Tag: ಬಿಹಾರ ಚುನಾವಣೆ

ಬಿಹಾರದಲ್ಲಿ ಕಾಂಗ್ರೆಸ್‌ – ಆರ್‌ಜೆಡಿ ಗೆಳತನದಲ್ಲಿ ಬಿರುಕು: ಲಾಲೂ ಜೊತೆ ಸೋನಿಯಾ ಗಾಂಧಿ ಗೌಪ್ಯ ಚರ್ಚೆ!

ಬಿಹಾರದಲ್ಲಿ ಕಾಂಗ್ರೆಸ್‌ – ಆರ್‌ಜೆಡಿ ಗೆಳತನದಲ್ಲಿ ಬಿರುಕು: ಲಾಲೂ ಜೊತೆ ಸೋನಿಯಾ ಗಾಂಧಿ ಗೌಪ್ಯ ಚರ್ಚೆ!

ಬಿಹಾರದಲ್ಲಿ ರಾಷ್ಟ್ರೀಯ ಜನತಾ ದಳ (RJD) ಮತ್ತು ಕಾಂಗ್ರೆಸ್ ನಡುವಿನ ಮೈತ್ರಿ ಮುರಿಯಲಿದೆ ಎಂಬ ಊಹಾಪೋಹಗಳ ಮಧ್ಯೆ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಮಂಗಳವಾರ ರಾಷ್ಟ್ರೀಯ ಜನತಾ ದಳದ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ. ಮಂಗಳವಾರ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯ ನಂತರ ಸೋನಿಯಾ ಗಾಂಧಿ ಅವರು ಲಾಲು ಪ್ರಸಾದ್ ಯಾದವ್ ಅವರಿಗೆ ಕರೆ ಮಾಡಿದ್ದು, ಉಭಯ ನಾಯಕರು ಸುಮಾರು 10 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. https://twitter.com/ANI/status/1453217657621209089?s=20 ತಮ್ಮ ಪಕ್ಷದ ಪ್ರಧಾನ ಕಾರ್ಯದರ್ಶಿಗಳು, ಬಿಹಾರ ಉಸ್ತುವಾರಿ ಮತ್ತು ಬಿಹಾರದ ರಾಜ್ಯಾಧ್ಯಕ್ಷರೊಂದಿಗೆ ದೆಹಲಿಯಲ್ಲಿ ನಡೆದ ಅತ್ಯಂತ ಮಹತ್ವದ ಸಭೆಯ ನಂತರ ಸೋನಿಯಾ ಗಾಂಧಿಯವರು ಲಾಲು ಪ್ರಸಾದ್ ಯಾದವ್ ಅವರೊಂದಿಗೆ ಫೋನ್ ಕರೆ ಮೂಲಕ ಮಾತುಕತೆ ನಡೆಸಿದ್ದಾರೆ. ಬಿಹಾರ ಕಾಂಗ್ರೆಸ್‌ನ ಉಸ್ತುವಾರಿ ಭಕ್ತ ಚರಣ್ ದಾಸ್ ಮತ್ತು ಇತರ ನಾಯಕರು ಆರ್‌ಜೆಡಿಯೊಂದಿಗೆ ಮೈತ್ರಿ ಮುರಿದುಕೊಳ್ಳುವ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ಹೈಕಮಾಂಡ್ ಇದಕ್ಕೆ ಸಿದ್ಧವಿಲ್ಲ ಎಂಬುದು ಉಭಯ ನಾಯಕರ ಫೋನ್ ಮಾತುಕತೆ ಮೂಲಕ ತಿಳಿದುಬಂದಿದೆ. ಬಿಹಾರದ ಎರಡೂ ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವಉಪಚುನಾವಣೆಯ ಹಿನ್ನಲೆಯಲ್ಲಿ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಆರ್‌ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಅವರ ಈ ಸಂಭಾಷಣೆಯನ್ನು ಬಹಳ ಮುಖ್ಯ ಎಂದು ಪರಿಗಣಿಸಲಾಗುತ್ತಿದೆ. ಅದಾಗ್ಯೂ, ಉಭಯ ನಾಯಕರ ನಡುವಿನ ಮಾತುಕತೆ ಬಗ್ಗೆ ಯಾವುದೇ ಮಾಹಿತಿ ಬಹಿರಂಗಗೊಂಡಿಲ್ಲ. ವಾಸ್ತವವಾಗಿ, ಬಿಹಾರದ ಎರಡು ಕ್ಷೇತ್ರಗಳಲ್ಲಿ ನಡೆಯುತ್ತಿರುವ ಉಪಚುನಾವಣೆ ವಿಚಾರದಲ್ಲಿ ಮಹಾಘಟಬಂಧನ್‌ನ ಎರಡು ಮಿತ್ರಪಕ್ಷಗಳಾದ ರಾಷ್ಟ್ರೀಯ ಜನತಾ ದಳ (RJD) ಮತ್ತು ಕಾಂಗ್ರೆಸ್ ನಡುವೆ ಒಡಕು ಏರ್ಪಟ್ಟಿದೆ. ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರು ಕಾಂಗ್ರೆಸ್‌ಗೆ ಎರಡು ಸ್ಥಾನಗಳಲ್ಲಿ ಒಂದನ್ನು ಸಹ ನೀಡದಿರುವ ನಿರ್ಧಾರವನ್ನೂ ತೆಗೆದುಕೊಂಡಿರುವುದರ ಬಗ್ಗೆ ಬಹಿರಂವಾಗಿ ಹೇಳಿಕೆ ನೀಡಿದ್ದರು. ಮತ್ತು ಕಾಂಗ್ರೆಸ್ ಪಕ್ಷದ ರಾಜ್ಯ ಉಸ್ತುವಾರಿಯನ್ನು ಭಕ್ಚೋನ್‌ಹರ್ ಎಂದು ಸಂಬೋಧಿಸಿದ್ದರು. ಅಂದಿನಿಂದ,  ಮಹಾಮೈತ್ರಿಕೂಟದಲ್ಲಿ ಕಹಿ ವಿಷಯಗಳು ಮುನ್ನೆಲೆಗೆ ಬರಲು ಪ್ರಾರಂಭಿಸಿದವು ಮತ್ತು ತಮ್ಮ ಈ ಹೇಳಿಕೆಯನ್ನು ಹಿಂಪಡೆಯುವಂತೆ ಲಾಲು ಯಾದವ್ ಅವರನ್ನು ಕಾಂಗ್ರೆಸ್ ಒತ್ತಾಯಿಸಿತು. ಇದಾದ ನಂತರ, ಇತ್ತೀಚಿನ ವಾಗ್ವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದ ಲಾಲು ಪ್ರಸಾದ್ ಯಾದವ್, ಆರ್‌ಜೆಡಿ ಮಾಡಿದಷ್ಟು ಯಾರೂ ಕಾಂಗ್ರೆಸ್‌ಗೆ ಸಹಾಯ ಮಾಡಿಲ್ಲ ಎಂದು ಹೇಳಿದ್ದರು. ಇದರೊಂದಿಗೆ, ದೇಶಕ್ಕೆ ಅಗತ್ಯವಿರುವ ರಾಷ್ಟ್ರೀಯ ಪರ್ಯಾಯವಾಗಿ ಕಾಂಗ್ರೆಸ್ ಅನ್ನು ಈಗಲೂ ಪರಿಗಣಿಸುವುದಾಗಿಯೂ ಸ್ಪಷ್ಟಪಡಿಸಿದ್ದರು. 

ತಮಿಳುನಾಡು ಮೇಲೆ ಅಮಿತ್ ಶಾ ಹದ್ದಿನ ಕಣ್ಣು; ದ್ರಾವಿಡರ ನೆಲದಲ್ಲಿ ಬಿಜೆಪಿ ಗೆಲುವು ಅಷ್ಟು ಸುಲಭವಲ್ಲ

ತಮಿಳುನಾಡು ಮೇಲೆ ಅಮಿತ್ ಶಾ ಹದ್ದಿನ ಕಣ್ಣು; ದ್ರಾವಿಡರ ನೆಲದಲ್ಲಿ ಬಿಜೆಪಿ ಗೆಲುವು ಅಷ್ಟು ಸುಲಭವಲ್ಲ

ಬಿಹಾರದಲ್ಲಿ ಬಿಜೆಪಿ ಉತ್ತಮ ಸಾಧನೆಯೇ ಮಾಡಿದೆ. ಹಾಗಾಗಿ ಈ ಬಾರಿ ತಮಿಳುನಾಡು ವಿಧಾನಸಭಾ ಚುನಾವಣೆ ಗೆದ್ದು ಕಮಲ ಅರಳಿಸುವ ಕನಸು ಬಿಜೆಪಿಯದ್ದು

ಬಿಹಾರದ ಗದ್ದುಗೆ ಹಿಡಿಯುವತ್ತ ಬಿಜೆಪಿ

ಬಿಹಾರದ ಗದ್ದುಗೆ ಹಿಡಿಯುವತ್ತ ಬಿಜೆಪಿ, ಮಹಾಘಟಬಂಧನಕ್ಕೆ ಅನಿರೀಕ್ಷಿತ ಹಿನ್ನಡೆ

ಫಲಿತಾಂಶದ ಚಿತ್ರಣದ ಪ್ರಕಾರ BJP ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುವ ಸಾಧ್ಯತೆ ಇದ್ದು, JDU ತೀರಾ ಹೀನಾಯ ಸೋಲು ಕಾಣುವ ಮೂಲಕ NDA ಮೈತ್ರಿಯಲ್

ಬಿಹಾರ ಚುನಾವಣೆ: ಕೊನೆ ಹಂತದಲ್ಲಿ ರಾಜಕೀಯ ನಿವೃತ್ತಿಯ ದಾಳ ಪ್ರಯೋಗಿಸಿದ ನಿತೀಶ್!

ಬಿಹಾರ ಚುನಾವಣೆ: ಕೊನೆ ಹಂತದಲ್ಲಿ ರಾಜಕೀಯ ನಿವೃತ್ತಿಯ ದಾಳ ಪ್ರಯೋಗಿಸಿದ ನಿತೀಶ್!

ತಮ್ಮ 69ನೇ ವಯಸ್ಸಿನಲ್ಲೇ ರಾಜಕೀಯ ನಿವೃತ್ತಿಯ ಮಾತನಾಡಿರುವ ನಿತೀಶ್ ಕುಮಾರ್ ಅವರ ಈ ಹೇಳಿಕೆ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸ ಒದಗಿಸಿದೆ.

ಬಿಹಾರ ಚುನಾವಣಾ ದಿಕ್ಕುದೆಸೆ ನಿರ್ಧರಿಸುತ್ತಿರುವ ಇಬ್ಬರು ಯುವ ನಾಯಕರು!

ಬಿಹಾರ ಚುನಾವಣಾ ದಿಕ್ಕುದೆಸೆ ನಿರ್ಧರಿಸುತ್ತಿರುವ ಇಬ್ಬರು ಯುವ ನಾಯಕರು!

ಎರಡನೇ ತಲೆಮಾರಿನ ನಾಯಕರ ನಡುವೆ ಸಿಕ್ಕು ನಿತೀಶ್ ತರಗೆಲೆಯಾಗುವರೋ ಅಥವಾ ಇನ್ನಷ್ಟು ಬಲಿಷ್ಟ ಬೇರುಗಳನ್ನು ಚಾಚುವರೋ ಎಂಬುದನ್ನು ಕಾದುನೋಡಬೇಕು

Page 1 of 4 1 2 4

Welcome Back!

Login to your account below

Retrieve your password

Please enter your username or email address to reset your password.

Add New Playlist