ರಿಯಲ್ ಸ್ಟಾರ್ ಉಪ್ಪಿ (Real star upendra) ನಿರ್ದೇಶಿಸಿ, ನಟಿಸಿರುವ ಯುಐ ಸಿನಿಮಾದ (Ul movie) ಕ್ರೇಜ್ ದಿನೇ ದಿನೇ ಜಾಸ್ತಿ ಆಗ್ತಿದೆ. ಉಪ್ಪಿ 2 ಸಿನಿಮಾದ ನಂತರ ಲಾಂಗ್ ಗ್ಯಾಪ್ ತಗೊಂಡು ಉಪ್ಪಿ ಡೈರೆಕ್ಷನ್ ಕಂ ಆ್ಯಕ್ಟಿಂಗ್ ಮಾಡ್ತಿರೋದ್ರಿಂದ ಡಬ್ಬಲ್ ಕ್ರೇಜ್ ಸೃಷ್ಟಿಯಾಗಿದೆ.

ಈಗಾಗಲೇ ಸಾಂಗ್ಸ್ ಮತ್ತು ಟೀಸರ್ (Ul songs & teaser) ಗಳ ಮೂಲಕ ಹೈಪ್ ಸೃಷ್ಟಿಸಿರುವ ಉಪ್ಪಿ, ಸಿನಿಮಾಗೆ ಸಂಬಂಧಪಟ್ಟಂತೆ ಮತ್ತೊಂದು ಅಪ್ಲೇಟ್ ಕೊಟ್ಟಿದ್ದಾರೆ. ಈ ಬಗ್ಗೆ ಈ ಮೊದಲಿಂದಲೂ ಒಂದು ಸುದ್ದಿ ಹರಿದಾಡ್ತಿತ್ತು. ಇದೀಗ ಆ ಸುದ್ದಿಗೆ ಕನ್ನರ್ಮೇಶನ್ ಸಿಕ್ಕಿದೆ.
ಹೌದು, ಯುಐ ಸಿನಿಮಾದಲ್ಲಿ ಸನ್ನಿ ಲಿಯೋನ್ (Sunny leon) ನಟಿಸಿದ್ದಾರಂತೆ ಎಂಬ ಗುಲ್ಲು ಜೋರಾಗಿತ್ತು ಇದೇ ವಿಚಾರ ಈಗ ಅಧಿಕೃತವಾಗಿ ಚಿತ್ರ ತಂಡದಿಂದ ಕನ್ನರ್ಮ್ ಆಗಿದೆ. ಯುಐ ಸಿನಿಮಾ ತಂಡ ಸನ್ನಿ ಲಿಯೋನ್ ಪೋಸ್ಟರ್ ರಿವೀಲ್ ಮಾಡಿದ್ದು, ಸನ್ನಿ ಕೇವಲ ಐಟಂ ಸಾಂಗ್ ನಲ್ಲಿ ಮಾತ್ರ ಅಲ್ಲ, ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ ಎಂದು ಹೇಳಲಾಗ್ತಿದೆ.