ರಾಜಸ್ಥಾನ್ ರಾಯಲ್ಸ್ ತಂಡದ ಮಾಲೀಕರೊಬ್ಬರು ನನಗೆ 3-4 ಬಾರಿ ಕಪಾಳಕ್ಕೆ ಹೊಡೆದಿದ್ದರು ಎಂಬ ಆಘಾತಕಾರಿ ವಿಷಯವನ್ನು ನ್ಯೂಜಿಲೆಂಡ್ ತಂಡದ ಮಾಜಿ ನಾಯಕ ರಾಸ್ ಟೇಲರ್ ಗಂಭೀರ ಆರೋಪ ಮಾಡಿದ್ದಾರೆ.
ರಾಸ್ ಟೇಲರ್ ಬ್ಲ್ಯಾಕ್ ಅಂಡ್ ವೈಟ್ ಹೆಸರಿನಲ್ಲಿ ಬರೆದಿರುವ ತಮ್ಮ ಜೀವನಧಾರಿತ ಕೃತಿಯಲ್ಲಿ ಈ ಸ್ಫೋಟಕ ವಿಷಯವನ್ನು ಬಹಿರಂಗಪಡಿಸಿದ್ದಾರೆ.
ರಾಜಸ್ಥಾನ್ ರಾಯಲ್ಸ್ ತಂಡವನ್ನು ಆರಂಭದಲ್ಲಿ ಪ್ರತಿನಿಧಿಸಿದ್ದ ರಾಸ್ ಟೇಲರ್ ಪಂಜಾಬ್ ಕಿಂಗ್ಸ್ ವಿರುದ್ಧ ಬೃಹತ್ ಮೊತ್ತದ ಗುರಿ ಬೆಂಬತ್ತುವಾಗ ಶೂನ್ಯಕ್ಕೆ ಔಟಾಗಿದ್ದರು. ಆಗ ತಂಡದ ಮಾಲೀಕ ನನಗೆ 3-4 ಬಾರಿ ಕಪಾಳಕ್ಕೆ ಬಾರಿಸಿದ್ದರು. ಆದರೆ ಅದು ಜೋರಾಗಿ ಇರಲಿಲ್ಲ. ಆದರೆ ಅವರು ಹೊಡೆದಿದ್ದು ಅಸಮಾಧಾನದಿಂದಲೇ ಎಂಬುದು ಅವರ ನಡೆಯಿಂದ ತಿಳಿಯುತ್ತಿತ್ತು ಎಂದು ಟೇಲರ್ ತಮ್ಮ ಪುಸ್ತಕದಲ್ಲಿ ಬಹಿರಂಗಪಡಿಸಿದ್ದಾರೆ.
ಮೊಹಾಲಿಯಲ್ಲಿ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ 195 ರನ್ ಗಳಿಸುವ ಕಠಿಣ ಗುರಿ ಪಡೆದಿತ್ತು. ಆದರೆ ನಾನು ರನ್ ಗಳಿಸುವ ಮುನ್ನವೇ ಎಲ್ ಬಿ ಬಲೆಗೆ ಬಿದ್ದಿದ್ದೆ. ನಾವು ಭಾರೀ ಅಂತರದಿಂದ ಸೋಲುಂಡಿದ್ದೆವು ಎಂದು ಅವರು ಬರೆದುಕೊಂಡಿದ್ದಾರೆ.
ನಂತರ ಎಲ್ಲರೂ ಹೋಟೆಲ್ ನ ಮೇಲೆ ತಂಡದ ಆಡಳಿತ ಮಂಡಳಿ, ಸಹಾಯಕ ಸಿಬ್ಬಂದಿ ಎಲ್ಲರೂ ಇದ್ದರು. ಲೀಜ್ ಹರ್ಲಿ ಜೊತೆ ಶೇನ್ ವಾರ್ನ್ ಕೂಡ ಇದ್ದರು. ಆಗ ತಂಡದ ಮಾಲೀಕರೊಬ್ಬರು ನನ್ನ ಬಳಿ ಬಂದು ನೀನು ಸೊನ್ನೆಗೆ ಔಟಾಗಲು ಅಲ್ಲ ನಾವು ಕೋಟ್ಯಂತರ ರೂಪಾಯಿ ಕೊಟ್ಟಿರುವುದು ಎಂದು ಹೇಳಿ ಮುಖದ ಮೇಲೆ ಮೂರ್ನಾಲ್ಕು ಬಾರಿ ಹೊಡೆದಿದ್ದರು ಎಂದು ಟೇಲರ್ ಘಟನೆಯನ್ನು ವಿವರಿಸಿದ್ದಾರೆ.
ಅವರು ನನಗೆ ಜೋರಾಗಿ ಬಾರಿಸಲಿಲ್ಲ. ಅವರು ನಗುತ್ತಿದ್ದರು. ಆದರೆ ಅವರ ನಡೆ ಬಗ್ಗೆ ನನಗೆ ಸಾಕಷ್ಟು ಅನುಮಾನ ಮೂಡಿಸಿತು ಎಂದು ಅವರು ಹೇಳಿದರು.
ರಾಸ್ ಟೇಲ್ 2008ರಿಂದ 2011ರವರೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸಿದ್ದರು. ನಂತರ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಮಾರಾಟವಾಗಿದ್ದರು. ನಂತರ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಪರ ಆಡಿದರು.