ಪೊಲೀಸ್ ಕಸ್ಟಡಿಯಲ್ಲಿ ದಲಿತ ಸಾವು: ಇತ್ಯರ್ಥಕ್ಕೆ ಮುಂದಾದ ಪೊಲೀಸ್; ಅನುಮಾನ ಸೃಷ್ಟಿಸಿದ ಖಾಕಿ ನಡೆ
ಚೆನ್ನೈನಲ್ಲಿ 25 ವರ್ಷದ ವಿಘ್ನೇಶ್ ಕಸ್ಟಡಿಯಲ್ಲಿ ಸಾವನ್ನಪ್ಪಿದ ಆಘಾತಕಾರಿ ಪ್ರಕರಣ ಪ್ರಮುಖ ತಿರುವು ಪಡೆದುಕೊಂಡಿದ್ದು, ವಿಘ್ನೇಶ್ ಕುಟುಂಬವನ್ನು ಸಮಾಧಾನಪಡಿಸಲು ಮತ್ತು ಪ್ರಕರಣವನ್ನು ಇತ್ಯರ್ಥಪಡಿಸುವ ಪ್ರಯತ್ನವಾಗಿ ಅವರ ಕುಟುಂಬಕ್ಕೆ 1 ಲಕ್ಷ ರೂಪಾಯಿ ನೀಡಿರುವುದು ಬೆಳಕಿಗೆ ಬಂದಿದೆ. ವಿಘ್ನೇಶ್ ಅವರ ಉದ್ಯೋಗದಾತರಿಂದ ಕುಟುಂಬಕ್ಕೆ 1 ಲಕ್ಷ ರೂ ಪಾವತಿಸಲಾಗಿದೆ, ಆ ಹಣವನ್ನು ಅವರು ಪೊಲೀಸರಿಂದ ಪಡೆದಿದ್ದಾರೆ ಎಂದು ವಿಘ್ನೇಶ್ ಅವರ ಹಿರಿಯ ಸಹೋದರ ವಿನೋದ್ ಅವರು ಹೇಳಿದ್ದಾರೆ. ನಗರದ ಮರೀನಾ ಬೀಚ್ನಲ್ಲಿ ಕುದುರೆ ಸವಾರಿ ಮಾಡುತ್ತಿದ್ದ ವಿಘ್ನೇಶ್ನನ್ನು ಅ.18ರ ಸೋಮವಾರ ರಾತ್ರಿ ಜಿ5 ಸೆಕ್ರೆಟರಿಯೇಟ್ ಕಾಲೋನಿ ಠಾಣೆ ಪೊಲೀಸರು ಬಂಧಿಸಿದ್ದರು. ಠಾಣೆಯಲ್ಲಿ ವಿಘ್ನೇಶ್ ಮೂರ್ಛೆ ತಪ್ಪಿದ್ದು, ಆಸ್ಪತ್ರೆಗೆ ಕರೆದೊಯ್ಯುವಾಗ ಮೃತಪಟ್ಟಿದ್ದಾರೆ ಎಂದು ಮರುದಿನ ಪೊಲೀಸರು ತಿಳಿಸಿದ್ದಾರೆ. ''ಪೊಲೀಸರು ನೇರವಾಗಿ ಹಣ ನೀಡಿಲ್ಲ. ವಿಘ್ನೇಶ್ ರಂಜಿತ್ ಎಂಬ ವ್ಯಕ್ತಿಯೊಂದಿಗೆ ತನ್ನ ಕುದುರೆ ಅಂಗಡಿಯಲ್ಲಿ ವರ್ಷಗಳ ಕಾಲ ಕೆಲಸ ಮಾಡಿದ್ದಾನೆ. ಅವರು ಕರೆ ಮಾಡಿ ನಿಮ್ಮ ಸಹೋದರ ನನ್ನೊಂದಿಗೆ ತುಂಬಾ ಕಷ್ಟಪಟ್ಟಿದ್ದಾರೆ ಎಂದು ಹೇಳಿದರು. ಇನ್ಸ್ಪೆಕ್ಟರ್ನಿಂದ ನನ್ನ ಕೈಲಾದಷ್ಟು ಹಣ ಪಡೆದು ನಿಮಗೆ ಕೊಡುತ್ತೇನೆ ಮತ್ತು ಶವಸಂಸ್ಕಾರಕ್ಕೆ ಬಳಸಿ ಎಂದು ಹೇಳಿದರು. ಬಳಿಕ ಅವರು ನಮಗೆ 1 ಲಕ್ಷ ರೂಪಾಯಿ ನೀಡಿದರು, ...