• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, May 24, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಸಿನಿಮಾ

ಅರವತ್ತರ ದಶಕದ ಹಾಡಿಗೆ ಹೊಸ ಟಚ್‌ನೀಡಿದ ಸ್ಪೂಕಿ ಕಾಲೇಜ್‌

ಪ್ರತಿಧ್ವನಿ by ಪ್ರತಿಧ್ವನಿ
November 17, 2022
in ಸಿನಿಮಾ
0
ಅರವತ್ತರ ದಶಕದ ಹಾಡಿಗೆ ಹೊಸ ಟಚ್‌ನೀಡಿದ ಸ್ಪೂಕಿ ಕಾಲೇಜ್‌
Share on WhatsAppShare on FacebookShare on Telegram

ಪೋಸ್ಟರ್, ಫರ್ಸ್ಟ್‌ ಲುಕ್ ಮೂಲಕ ಈಗಾಗಲೇ ಜನಮನ ಗೆದ್ದಿರುವ ಸ್ಪೂಕಿ ಕಾಲೇಜ್ ಈಗಾಗಲೇ ಸಿನಿ ರಸಿಕರ ಕುತೂಹಲವನ್ನ ಹೆಚ್ಚಿಸಿದೆ. ಇನ್ನು ಚಿತ್ರತಂಡ ನವೆಂಬರ್‌ 14ರಂದು ಚಿತ್ತತಂಡವು ಮೆಲ್ಲುಸಿರೆ ಸವಿಗಾನ ಹಾಡನ್ನು ಬಿಡುಗಡೆ ಮಾಡಿದೆ.

ADVERTISEMENT

ಪದ್ಮವಿಭೂಷಣ ಡಾ || ರಾಜ್ಕುಮಾರ್ ಅಭಿನಯ್ ವೀರ ಕೇಸರಿ ಚಿತ್ರದ ಮೆಲ್ಲುಸಿರೆ ಸವಿಗಾನ ಹಾಡನ್ನು ಈ ಚಿತ್ರದಲ್ಲಿ ಬಳಸಿಕೊಳ್ಳಲಾಗಿದ್ದು ಹಿರಿಯ ನಿರ್ದೇಶಕ ಭಗವಾನ್, ಸಾಹಿತಿ ಪದ್ಮಶ್ರೀ ದೊಡ್ಡರಂಗೇಗೌಡ ಹಾಗೂ ಪತ್ರಕರ್ತ ಬಿ.ಗಣಪತಿ ಅವರು ಈ ಹಾಡನ್ನು ಬಿಡುಗಡೆ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಹಾಡು ವೈರಲ್‌ ಆಗಿದ್ದು ಸಿನಿರಸಿಕರು ಚಿತ್ರ ಬಿಡುಗಡೆಗೆ ಕಾತುರದಿಂದ ಕಾಯುತ್ತಿದ್ದಾರೆ.

ನಿರ್ದೇಶಕ ಭಗವಾನ್‌ ಮಾತನಾಡಿ ಆ ಕಾಲದಲ್ಲಿ ಸಿನಿಮಾ ಮಾಡುವುದು ಅಷ್ಟು ಸುಲಭ ಇರಲಿಲ್ಲ. ಈಗ ಹಾಗಲ್ಲ ತಂತ್ರಜ್ಞಾನ ಮುಂದುವರೆದಿದೆ. “ಮೆಲ್ಲುಸಿರೆ ಸವಿಗಾನ” ಹಾಡಿಗೆ ಯಾವುದೇ ಲೋಪವಾಗದಂತೆ ಅಚ್ಚುಕಟ್ಟಾಗಿ ಈ ಚಿತ್ರದಲ್ಲಿ ಬಳಸಿಕೊಂಡಿದ್ದಾರೆ ರೀಷ್ಮಾ ನಾಣಯ್ಯ ಅಭಿನಯ, ಭೂಷಣ್ ನೃತ್ಯ ನಿರ್ದೇಶನ‌ ಎಲ್ಲವೂ ಚೆನ್ನಾಗಿದೆ. ನಿರ್ದೇಶಕ ಭರತ್ ನನ್ನ ಶಿಷ್ಯ. ಚಿತ್ರಕ್ಕೆ ಒಳ್ಳೆಯ ನಾಯಕಿ ಎಂದಿದ್ದಾರೆ.

ಹಿರಿಯ ಸಾಹಿತಿ ದೊಡ್ಡರಂಗೇಗೌಡ ಮಾತನಾಡಿ ಅರವತ್ತರ ದಶಕದ ಈ ಹಾಡನ್ನು ಈಗಿನ ರೀತಿಗೆ ಚಿತ್ರೀಕರಿಸುವುದು ಕಷ್ಟಸಾಧ್ಯ. ಅದರೆ ಅದನ್ನು ನಿರ್ದೇಶಕ ಭರತ್ ಸಾಧ್ಯವಾಗಿಸಿದ್ದಾರೆ ಎಂದು ಶ್ಲಾಘಿಸಿದ್ದಾರೆ.

ನಿರ್ದೇಶಕ ಭರತ್‌ ಮಾತನಾಡಿ ಈ ಹಾಡನ್ನು ದಾಂಡೇಲಿಯಲ್ಲಿ ಸುಮಾರು 250ಕ್ಕೂ ಅಧಿಕ ತಂತ್ರಜ್ಞರ ಪಾಲ್ಗೊಳ್ಳುವಿಕೆಯಲ್ಲಿ ಚಿತ್ರಿಸಿಕೊಳ್ಳಲಾಯಿತು. ಭೂಷಣ್ ನೃತ್ಯ ನಿರ್ದೇಶನದಲ್ಲಿ ರೀಷ್ಮಾ ನಾಣಯ್ಯ ಈ ಹಾಡುಗೆ ಹೆಜ್ಜೆ ಹಾಕಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ, ಐಶ್ವರ್ಯ ರಂಗರಾಜನ್ ಗಾಯನ ಹಾಗೂ ಮನೋಹರ್ ಜೋಷಿ ಅವರ ಛಾಯಾಗ್ರಹಣ ಈ ಹಾಡಿನ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ. ವಿಶ್ವಾಸ್ ಕಲಾ ನಿರ್ದೇಶನ ಕೂಡ ಕಣ್ಮನ ಸೆಳೆಯುತ್ತದೆ. ಹಾಡು ಹಾಗೂ ಚಿತ್ರ ಅದ್ದೂರಿಯಾಗಿ ಮೂಡಿಬರಲು ನಿರ್ಮಾಪಕ ಹೆಚ್ ಕೆ ಪ್ರಕಾಶ್ ಅವರ ಸಹಕಾರ ಹಾಗೂ ನನ್ನ ಚಿತ್ರತಂಡದ ಶ್ರಮ ಕಾರಣ. ಸದ್ಯದಲ್ಲೇ ಚಿತ್ರ ಬಿಡುಗಡೆಯಾಗುತ್ತಿದೆ. ನೋಡಿ. ಪ್ರೋತ್ಸಾಹಿಸಿ ಎಂದು ವಿನಂತಿಸಿದ್ದಾರೆ.

Tags: Covid 19ಕರೋನಾಕೋವಿಡ್-19
Previous Post

3ಡಿ ತಂತ್ರಜ್ಞಾನದ ರಕ್ಷಣಾ ವ್ಯವಸ್ಥೆ ನಿರ್ಮಿಸಲು ಭಾರತೀಯ ಸೇನೆ ಸಜ್ಜು

Next Post

ಸರ್ಕಾರಿ ಅಧಿಕಾರಿಗಳಂತೆ ಬಿಂಬಿಸಿಕೊಂಡು ಮತದಾರರ ಮಾಹಿತಿ ಸಂಗ್ರಹಿಸಿದ ಅಪರಿಚಿತರು: ಶಿವಾಜಿನಗರ ನಿವಾಸಿಗಳ ಆರೋಪ

Related Posts

ದರ್ಶನ್‌ ಆತ್ಮಹತ್ಯೆ ವದಂತಿಗೆ ಜೈಲು ಡಿಜಿಪಿ ಸ್ಪಷ್ಟನೆ ಏನು
ಸಿನಿಮಾ

ದರ್ಶನ್‌ ಆತ್ಮಹತ್ಯೆ ವದಂತಿಗೆ ಜೈಲು ಡಿಜಿಪಿ ಸ್ಪಷ್ಟನೆ ಏನು

by ಪ್ರತಿಧ್ವನಿ
May 21, 2026
0

 ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಪತ್ನಿ ವಿಜಯಲಕ್ಷ್ಮಿ ಅವರ ದಾಂಪತ್ಯ ಜೀವನದ 23ನೇ ವರ್ಷದ ವಿವಾಹ ವಾರ್ಷಿಕೋತ್ಸವ ವಿಶೇಷ ಕ್ಷಣಗಳಿಗೆ ಸಾಕ್ಷಿಯಾಯಿತು. ಈ ಹಿನ್ನೆಲೆಯಲ್ಲಿ ನಟ ದರ್ಶನ್...

Read moreDetails
ಕೆಡಿ ಗಳಿಸಿದ್ದು 23 ಕೋಟಿನಾ? ಇದು ಗೆಲುವಾ, ಸೋಲಾ?

ಕೆಡಿ ಗಳಿಸಿದ್ದು 23 ಕೋಟಿನಾ? ಇದು ಗೆಲುವಾ, ಸೋಲಾ?

May 20, 2026
ಜೂ.ಎನ್‌ಟಿಆರ್‌ ಬರ್ತ್‌ಡೇಗೆ ಬಂತು ಡ್ರ್ಯಾಗನ್‌ ಗ್ಲಿಂಪ್ಸ್!‌ : ಚರ್ಚೆಗೆ ಕಾರಣವಾಯ್ತು ಪ್ರಶಾಂತ್‌ ನೀಲ್‌ ಸಿನಿಮಾ

ಜೂ.ಎನ್‌ಟಿಆರ್‌ ಬರ್ತ್‌ಡೇಗೆ ಬಂತು ಡ್ರ್ಯಾಗನ್‌ ಗ್ಲಿಂಪ್ಸ್!‌ : ಚರ್ಚೆಗೆ ಕಾರಣವಾಯ್ತು ಪ್ರಶಾಂತ್‌ ನೀಲ್‌ ಸಿನಿಮಾ

May 20, 2026
ದರ್ಶನ್–ವಿಜಯಲಕ್ಷ್ಮೀ ಬಾಂಧವ್ಯ: 23 ವರ್ಷದ ಪಯಣ ಹೇಗಿತ್ತು ?

ದರ್ಶನ್–ವಿಜಯಲಕ್ಷ್ಮೀ ಬಾಂಧವ್ಯ: 23 ವರ್ಷದ ಪಯಣ ಹೇಗಿತ್ತು ?

May 19, 2026
ದರ್ಶನ್‌ ಏಳು ಜನ್ಮ ಎತ್ತಿ ಬಂದರೂ, ಹೆಂಡತಿ ಋಣ ತೀರಿಸಕ್ಕಾಗಲ್ಲ : ಪತ್ನಿ ಅಂದ್ರೆ ಹೀಗಿರಬೇಕು, ದರ್ಶನ್‌ ಪುಣ್ಯವಂತ..!

ದರ್ಶನ್‌ ಏಳು ಜನ್ಮ ಎತ್ತಿ ಬಂದರೂ, ಹೆಂಡತಿ ಋಣ ತೀರಿಸಕ್ಕಾಗಲ್ಲ : ಪತ್ನಿ ಅಂದ್ರೆ ಹೀಗಿರಬೇಕು, ದರ್ಶನ್‌ ಪುಣ್ಯವಂತ..!

May 19, 2026
Next Post
ಸರ್ಕಾರಿ ಅಧಿಕಾರಿಗಳಂತೆ ಬಿಂಬಿಸಿಕೊಂಡು ಮತದಾರರ ಮಾಹಿತಿ ಸಂಗ್ರಹಿಸಿದ ಅಪರಿಚಿತರು: ಶಿವಾಜಿನಗರ ನಿವಾಸಿಗಳ ಆರೋಪ

ಸರ್ಕಾರಿ ಅಧಿಕಾರಿಗಳಂತೆ ಬಿಂಬಿಸಿಕೊಂಡು ಮತದಾರರ ಮಾಹಿತಿ ಸಂಗ್ರಹಿಸಿದ ಅಪರಿಚಿತರು: ಶಿವಾಜಿನಗರ ನಿವಾಸಿಗಳ ಆರೋಪ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!