ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಉದ್ಘಾಟಿಸಿದ ಗುಜರಾತ್ ನ ಗಾಂಧಿನಗರ ಮತ್ತು ಮಹಾರಾಷ್ಟ್ರದ ಮುಂಬೈ ನಡುವಣ ವಂದೇ ಮಾತರಂ ರೈಲು ಹಲವು ವಿಶೇಷತೆಗಳಿಂದ ಕೂಡಿದೆ.
ಹೌದು, ಈ ವಂದೇ ಮಾತರಂ 16 ಬೋಗಿಗಳ ರೈಲು ಇದಾಗಿದ್ದು, 1128 ಪ್ರಯಾಣಿಕರನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ. ಪ್ರಯಾಣಿಕರು ವಿಮಾನದಲ್ಲಿ ಪ್ರಯಾಣಿಸಿದ ಅನುಭವ ಪಡೆಯಲಿರುವುದು ಇದರ ವಿಶೇಷ.
ಇದಕ್ಕೂ ಮೊದಲಿನ ವಂದೇ ಮಾತರಂ ರೈಲು 379 ಟನ್ ಹೊಂದಿದ್ದು, ಇದರ ತೂಕವನ್ನು 38 ಟನ್ ಕಡಿಮೆ ಮಾಡಲಾಗಿದ್ದು, ಇನ್ನಷ್ಟು ಹಗುರ ಮಾಡಲಾಗಿದೆ. ಅಲ್ಲದೇ ಎರಡು ಅಡಿ ಆಳದ ನೀರನಲ್ಲೂ ಇದು ಸಂಚರಿಸಬಲ್ಲದು.
ದೆಹಲಿಯಲ್ಲಿ ಈಗಾಗಲೇ ವಂದೇ ಮಾತರಂ ರೈಲು ಸಂಚಾರ ಆರಂಭಿಸಿದ್ದು, 75 ರೈಲುಗಳು ಆರಂಭಿಸಲು ಚಿಂತನೆ ನಡೆದಿದೆ. ಈ ರೈಲು ಗಂಟೆಗೆ ಗರಿಷ್ಠ 160 ಕಿ.ಮೀ. ಸಂಚರಿಸುತ್ತದೆ.
ಚೆನ್ನೈನಲ್ಲಿ ವಂದೇ ಮಾತರಂ ರೈಲುಗಳು ಸಿದ್ಧಪಡಿಸಲಾಗುತ್ತಿದ್ದು, ಇದು ಸಂಪೂರ್ಣ ಸ್ವದೇಶಿ ರೈಲುಗಳಾಗಿದ್ದು, ಶೇ.80ರಷ್ಟು ಭಾರತದ ಕಚ್ಛಾ ವಸ್ತುಗಳನ್ನೇ ಬಳಸಲಾಗುತ್ತಿದೆ. ಒಂದು ರೈಲಿಗೆ 135 ದಶಲಕ್ಷ ಡಾಲರ್ ವೆಚ್ಚವಾಗಲಿದ್ದು, 2023ರ ಮಾರ್ಚ್ ವೇಳೆಗೆ 27 ರೈಲುಗಳು ಸಂಚಾರಕ್ಕೆ ಸಿದ್ಧವಾಗಲಿದೆ ಎಂದು ರೈಲು ಕಂಪನಿ ಮುಖ್ಯಸ್ಥರು ತಿಳಿಸಿದ್ದಾರೆ.