ಆಯ್ಕೆ ಮಾಡಿ ಕೆಲವೇ ದಾಖಲೆಗಳನ್ನು ಸೋರಿಕೆ ಮಾಡುವುದನ್ನು ಕೂಡಲೇ ನಿಲ್ಲಿಸಿ ಎಂದು ಸುಪ್ರೀಂಕೋರ್ಟ್ ಅಧಿಕಾರಿಗಳಿಗೆ ಆದೇಶಿಸಿದೆ.
ವಾರಣಾಸಿಯ ಗ್ಯಾನ್ ವಾಪಿ ಮಸೀದಿಯಲ್ಲಿ ಶಿವನ ದೇವಸ್ಥಾನ ಇತ್ತು ಎಂಬ ವಿವಾದದ ಕುರಿತ ಅರ್ಜಿಯ ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್, ಪ್ರಕರಣದ ಕಕ್ಷಿದಾರರು ದಾಖಲೆಗಳನ್ನು ಮಾಧ್ಯಮಕ್ಕೆ ಬಿಡುಗಡೆ ಮಾಡುವುದರಲ್ಲಿ ಹೆಚ್ಚು ಆಸಕ್ತಿ ವಹಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ.
ನ್ಯಾಯಮೂರ್ತಿ ಚಂದ್ರಚೂಡ್ ನೇತೃತ್ವದ ಪೀಠ, ಸಮಿತಿ ಸರ್ವೆ ನಡೆಸಿದ ದಾಖಲೆಗಳು ನ್ಯಾಯಲಯಕ್ಕೆ ಸೇರಿದ್ದು, ಆಯ್ಕೆ ಮಾಡಿದ ದಾಖಲೆಗಳನ್ನು ಮಾತ್ರ ಮಾಧ್ಯಮಗಳಿಗೆ ಬಿಡುಗಡೆ ಮಾಡುವುದರ ಹಿಂದೆ ಯಾವ ಉದ್ದೇಶವಿದೆ ಎಂದು ಪ್ರಶ್ನಿಸಿದೆ.
ಎರಡು ಸಮುದಾಯಗಳ ಮಧ್ಯೆ ಶಾಂತಿ ಕಾಪಾಡುವುದು ಎಲ್ಲದಕ್ಕಿಂತ ಮುಖ್ಯ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ.