ತಮಿಳುನಾಡಿನ ಮಯಿಲಾಡುತುರೈನಲ್ಲಿ ಸ್ವಾಮೀಜಿಗಳ ಅಡ್ಡಪಲ್ಲಕ್ಕಿ ಉತಸವಕ್ಕೆ ಅನುಮತಿ ನಿರಾಕರಿಸಲಾಗಿದ್ದು ರಾಜಕೀಯ ಚರ್ಚೆಗೆ ಎಡೆಮಾಡಿಕೊಟ್ಟಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾಡಳಿತವು ಧರ್ಮಪುರಂ ಅಧೀನಂಲ್ಲಿರುವ ಸಂಪ್ರದಾಯವು ಮಾನವ ಘನತೆಗೆ ಕುದುಂಟು ಮಾಡುತ್ತದೆ ಮತ್ತು ಅದನ್ನು ಇನ್ನು ಮುಂದೆ ಯಾವುದೇ ಕಾರಣಕ್ಕು ಮುಂದುವರೆಸಬಾರದು ಎಂದು ಹೇಳಿದೆ.
ಸದ್ಯ ವಿಧಾನಮಂಡಲ ಅಧಿವೇಶನದಲ್ಲಿ ಪ್ರತಿಪಕ್ಷಗಳಾದ ಎಐಎಡಿಂಕೆ ಹಾಗೂ ಬಿಜೆಪಿಗೆ ಸ್ಟಾಲಿನ್ ಸರ್ಕಾರದ ವಿರುದ್ದ ಸಮರ ಸಾರಲು ಪ್ರಮುಖ ಅಸ್ತ್ರವಾಗಿದೆ ಮತ್ತು ಪ್ರತಿಭಟಿಸಲು ಮುಂದಾಗಿವೆ ಎಂದು ತಿಳಿದು ಬಂದಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಧಾರ್ಮಿಕ ದತ್ತಿ ಇಲಾಖೆ ಸಚಿವ ಪಿ.ಕೆ.ಶೇಖರ್ ಮುಖ್ಯಮಂತ್ರಿಗಳು ಮಠದ ಮುಖ್ಯಸ್ಥರೊಂದಿಗೆ ಮಾತನಾಡಲಿದ್ದಾರೆ ಎಂದು ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ತಮಿಳುನಾಡು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಕೆ.ಅಣ್ಣಾಮಲೈ ಒಂದು ವೇಳೆ ಸರ್ಕಾರ ಅವಕಾಶ ನೀಡದಿದ್ದರೆ ತಾವೇ ಪಲ್ಲಕ್ಕಿ ಎತ್ತುವುದಾಗಿ ಎಚ್ಚರಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಧರ್ಮಪುರಂ ಅಧೀನಂನ ಶಾಖಾ ಮಠವಾದ ಮಧುರೈ ಅಧೀನಂ ಯಾವುದೇ ಕಾರಣಕ್ಕು ಅಡ್ಡಪಲ್ಲಕ್ಕಿ ಉತ್ಸವ ನಿಲ್ಲುವುದಿಲ್ಲ ಎಂದು ಹೇಳಿದೆ.

ಈ ಕುರಿತು ಮಾತನಾಡಿರುವ ಪೀಠಾಧಿಪತಿ ಹರಿಹರ ಶ್ರೀ ಜ್ಞಾನಸಂಬಂಧ ದೇಶಿ ಸ್ವಾಮೀಜಿ ಧರ್ಮಪುರಂ ಅಧೀನಂ ಶಯವರ ಧಾರ್ಮಿಕ ಸಂಸ್ಥೆಯಾಗಿದ್ದು ಇಲ್ಲಿನ ಆಚರಣೆಗಳನ್ನು ಗೌರವಿಸಬೇಕು ವಿರೋಧಿಸಬಾರದು ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಸ್ಟಾಲಿನ್ ಈ ಕೂಡಲೇ ಮಧ್ಯಪ್ರವೇಶಿಸಿ ಇತ್ಯರ್ಥಗೊಳಿಸಬೇಕು ಎಂದು ಪೀಠಾಧಿಪತಿಗಳು ಆಗ್ರಹಿಸಿದ್ದಾರೆ.
ಈ ಉತ್ಸವದಲಿ ಭಕ್ತಾಧಿಗಳು ಸ್ವಯಂಪ್ರೇರಣೆಯಿಂದ ಗುರುಗಳನ್ನು ಅಡ್ಡಪಲ್ಲಕ್ಕಿಯಲ್ಲಿ ಹೊತ್ತುಕೊಳ್ಳುತ್ತಾರೆ ಎಂದು ಹೇಳಲಾಗಿದೆ.