ್ಷದ ಯಶಸ್ವಿ ಪಯಣ

April 11, 2026
ಎಸ್‌ಎಸ್‌ಎಲ್‌ಸಿ ಪರೀಕ್ಷಾ ನಿಯಮಗಳಲ್ಲಿ ಮಹತ್ವದ ಬದಲಾವಣೆ: ಉತ್ತೀರ್ಣತೆಗೆ ಹೊಸ ಅಂಕಗಳ ನಿಯಮ ಜಾರಿ

ಎಸ್‌ಎಸ್‌ಎಲ್‌ಸಿ ಪರೀಕ್ಷಾ ನಿಯಮಗಳಲ್ಲಿ ಮಹತ್ವದ ಬದಲಾವಣೆ: ಉತ್ತೀರ್ಣತೆಗೆ ಹೊಸ ಅಂಕಗಳ ನಿಯಮ ಜಾರಿ

April 11, 2026
₹10,000 ಮೇಲ್ಪಟ್ಟ ಯುಪಿಐ ವಹಿವಾಟಿಗೆ ‘ಒಂದು ಗಂಟೆ’ ವಿಳಂಬ? ವಂಚನೆ ತಡೆಗೆ RBI ಹೊಸ ಯೋಜನೆ

ಪ್ಲೂಟೋಗೆ ಮತ್ತೆ ಗ್ರಹ ಸ್ಥಾನಮಾನ? ಬಾಲಕಿಯ ಪತ್ರದಿಂದ ವಿಜ್ಞಾನ ಲೋಕದಲ್ಲಿ ಚರ್ಚೆ

April 10, 2026
Next Post
ಗೃಹ ಜ್ಯೋತಿ ಯೋಜನೆ : 45.61 ಲಕ್ಷ ನೋಂದಣಿ

ಗೃಹ ಜ್ಯೋತಿ ಯೋಜನೆ : 45.61 ಲಕ್ಷ ನೋಂದಣಿ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada