Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ
No Result
View All Result
Pratidhvani
No Result
View All Result

ಫ್ಯಾಕ್ಟ್ ಚೆಕ್ಕರ್ ಆದ ಬೆಂಗಳೂರಿನ ಟೆಕ್ಕಿ: ಜುಬೈರ್ ಬದುಕಿನ ಸ್ಪೂರ್ತಿದಾಯಕ ಕಥೆ

ಫಾತಿಮಾ

ಫಾತಿಮಾ

July 5, 2022
Share on FacebookShare on Twitter

ಭಾರತದ ಪ್ರತಿಷ್ಠಿತ ಸತ್ಯ-ಪರಿಶೀಲನಾ(fact checking) ಸಂಸ್ಥೆಗಳಲ್ಲಿ ಒಂದಾದ ಆಲ್ಟ್‌ನ್ಯೂಸ್‌ನ ಸಹ-ಸಂಸ್ಥಾಪಕ ಜುಬೈರ್ ಅವರನ್ನು 2018 ರಲ್ಲಿ ಹಿಂದೂ ದೇವರು ಹನುಮಂತನನ್ನು ಅನ್ನು ಉಲ್ಲೇಖಿಸಿ ಮಾಡಿದ ಟ್ವೀಟ್‌ಗಾಗಿ ಈ ವಾರ ಬಂಧಿಸಲಾಯಿತು.  ಆದರೆ ಟ್ವಿಟ್ಟರ್‌ನಲ್ಲಿ ಅರ್ಧ ಮಿಲಿಯನ್‌ಗಿಂತಲೂ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ಅವರಿಗೆ ಈ‌ ಕ್ಷೇತ್ರಕ್ಕೆ ಬರುವ ಮೊದಲು ರಾಜಕೀಯದಲ್ಲಿ ಆಸಕ್ತಿಯೇ ಇರಲಿಲ್ಲ, ಸ್ಥಳೀಯ ಶಾಸಕರು ಯಾರು ಎಂದು ಸಹ ತಿಳಿದಿರಲಿಲ್ಲ ಎನ್ನುತ್ತಾರೆ ಅವರ ಆಪ್ತರು.

ಹೆಚ್ಚು ಓದಿದ ಸ್ಟೋರಿಗಳು

ಸರ್ದಾರ್ ಪಟೇಲ್ vs ಸಾವರ್ಕರ್ : ಏನು ಹೇಳುತ್ತೆ ಇತಿಹಾಸ?

ಉದ್ಯಮಿ ಗೌತಮ್ ಅದಾನಿಗೆ Z ಶ್ರೇಣಿ ಭದ್ರತೆ

ರಾಜಕೀಯ ಪಕ್ಷಗಳು ನೀಡುವ ಭರವಸೆಗಳನ್ನು ತಡೆಯಲು ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್

ತನ್ನ ತಂದೆಯ ಸಲಹೆಯಂತೆ ಜುಬೈರ್  ಬೆಂಗಳೂರಿನ ಪ್ರತಿಷ್ಠಿತ ಎಂಎಸ್ ರಾಮಯ್ಯ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ ಪಡೆದಿದ್ದರು. ಆ ನಂತರ ಬೆಂಗಳೂರಿನ ಏರ್‌ಟೆಲ್ ಮತ್ತು ಸಿಸ್ಕೋದಂತಹ ಪ್ರತಿಷ್ಠಿತ ಕಂಪನಿಗಳಲ್ಲಿ ಟೆಲಿಕಾಂ ಎಂಜಿನಿಯರ್ ಆಗಿ ಕೆಲಸ ಮಾಡಿದ್ದರು. ಬಳಿಕ ಸುಮಾರು‌ ಒಂದು ದಶಕಗಳ ಸುದೀರ್ಘ ಕಾಲ‌ ನೋಕಿಯಾದಲ್ಲಿ ಕೆಲಸ ಮಾಡಿದ ಅವರು ಆನ್‌ಸೈಟ್ ಯೋಜನೆಗಳಿಗಾಗಿ ಫಿನ್ಲೆಂಡ್ ಮತ್ತು ಜಪಾನಿಗೂ ಹೋಗಿದ್ದರು ಎಂದು ಅವರ ಸ್ನೇಹಿತರು ನೆನಪಿಸಿಕೊಳ್ಳುತ್ತಾರೆ.

ಬೆಂಗಳೂರಿನ ಅತ್ಯಂತ ಯಶಸ್ವಿ ಟೆಕ್ಕಿ ಜೀವನ‌ ನಡೆಸುತ್ತಿದ್ದ ಜುಬೈರ್ ಫ್ಯಾಕ್ಟ್ ಚೆಕ್ ಕ್ಷೇತ್ರಕ್ಕೆ ಕಾಲಿಟ್ಟದ್ದೇ ಆಕಸ್ಮಿಕವಾಗಿ. ಸಾಮಾಜಿಕ ಮಾಧ್ಯಮದಲ್ಲಿ ಕ್ರಿಯಾಶೀಲರಾಗಿರುವ ಜುಬೈರ್ ಅವರಿಗೆ 2014ರಲ್ಲಿ‌ ಫೇಸ್‌ಬುಕ್‌ನಲ್ಲಿ ಆಗಿನ‌ ಯುಪಿಎ ಸರ್ಕಾರವನ್ನು ಟೀಕಿಸಿದ ರಾಜಕೀಯ‌‌ ಪುಟಗಳು ಕಂಡುಬರುತ್ತದೆ. ಅದೇ ವರ್ಷ ಜೂನ್‌ನಲ್ಲಿ ಬಿಜೆಪಿ ನಾಯಕ ಸುಬ್ರಮಣ್ಯ ಸ್ವಾಮಿಯ ಹೆಸರಲ್ಲಿ ತಮ್ಮದೇ ಪುಟವೊಂದನ್ನು ಪ್ರಾರಂಭಿಸಿ ವಿಶ್ವವಿಖ್ಯಾತ ಮೊನಾಲಿಸಾ ಚಿತ್ರಕ್ಕೆ ಬಿಂದಿ ಮತ್ತು ಸೀರೆಯನ್ನು ಧರಿಸಿರುವಂತೆ ಫೊಟೋಶಾಪ್ ಮಾಡಿ “ಮೋನಾಲಿಸಾ ಭಾರತೀಯಳು ಎಂದು ನಿಮಗೆ ತಿಳಿದಿದೆಯೇ?” ಎಂದು ವ್ಯಂಗ್ಯವಾಗಿ ಪೋಸ್ಟ್ ಮಾಡುತ್ತಾರೆ.

ಆನಂತರ ಸ್ವತಃ ಸುಬ್ರಹ್ಮಣ್ಯ ಸ್ವಾಮಿಯವರಿಂದ ಲೀಗಲ್ ನೋಟಿಸ್ ಪಡೆಯುವ ಜುಬೈರ್ ತಮ್ಮ ಪೇಜ್‌ನ ಹೆಸರಿನ‌ ಮುಂದೆ ‘ಅನ್‌ಅಫಿಷಿಯಲ್’ ಎಂಬ ಪದವನ್ನು ಸೇರಿಸಿ ಪೋಸ್ಟ್ ಮಾಡುವುದನ್ನು ಮುಂದುವರೆಸುತ್ತಾರೆ. ಇದೇ ಅವಧಿಯಲ್ಲಿ ಅವರು ಅಹಮದಾಬಾದ್ ಮೂಲದ ಸಾಫ್ಟ್‌ವೇರ್ ಎಂಜಿನಿಯರ್ ಪ್ರತೀಕ್ ಸಿನ್ಹಾ ಅವರ ಸಂಪರ್ಕಕ್ಕೆ ಬಂದರು. ಪ್ರತೀಕ್ ಅವರ ತಂದೆ ಮುಕುಲ್ ಮತ್ತು ತಾಯಿ‌ ನಿರ್ಝರಿ ಅವರು ವಿಜ್ಞಾನಿಗಳಾಗಿದ್ದು, ಅಹಮದಾಬಾದ್‌ನ Physical Research Laboratoryಯಲ್ಲಿ ತಮ್ಮ ಹಕ್ಕುಗಳಿಗಾಗಿ ಹೋರಾಡುವ ಕಾರ್ಮಿಕರನ್ನು ಸಂಘಟಿಸುವಲ್ಲಿ ತೊಡಗಿಸಿಕೊಂಡ ನಂತರ ತಮ್ಮ ಕೆಲಸವನ್ನು ಕಳೆದುಕೊಂಡವರು. ಪ್ರತೀಕ್ ಅವರು ಮತ್ತೊಂದು ಜನಪ್ರಿಯ ಫೇಸ್‌ಬುಕ್ ಪುಟ ಮತ್ತು ವೆಬ್‌ಸೈಟ್  ‘ಟ್ರುತ್ ಆಫ್ ಗುಜರಾತ್’  ಅನ್ನು ನಡೆಸುತ್ತಿದ್ದರು.

ಯುನೈಟೆಡ್ ಸ್ಟೇಟ್ಸ್‌ನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಪ್ರತೀಕ್ 2013 ರಲ್ಲಿ, ಮುಕುಲ್‌ಗೆ ಕ್ಯಾನ್ಸರ್ ಇರುವುದು ಪತ್ತೆಯಾದಾಗ, ಅಹಮದಾಬಾದ್‌ಗೆ  ಹಿಂತಿರುಗಿದ್ದರು. ಮೊದಲ ಬಾರಿ ಪ್ರತೀಕ್  ಜುಬೈರ್ ಅವರನ್ನು , ‘ಟ್ರೂತ್ ಆಫ್ ಗುಜರಾತ್’ ಪುಟದಿಂದ ಯಾವುದೇ ಕಾರಣವಿಲ್ಲದೆ ಒಂದು ಪೋಸ್ಟನ್ನು ತೆಗೆದುಕೊಂಡಿದ್ದಕ್ಕಾಗಿ ಅವರನ್ನು ಖಂಡಿಸಲು ಸಂಪರ್ಕಿಸಿದ್ದರು. “ಆದರೆ ಅತ್ಯಂತ ಶೀಘ್ರವಾಗಿ ಅವರಿಬ್ಬರ ಯೋಚನೆಗಳಲ್ಲಿ ಎಷ್ಟು ಸಾಮ್ಯತೆ ಇದೆ ಎಂಬುವುದನ್ನು ಅವರು ಅರಿತುಕೊಂಡರು” ಎನ್ನುತ್ತಾರೆ ನಿರ್ಝರಿ.   ಇಬ್ಬರೂ ಸಾಫ್ಟ್‌ವೇರ್ ಇಂಜಿನಿಯರ್‌ಗಳಾಗಿದ್ದು, ಕೆಲಸ ಮಾಡುತ್ತಲೇ ಜನಪ್ರಿಯ ಸಾಮಾಜಿಕ ಮಾಧ್ಯಮ ಪುಟಗಳನ್ನು ನಿರ್ವಹಿಸುತ್ತಿದ್ದರು.  ಅವರಿಬ್ಬರೂ ಜನರನ್ನು ಜವಾಬ್ದಾರಿಯುತ ಪ್ರಜೆಗಳನ್ನಾಗಿ ಮಾಡಲು ಉತ್ಸುಕರಾಗಿದ್ದರು ಮತ್ತು ಆನ್‌ಲೈನ್‌ನಲ್ಲಿ ‘ಸುದ್ದಿ’ಯಾಗಿ ಹರಡುವ ತಪ್ಪು ಮಾಹಿತಿ ಮತ್ತು ದ್ವೇಷದ ಬಗ್ಗೆ ಸಮಾನವಾಗಿ ಚಿಂತೆಗೊಳಗಾಗಿದ್ದರು.

2016 ರಲ್ಲಿ,  ಕೆಲಸದ ನಿಮಿತ್ತ ಅಹಮದಾಬಾದ್‌ಗೆ ಪ್ರಯಾಣ ಬೆಳೆಸಿದ ಜುಬೈರ್ ಅಲ್ಲಿ  ಸಿನ್ಹಾರನ್ನು ಭೇಟಿಯಾದರು, ‘ಆಲ್ಟ್ ನ್ಯೂಸ್’ ಅನ್ನು ಪ್ರಾರಂಭಿಸುವ ಕಲ್ಪನೆ ಮೊದಲು ಅಲ್ಲಿ ಹುಟ್ಟಿಕೊಂಡಿತು.  “ಭಾರತೀಯ ಮಾಧ್ಯಮದಲ್ಲಿ  ವೆಬ್‌ಸೈಟ್‌ಗಳು ಅಸ್ತಿತ್ವದಲ್ಲಿಲ್ಲದ ಸಮಯದಲ್ಲಿ ನಾವು ಸತ್ಯ ಪರಿಶೀಲನೆಯ ವೆಬ್‌ಸೈಟನ್ನು ಪ್ರಾರಂಭಿಸಲು ಹೊರಟೆವು” ಎಂದು ನಿರ್ಝರಿ ನೆನಪಿಸಿಕೊಳ್ಳುತ್ತಾರೆ.

ದನದ ಚರ್ಮ ಸುಲಿದದ್ದಕ್ಕಾಗಿ ದಲಿತರನ್ನು ಸಾರ್ವಜನಿಕವಾಗಿ ಥಳಿಸಿರುವುದನ್ನು ವಿರೋಧಿಸಿ ನೂರಾರು ಪ್ರತಿಭಟನಾಕಾರರು ಅಹಮದಾಬಾದ್‌ನಿಂದ ಉನಾಕ್ಕೆ ಸುಮಾರು 300 ಕಿಲೋಮೀಟರ್‌ಗಳಷ್ಟು ಕಾಲ್ನಡಿಗೆ ಜಾಥಾ ಹೊರಟಾಗ, ಆ ಪ್ರತಿಭಟನೆಯಲ್ಲಿ ತನ್ನ ತಾಯಿಯೊಂದಿಗೆ ಭಾಗವಹಿಸಿದ ಪ್ರತೀಕ್ , #ChaloUna ಹ್ಯಾಶ್‌ಟ್ಯಾಗ್‌ನೊಂದಿಗೆ ಇಡೀ ಪ್ರತಿಭಟನೆಯನ್ನು ಆನ್‌ಲೈನ್‌ಗೆ ಅಪ್ಲೋಡ್ ಮಾಡಿದ್ದರು. ಮುಖ್ಯ ವಾಹಿನಿಯ ಮಾಧ್ಯಮಗಳಿಂದ ನಿರ್ಲಕ್ಷ್ಯಕ್ಕೊಳಗಾಗಿದ್ದ ಈ ಪ್ರತಿಭಟನೆ ಆನ್‌ಲೈನ್ ಟ್ರೆಂಡ್ ಆಯಿತು. ಆ ಹೊತ್ತಿಗೆ ಪ್ರತೀಕ್ ಅವರಿಗೆ ತಾವಿದ್ದ ಸಾಫ್ಟ್ವೇರ್ ಕೆಲಸವನ್ನು ಬಿಟ್ಟು ಸತ್ಯ ಪರಿಶೋಧನೆಯಲ್ಲಿ ತಮ್ಮನ್ನು ತಾವು ಪೂರ್ಣವಾಗಿ ತೊಡಗಿಸಿಕೊಳ್ಳಬೇಕು ಅನಿಸಿತು.

ಕೌಟುಂಬಿಕ ಕಟ್ಟುಪಾಡುಗಳಿಂದಾಗಿ ಜುಬೈರ್ ಇನ್ನೂ ಪೂರ್ಣಾವಧಿಗೆ ಸೇರ್ಪಡೆಯಾಗದಿದ್ದರೂ, ಫೆಬ್ರವರಿ 2017 ರಲ್ಲಿ ಆಲ್ಟ್ ನ್ಯೂಸ್ ವೆಬ್‌ಸೈಟ್ ಅನ್ನು ಪ್ರಾರಂಭಿಸಲಾಯಿತು. ಇದನ್ನು ಡೊನಾಲ್ಡ್ ಟ್ರಂಪ್ “ಬಿಜೆಪಿಗೆ ಮತ ನೀಡಿ” ಎಂಬ ಫೋಲ್ಡರ್ ಅನ್ನು ಹಿಡಿದಿರುವ ಜಿಐಎಫ್ ಅನ್ನು ಡಿಬಂಕ್ ಮಾಡುವುದರ ಮೂಲಕ  ಪ್ರಾರಂಭಿಸಲಾಯಿತು. ಜುಬೈರ್ ಸೆಪ್ಟೆಂಬರ್ 2018 ರಲ್ಲಿ ಆಲ್ಟ್ ನ್ಯೂಸ್‌ಗೆ ಪೂರ್ಣಾವಧಿಗೆ ಸೇರುತ್ತಾರೆ. ಅವರು ಸತ್ಯ-ಪರಿಶೀಲನೆಯ ಕಾರ್ಯಯೋಜನೆಗಳನ್ನು (fact checking) ನಿರ್ವಹಿಸುತ್ತಾರೆ ಮತ್ತು  ಬೆಳೆಯುತ್ತಿರುವ ಸಾಮಾಜಿಕ ಮಾಧ್ಯಮ ಉಪಸ್ಥಿತಿಯನ್ನು ಬಳಸಿಕೊಂಡು ತಪ್ಪು ಮಾಹಿತಿಯತ್ತ ಗಮನ ಸೆಳೆಯುತ್ತಾರೆ.  Alt News ತನ್ನ ಸತ್ಯ-ಪರಿಶೀಲನೆಯ ಕಥೆಗಳನ್ನು ನಿಖರವಾದ ಪುರಾವೆಗಳೊಂದಿಗೆ ಜನರ ಮುಂದಿಡುತ್ತಿತ್ತು.  ಉದಾಹರಣೆಗೆ, 2015 ರ ಶಾಖದ ಅಲೆಯ ಚಿತ್ರಗಳನ್ನು ಬಾಲಕೋಟ್ ವೈಮಾನಿಕ ದಾಳಿಯದ್ದು ಎಂದು ಉದ್ದೇಶಪೂರ್ವಕವಾಗಿ ಹಂಚಿಕೊಳ್ಳಲಾಗುತ್ತಿದೆ ಎಂಬುವುದನ್ನು ರಿವರ್ಸ್ ಇಮೇಜ್ ಮೂಲಕ ಅವರು ಸಾಬೀತು ಪಡಿಸಿದರು.

ಆದರೆ ಜುಬೈರ್ ಮತ್ತು ಸಿನ್ಹಾ ಅವರಿಗೆ ತಪ್ಪು ಮಾಹಿತಿಗಳು ಆಕಸ್ಮಿಕವಾಗಿ ಹರಡುತ್ತಿಲ್ಲ, ಅವರು ಡಿಬಂಕಿಂಗ್ ಮಾಡುತ್ತಿದ್ದ ಸುದ್ದಿಗಳಲ್ಲಿ ಒಂದು ವಿಶಿಷ್ಟ ಮಾದರಿಗಳು ಇದೆ ಎಂಬುವುದು ಬಲುಬೇಗ ಅರಿವಿಗೆ ಬಂತು. ಅವರು ಮಾಡಿದ್ದ ಗಮನಾರ್ಹ ಸಂಖ್ಯೆಯ ಸತ್ಯ-ತಪಾಸಣೆಗಳು  ಅಲ್ಪಸಂಖ್ಯಾತರನ್ನು ಗುರಿಯನ್ನಾಗಿಸಿಕೊಂಡಿದ್ದ ದ್ವೇಷ ಭಾಷಣವನ್ನು ಹೊಂದಿದ್ದವು. ಉದಾಹರಣೆಗೆ, “ಪಾಕಿಸ್ತಾನ ಜಿಂದಾಬಾದ್” ಅನ್ನುವ ವಿಡಿಯೋವನ್ನು ಭಾರತದ್ದು ಎಂದು ಹಂಚಿಕೊಳ್ಳಲಾಗಿತ್ತು. ಆದರೆ ಆ ವೀಡಿಯೊ ಕರಾಚಿ ಅಥವಾ ಬಾಂಗ್ಲಾದೇಶ ಮೂಲದ್ದು ಎಂದು ಆ ನಂತರ ಸಾಬೀತಾಯಿತು “ಎಂದು ನಿರ್ಝರಿ ಹೇಳುತ್ತಾರೆ.

ಪಟ್ಟುಬಿಡದೆ ಸತ್ಯವನ್ನು ಪರಿಶೀಲಿಸುವ ‘ಆಲ್ಟ್ ನ್ಯೂಸ್’ ಜನಪ್ರಿಯ ವೆಬ್‌ಸೈಟ್‌ಗಳ ಹಿಂದಿನ ಜನರು ಮತ್ತು ರಾಜಕೀಯ ಪಕ್ಷಗಳೊಂದಿಗೆ ಅವರಿಗಿರುವ ಲಿಂಕ್‌ಗಳ ಬಗ್ಗೆ ತನಿಖೆ ನಡೆಸಿತು.  “ಅವರು ದಿನನಿತ್ಯ ಅಂತರ್ಜಾಲದಲ್ಲಿ ಹರಿದಾಡುವ ವಿಡಿಯೋಗಳ  ಸತ್ಯ-ಪರೀಶೀಲನೆಯನ್ನು ಮೀರಿ ಆಡಳಿತ ಪಕ್ಷಕ್ಕೆ ಸಂಬಂಧಿಸಿರುವ ನಕಲಿ ಸುದ್ದಿ ಸೈಟ್‌ಗಳ ಬೆನ್ನುಬಿದ್ದಾಗ ಸಮಸ್ಯೆಗಳು ಪ್ರಾರಂಭವಾದವು” ಎನ್ನುತ್ತಾರೆ ನಿರ್ಝರಿ .

ಮೇ 2017 ರಲ್ಲಿ, ಆಲ್ಟ್ ನ್ಯೂಸ್ ಜನಪ್ರಿಯ ಸುದ್ದಿ ಸೈಟ್ ಮತ್ತು ಬಿಜೆಪಿ ಐಟಿ ಸೆಲ್ ನಡುವಿನ ಸಂಪರ್ಕವನ್ನು ಬಹಿರಂಗಪಡಿಸುವ ಕಥೆಯನ್ನು ಪ್ರಕಟಿಸಿತು. ಅವರ ಕೆಲಸ,  ಹೋರಾಟ ಮತ್ತು ಆಡಳಿತ ಪಕ್ಷಕ್ಕೆ  ಪ್ರಶ್ನೆಗಳನ್ನು ಕೇಳುವುದು ಬಿಜೆಪಿ ನಾಯಕರಿಂದ ಪರಿಶೀಲನೆಗೆ ಒಳಗಾಗಲು ಪ್ರಾರಂಭಿಸಿತು.  ಜುಬೈರ್ ವಿರುದ್ಧ ಅಪ್ರಾಪ್ತರಿಗೆ  ಕಿರುಕುಳ ಮತ್ತು ಚಿತ್ರಹಿಂಸೆ ನೀಡಿದ ಎರಡು ಪ್ರಕರಣಗಳು ದಾಖಲಾಯಿತು. ಅವರನ್ನು ಇಂಟರ್ನೆಟ್‌ನಲ್ಲಿ ನಿಂದಿಸಿದಾಗ ಆ  ಬಳಕೆದಾರರ ಡಿಸ್‌ಪ್ಲೇ  ಚಿತ್ರದಲ್ಲಿದ್ದ ಮಗುವಿನ ಚಿತ್ರವನ್ನು ಬ್ಲರ್ ಮಾಡಿದ ಜುಬೈರ್  “ನಿಮ್ಮ ಮುದ್ದಾದ ಮೊಮ್ಮಗಳಿಗೆ ಸಾಮಾಜಿಕ ಮಾಧ್ಯಮದಲ್ಲಿ ಜನರನ್ನು ನಿಂದಿಸುವ ನಿಮ್ಮ ಪಾರ್ಟ್‌ಟೈಮ್ ಕೆಲಸದ ಬಗ್ಗೆ ತಿಳಿದಿದೆಯೇ?  ನಿಮ್ಮ ಪ್ರೊಫೈಲ್ ಚಿತ್ರವನ್ನು ಬದಲಾಯಿಸಲು ನಾನು ನಿಮಗೆ ಸಲಹೆ ನೀಡುತ್ತೇನೆ” ಎಂದು ಟ್ವೀಟ್ ಮಾಡಿದ್ದರು. ಈ ಟ್ವೀಟ್ ಎಫ್‌ಐಆರ್ ದಾಖಲಾಗಿದ್ದರೂ ಸಹ ಸ್ವತಃ ದೆಹಲಿ ಪೊಲೀಸರೇ “ಜುಬೈರ್ ಅವರ ಟ್ವೀಟ್ ಯಾವುದೇ ಗುರುತರ ಅಪರಾಧವನ್ನು ಹೊಂದಿಲ್ಲ” ಎಂದು  ಈ ವರ್ಷದ ಮೇಯಲ್ಲಿ ಹೈಕೋರ್ಟ್‌ಗೆ ತಿಳಿಸಿದ್ದಾರೆ.

ಈ ವರ್ಷದ ಜೂನ್‌ನಲ್ಲಿ, ಹಿಂದುತ್ವದ ನಾಯಕರಾದ ಬಜರಂಗ ಮುನಿ ಮತ್ತು ಯತಿ ನರಸಿಂಹಾನಂದರನ್ನು ‘ದ್ವೇಷದ ದೊರೆಗಳು’ (hate mongers)ಎಂದು ಕರೆದಿದ್ದಕ್ಕಾಗಿ ಜುಬೇರ್ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.  ಈ ಹಿಂದೆ ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಯತಿ ನರಸಿಂಹಾನಂದ್ ವಿರುದ್ಧ ದ್ವೇಷಪೂರಿತ ಭಾಷಣ ಮಾಡಿದ್ದಕ್ಕಾಗಿ ಪ್ರಕರಣ ದಾಖಲಿಸಲಾಗಿತ್ತು.  ಬಲಪಂಥೀಯ ನಾಯಕರು ಜುಬೈರ್ ವಿರುದ್ಧ ಎಷ್ಟು ದ್ವೇಷ ಹೊಂದಿದ್ದರು ಎಂದರೆ,  2018 ರಿಂದ ಜುಬೈರ್ ಅವರು ಪೋಸ್ಟ್ ಮಾಡಿದ್ದ ವಿಡಂಬನಾತ್ಮಕ ಪೋಸ್ಟ್ ಅನ್ನು ರಿಪೋರ್ಡ್ ಮಾಡಿದ ‘ದಿ ಹಾಕ್ ಐ’ ಎಂಬ ಟ್ವಿಟರ್ ಖಾತೆಯು  ಜುಬೈರ್ ಅವರನ್ನು ಬಂಧಿಸಲು ಆನ್‌ಲೈನ್ ಅಭಿಯಾನ ನಡೆಸಿತ್ತು.  “ದೇವರುಗಳು, ಧರ್ಮ, ಸಂಸ್ಕೃತಿ ಮತ್ತು ಧರ್ಮಗ್ರಂಥಗಳನ್ನು ಅವಹೇಳನ ಮಾಡುವವರ ವಿರುದ್ಧ ಪೊಲೀಸರು ಕ್ರಮ ತೆಗೆದುಕೊಳ್ಳುವಂತೆ” ಕೇಳಿಕೊಳ್ಳಲಾಗಿತ್ತು.

ಈ ಅಭಿಯಾನ ಮತ್ತಷ್ಟು ತೀವ್ರವಾದದ್ದು ಪ್ರವಾದಿ ಮುಹಮ್ಮದ್ ವಿರುದ್ಧ ಅವಹೇಳನಕಾರಿ ಕಾಮೆಂಟ್‌ಗಳನ್ನು ಜುಬೈರ್ ಹೈಲೈಟ್ ಮಾಡಿದ ನಂತರ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಅವರನ್ನು ಅಮಾನತುಗೊಳಿಸಿದ ನಂತರ. ತನ್ನನ್ನು ತಾನು ಟೆಕ್ ಬಿಲಿಯನೇರ್ ಎಂದು ಕರೆದುಕೊಳ್ಳುವ ಅರುಣ್ ಪುದೂರ್ ಎಂಬ ವ್ಯಕ್ತಿ ಜುಬೈರ್ ಮತ್ತು ಆಲ್ಟ್ ನ್ಯೂಸ್ ವಿರುದ್ಧ ಕಾನೂನು ಕ್ರಮವನ್ನು ಪ್ರಾರಂಭಿಸಲು ಸಿದ್ಧರಿರುವ ಯಾರಿಗಾದರೂ ಹಣವನ್ನು ನೀಡುವ ಭರವಸೆಯನ್ನೂ ನೀಡಿದ್ದರು. 

ಈ ಎಲ್ಲಾ ಆನ್‌ಲೈನ್ ಒತ್ತಡಗಳು ಅಂತಿಮವಾಗಿ ಜೂನ್ 27 ರಂದು ದೆಹಲಿ ಪೊಲೀಸರಿಂದ ಜುಬೈರ್‌ರ ಬಂಧನದಲ್ಲಿ ಕೊನೆಗೊಂಡವು. “ನಾವು ಇದನ್ನು ನಿರೀಕ್ಷಿಸಿದ್ದೆವು.  ಅವರ  ಕೆಲಸವು ಅನೇಕ ಸುಳ್ಳುಗಳನ್ನು ಬಹಿರಂಗಪಡಿಸಿದೆ ಮತ್ತು ಅದನ್ನು ಒಕ್ಕೂಟ ಸರ್ಕಾರವು ವಿರೋಧಿಸುತ್ತದೆ. ಅವರು ಸುಳ್ಳು ಸುಳ್ಳಾಗಿಯೇ ಉಳಿಯಬೇಕೆಂದು ಬಯಸಿದ್ದರು” ಎಂದು ನಿರ್ಝರಿ ಹೇಳುತ್ತಾರೆ.

ಒಂದು ವಾರದಿಂದ ಪೊಲೀಸ್ ಕಸ್ಟಡಿಯಲ್ಲಿರುವ ಜುಬೈರ್‌ಗೆ  ಆಲ್ಟ್ ನ್ಯೂಸ್‌ನ  ಸಹ ಸಂಸ್ಥಾಪಕರು ಬೆಂಬಲ ನೀಡಿದ್ದಾರೆ.  ತನಿಖೆಯ ವೇಳೆ ಜುಬೈರ್‌ನ ಲ್ಯಾಪ್‌ಟಾಪ್ ಮತ್ತು ಹಾರ್ಡ್-ಡಿಸ್ಕ್ ಅನ್ನು ವಶಪಡಿಸಿಕೊಂಡಿರುವ ಪೊಲೀಸರ ಕ್ರಮವನ್ನು ಟೀಕಿಸಿರುವ ಅವರು  “ಟ್ವಿಟ್ ಆನ್‌ಲೈನ್‌ನಲ್ಲಿದೆ ಮತ್ತು ಅದನ್ನು ಅವರ ಹಿಂದಿನ ಫೋನ್‌ನಿಂದ ಮಾಡಲಾಗಿದೆ. ಪೊಲೀಸರು ಅವರ ಲ್ಯಾಪ್‌ಟಾಪ್ ಮತ್ತು ಸದ್ಯಕ್ಕೆ ಚಾಲ್ತಿಯಲ್ಲಿರುವ ಫೋನ್ ಅನ್ನು ವಶಪಡಿಸಿಕೊಂಡು ‌ಘಟನೆಗೆ ಸಂಬಂಧವೇ‌ ಇಲ್ಲದ ವಿಚಾರವನ್ನು ತನಿಖೆ ಮಾಡುತ್ತಿದ್ದಾರೆ ” ಎಂದು ನಿರ್ಝರಿ ಹೇಳುತ್ತಾರೆ. “ನಾವು ಪ್ರಜಾಪ್ರಭುತ್ವವನ್ನು ಬಲಪಡಿಸಲು ಅವರ ಪ್ರತಿಭೆಯನ್ನು ಬಳಸಿಕೊಳ್ಳಬೇಕು ಮತ್ತು ಅವರನ್ನು ಗುರಿಯಾಗಿಸಿ ದುರ್ಬಲಗೊಳಿಸಬಾರದು” ಎಂದೂ ಅವರು ಹೇಳುತ್ತಾರೆ.

RS 500
RS 1500

SCAN HERE

[elfsight_youtube_gallery id="4"]

don't miss it !

ಗಾಳಿಪಟ 2 ಸಿನಿಮಾ ನೋಡಿ ಬಾಯಿ ಬಡೆದುಕೊಂಡ ಅಭಿಮಾನಿ
ಇದೀಗ

ಗಾಳಿಪಟ 2 ಸಿನಿಮಾ ನೋಡಿ ಬಾಯಿ ಬಡೆದುಕೊಂಡ ಅಭಿಮಾನಿ

by ಪ್ರತಿಧ್ವನಿ
August 12, 2022
ಕನ್ನಡ ರಾಜ್ಯಭಾಷೆ, ಹಿಂದಿ ರಾಷ್ಟ್ರಭಾಷೆ : ಮುರಗೇಶ್‌ ನಿರಾಣಿ
ಕರ್ನಾಟಕ

ಮುಂದಿನ ಮುಖ್ಯಮಂತ್ರಿ ಮುರುಗೇಶ ನಿರಾಣಿ : ಬ್ಯಾನರ್‌ ವಿಚಾರಕ್ಕೆ ಸ್ಪಷ್ಟನೆ ನೀಡಿದ ಸಚಿವರು

by ಪ್ರತಿಧ್ವನಿ
August 17, 2022
ಭಾರತದ ಭರವಸೆಗಳು ದೇಶದ ಹೆಣ್ಣುಮಕ್ಕಳ ಭುಜದ ಮೇಲೆ ನಿಂತಿವೆ: ರಾಷ್ಟ್ರಪತಿ ದ್ರೌಪದಿ ಮುರ್ಮು
ಕರ್ನಾಟಕ

ಭಾರತದ ಭರವಸೆಗಳು ದೇಶದ ಹೆಣ್ಣುಮಕ್ಕಳ ಭುಜದ ಮೇಲೆ ನಿಂತಿವೆ: ರಾಷ್ಟ್ರಪತಿ ದ್ರೌಪದಿ ಮುರ್ಮು

by ಪ್ರತಿಧ್ವನಿ
August 15, 2022
ರಾಜಕೀಯ ಪಕ್ಷಗಳು ನೀಡುವ ಭರವಸೆಗಳನ್ನು ತಡೆಯಲು ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್
ದೇಶ

ರಾಜಕೀಯ ಪಕ್ಷಗಳು ನೀಡುವ ಭರವಸೆಗಳನ್ನು ತಡೆಯಲು ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್

by ಪ್ರತಿಧ್ವನಿ
August 17, 2022
ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಸಾಮಾಜಿಕ & ಆರ್ಥಿಕ ಸ್ವಾತಂತ್ರ್ಯ ಸಿಕ್ಕಿಲ್ಲ : ಸಿದ್ದರಾಮಯ್ಯ
ಕರ್ನಾಟಕ

ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಸಾಮಾಜಿಕ & ಆರ್ಥಿಕ ಸ್ವಾತಂತ್ರ್ಯ ಸಿಕ್ಕಿಲ್ಲ : ಸಿದ್ದರಾಮಯ್ಯ

by ಪ್ರತಿಧ್ವನಿ
August 12, 2022
Next Post
ಜಾತಿ, ಧರ್ಮಗಳನ್ನು ಮೀರಿದ್ದು ಮಾನವೀಯತೆ : ಶಾಸಕ ಜಮೀರ್ ಅಹ್ಮದ್

ಶಾಸಕ ಜಮೀರ್ ಅಹ್ಮದ್ಗೆ ಎಸಿಬಿ ಶಾಕ್

ಸ್ವಚ್ಚ ಭಾರತದ ಸವಿಗನಸೂ ಪೌರಕಾರ್ಮಿಕರ ಬವಣೆಯೂ – ನಾ ದಿವಾಕರ

ಸ್ವಚ್ಚ ಭಾರತದ ಸವಿಗನಸೂ ಪೌರಕಾರ್ಮಿಕರ ಬವಣೆಯೂ - ನಾ ದಿವಾಕರ

ಉತ್ತರ ಪ್ರದೇಶ | ಎರಡನೇ ಅವಧಿಯ ಆದಿತ್ಯನಾಥ್ ಸರ್ಕಾರಕ್ಕೆ 100 ದಿನ : ಸಾಧನೆಗಳೇನು?

ಉತ್ತರ ಪ್ರದೇಶ | ಎರಡನೇ ಅವಧಿಯ ಆದಿತ್ಯನಾಥ್ ಸರ್ಕಾರಕ್ಕೆ 100 ದಿನ : ಸಾಧನೆಗಳೇನು?

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist