ಲೈವ್ ಕಾನಸರ್ಟ್ ವೇಳೆ ದಕ್ಷಿಣ ಕೊರಿಯಾ ಮೂಲದ ಯೂಟ್ಯೂಬರ್ಗೆ ಕಿರುಕುಳ ನೀಡಿದ ಆರೋಪದ ಮೇಲೆ ಮುಂಬೈ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಸದ್ಯ ಘಟನೆಯ ವಿರಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ವಿಡಿಯೋದಲ್ಲಿ ಇಬ್ಬರು ಯುವಕರು ಯೂಟ್ಯೂಬರ್ ನೋ ನೋ ಎಂದು ಹೇಳುತ್ತಿದ್ದರು ಸಹ ಆರೋಪಿಗಳು ಕೈ ಹಿಡಿದು ಎಳೆಯುತ್ತಿರುವುದು ಕಂಡು ಬರುತ್ತದೆ.
ಮುಂಬೈನ ಖಾರ್ ಪ್ರದೇಶದಲ್ಲಿ ಘಟನೆ ನಡೆದಿದ್ದು ಆರೋಪಿಗಳಿಬ್ಬರು ಯುವತಿ ನಿರಾಕರಿಸಿ ಮುನ್ನಡೆದರೂ ಸಹ ಲಿಫ್ಟ್ ನೀಡುವುದಾಗಿ ಹಿಂಬಾಲಿಸಿಕೊಂಡು ಬರುತ್ತಾರೆ. ಆದರೆ ಯುವತಿಯೂ ತನ್ನ ಮನೆ ಹತ್ತಿರದಲ್ಲೇ ಇರುವುದಾಗಿ ಹೇಳಿ ನಿರಾಕರಿಸಿ ಹೊರಟು ಹೋಗುವುದು ಕಂಡು ಬರುತ್ತದೆ.
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಮುಂಬೈ ಪೊಲೀಸರು ಆರೋಪಿಗಳಾದ ಮೊಹಮ್ಮದ್ ಶೇಕ್(19), ಮೊಹಮ್ಮದ್ ನಖಿಬ್ ಸದರಿಯಲಂ ಅನ್ಸಾರಿ೯20) ಇಬ್ಬರನ್ನು ವಶಕ್ಕೆ ಪಡೆದಿರುವ ಪೊಲೀಸರು ಸುಮೋಟೋ, ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಿಕೊಂಡು ವಿಚಾರನೆಗೆ ಒಳಪಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಮುಂಬೈ ಪೊಲೀಸ್ ಘಟಕ ಕೊರಿಯನ್ ಮಹಿಳೆ ಜೊತೆ ಅಸಭ್ಯವಾಗಿ ವರ್ತಿಸಿ ಸಂಬಂಧ ಆರೋಪಿಗಳಿಬ್ಬರನ್ನೂ ಬಂಧಿಸಿ ಐಪಿಸಿ ಸೆಕ್ಷನ್ಗಳಡಿ ಪ್ರಕರಣ ದಾಖಲಿಸಲಾಗಿದೆ ಎಂದು ಟ್ವೀಟ್ ಮಾಡಿ ತಿಳಿಸಿದೆ.