ಶಿಕ್ಷಕಿಗೆ ಕಿರುಕುಳ ನೀಡಿದ ಆರೋಪದ ಮೇಲೆ ನಾಲ್ವರು ವಿದ್ಯಾರ್ಥಿಗಳು ಪೊಲೀಸರಿಗೆ ಅತಿಥಿಯಾಗಿರುವ ಘಟನೆ ಉತ್ತರಪ್ರದೇಶದ ಮೀರತ್‌ನಲ್ಲಿ ನಡೆದಿದೆ.
ವಿದ್ಯಾರ್ಥಿಗಳು ಶಿಕ್ಷಕಿಯ ಬಗ್ಗೆ ಅಶ್ಲೀಲವಾಗಿ ಮಾತನಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ ಮತ್ತು ತೀವ್ರ ಖಂಡನೆಗೆ ಗುರಿಯಾಗಿದೆ.
10ನೇ ತರಗತಿಯಲ್ಲಿ ಒದುತ್ತಿರುವ ನಾಲ್ವರು ವಿದ್ಯಾರ್ಥಿಗಳು ತನ್ನಗೆ ಬಹಳ ಸಮಯದಿಂದ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ 27 ವರ್ಷದ ಶಿಕ್ಷಕಿ ಭಾನುವಾರ ಪೊಲೀಸರಿಗೆ ದೂರು ನೀಡಿದ್ದರು.
'आई लव यू मेरी जान, ओए मैम देख तो…'
— Sachin Gupta (@sachingupta787) November 27, 2022
उत्तर प्रदेश के मेरठ में महिला टीचर पर अश्लील टिप्पणी करने वाले इन छात्रों को 'मुकम्मल इलाज' की जरूरत प्रतीत होती है। pic.twitter.com/zy8beLW4qe
ಜೂನ್‌ನಲ್ಲಿ ಶಾಲೆಯ ಗೋಡೆ ಮೇಲೆ ಶಿಕ್ಷಕಿಗೆ ಐ ಲವ್ ಯೂ ಎಂದು ಬರೆದು ಅದರ ವಿಡಿಯೋವನ್ನ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ವಿದ್ಯಾರ್ಥಿಗಳು ಆಕ್ಷೇಪರ್ಹಾ ಮಾತುಗಳನ್ನಾಡಿದ್ದಕ್ಕೆ ಶಿಕ್ಷಕಿ ಹಲವು ಭಾರಿ ತಿಳಿಹೇಳಿದ್ದರೂ ಅಹ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯ ಪೊಲೀಸ್‌ಠಾಣಾಧಿಕಾರಿ ಅರವಿಂದ್ ಮೋಹನ್ ಶರ್ಮಾ ತಿಳಿಸಿದ್ದಾರೆ.
ಸದ್ಯ ವಶಕ್ಕೆ ಪಡೆದಿರುವ ವಿದ್ಯಾರ್ಥಿಗಳು 16 ವರ್ಷದವರಾಗಿದ್ದು ಬಾಲ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.