ಕೆಲಸ ಮಾಡಿಲ್ಲವೆಂದು ಗುತ್ತಿಗೆದಾರನ ಮೇಲೆ ಕಸ ಸುರಿಸಿದ ಶಿವಸೇನೆ ಶಾಸಕ

ಶಿವಸೇನಾ ಶಾಸಕ, ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಗುತ್ತಿಗೆದಾರನನ್ನ ಮುಂಬೈನ ಚಂಡಿವಾಲಿ ಪ್ರದೇಶದ ಜಲಾವೃತ ರಸ್ತೆಯಲ್ಲಿ ಕುಳಿತುಕೊಳ್ಳುವಂತೆ ಶನಿವಾರ ಒತ್ತಾಯಿಸುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಚರಂಡಿಗಳನ್ನ ಸರಿಯಾಗಿ ಸ್ವಚ್ಛಗೊಳಿಸುತ್ತಿಲ್ಲ ಎನ್ನುವ ಆರೋಪದ ಮೇಲೆ ಗುತ್ತಿಗೆದಾರನ ಮೇಲೆ ಕಸ ಎಸೆಯುವಂತೆ ಅವ್ರು ಕಾರ್ಮಿಕರಿಗೆ ಸೂಚಿಸಿದರು. ಶಿವಸೇನಾ ಶಾಸಕ ದಿಲೀಪ್ ಲ್ಯಾಂಡೆ ಅವರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ವೀಡಿಯೊ ವೈರಲ್ ಆದ ನಂತರ, ಲ್ಯಾಂಡೆ ಕೂಡ ವೀಡಿಯೊ ಕುರಿತು ಸ್ಪಷ್ಟೀಕರಣವನ್ನು ನೀಡಿದ್ದು, “ರಸ್ತೆಯನ್ನು ಸ್ವಚ್ಛ ಗೊಳಿಸುವ ಕೆಲಸವನ್ನು ಗುತ್ತಿಗೆದಾರನಿಗೆ ನೀಡಲಾಗಿದೆ, ಆದರೆ ಗುತ್ತಿಗೆದಾರನು ತನ್ನ ಕೆಲಸವನ್ನ ಸರಿಯಾಗಿ ಮಾಡದ ಕಾರಣ ಇದನ್ನ ಮಾಡಿದ್ದೇನೆ” ಎಂದರು.

‘ನಾನು ಕಳೆದ 15 ದಿನಗಳಿಂದ ಗುತ್ತಿಗೆದಾರನನ್ನ ಕರೆದು ರಸ್ತೆ ತೆರವುಗೊಳಿಸುವಂತೆ ಕೇಳಿದ್ದೇನೆ. ಆದ್ರೆ, ಅದನ್ನ ಎಂದಿಗೂ ಮಾಡಲಿಲ್ಲ. ಜನರು ಗಟಾರದ ಮೇಲೆ ನಡೆದುಕೊಂಡು ಹೋಗುತ್ತಿದ್ದಾರೆ. ಹಾಗಾಗಿ ಶಿವಸೇನೆಯ ಜನರು ಸ್ವತಃ ಅದರ ಮೇಲೆ ಕೆಲಸ ಮಾಡುತ್ತಿದ್ದು, ಹಾಗಾಗಿ ಗುತ್ತಿಗೆದಾರನನ್ನು ಇಲ್ಲಿಗೆ ಕರೆತಂದಿದ್ದೇನೆ ಎಂದಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗ್ತಿರುವ ಈ ಘಟನೆಯನ್ನ ಮಹಾರಾಷ್ಟ್ರದ ವಿರೋಧ ಪಕ್ಷಗಳು ತೀವ್ರವಾಗಿ ಖಂಡಿಸುತ್ತವೆ.

Please follow and like us:

Related articles

Share article

Stay connected

Latest articles

Please follow and like us: