ಶಿವಮೊಗ್ಗ : ನಗರದ ಕುವೆಂಪು ರಸ್ತೆಯ ಜಿಲ್ಲಾ ಪಂಚಾಯಿತಿ ಕಚೇರಿ ಮುಂಭಾಗದಲ್ಲಿರುವ ಪ್ರತಿಷ್ಠಿತ ಭೂಪಾಳಂ ಕುಟುಂಬದ ಮನೆಯಲ್ಲಿ ಶಾರ್ಟ್ ಸರ್ಕ್ಯೂಟ್ನಿಂದಾಗಿ ಸ್ಟೆಬಿಲೈಜರ್ ಸ್ಫೋಟವಾಗಿ ತಂದೆ ಎಸ್.ಶರತ್(39) ಸಾವನ್ನಪ್ಪಿದ್ದು, ಪುತ್ರ ಸಂಚಿತ್(12) ಸ್ಥಿತಿ ಗಂಭೀರವಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಈ ಕುರಿತು ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಾರ್ಟ್ ಸರ್ಕ್ಯೂಟ್ನಿಂದಾಗಿ ಸ್ಟೆಬಲೈಜರ್ ಸ್ಫೋಟವಾಗಿದ್ದು, ಕೂಡಲೇ ಮನೆಯಲ್ಲಾ ಬೆಂಕಿ ಆವರಿಸಿದೆ. ತಂದೆ ಎಸ್.ಶರತ್ ಮಗ ಸಂಚಿತ್ನನ್ನು ಉಳಿಸಲು ಹೋಗಿ ತನ್ನ ಪ್ರಾಣ ಕಳೆದುಕೊಂಡಿರುವ ದಾರುಳ ಘಟನೆ ನಡೆದಿದೆ.