ಬೆಂಗಳೂರು (Bengaluru): ವೆಂಚರ್ ಕ್ಯಾಪಿಟಲ್ ಫಂಡ್ಗಳು (VCF) ಉಳಿಸಿಕೊಂಡಿರುವ ವೆಚ್ಚದ ಮೊತ್ತಕ್ಕೆ ಸೇವಾ ತೆರಿಗೆಯನ್ನು (Service tax) ವಿಧಿಸುವುದು ಸರಿಯಲ್ಲ ಎಂದು ಕರ್ನಾಟಕ ಹೈಕೋರ್ಟ್ (Karnataka High Court) ಅಭಿಪ್ರಾಯಪಟ್ಟಿದೆ.
ಬಂಡವಾಳ ನಿಧಿಯನ್ನು ಹಣಕಾಸು ಕಾಯಿದೆ ಅಡಿಯಲ್ಲಿ ‘ವ್ಯಕ್ತಿ’ ಎಂದು ಗುರುತಿಸಿಲ್ಲ. ಹೀಗಾಗಿ ಸೇವಾ ತೆರಿಗೆ ಸಾಧ್ಯವಿಲ್ಲ ಎಂದು ಆದೇಶ ಮಾಡಿದೆ.
ಹೂಡಿಕೆದಾರರಿಗೆ ರಿಟರ್ನ್ಸ್ ವಿತರಣೆಯ ಮೊದಲು ವೆಚ್ಚವಾಗಿ ವೆಂಚರ್ ಕ್ಯಾಪಿಟಲ್ ಫಂಡ್ (VCF) ಉಳಿಸಿಕೊಂಡಿರುವ ಮೊತ್ತದ ಮೇಲೆ ಸೇವಾ ತೆರಿಗೆ ವಿಧಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಸ್ಪಷ್ಟ ಅಭಿಪ್ರಾಯ ವ್ಯಕ್ತಪಡಿಸಿದೆ.
ಐಸಿಐಸಿಐ ಇಕಾನೆಟ್ ಇಂಟರ್ ನ್ಯಾಷನಲ್ ಮತ್ತು ಟೆಕ್ನಾಲಜಿ ಫಂಡ್ ವರ್ಸಸ್ ಕೇಂದ್ರ ತೆರಿಗೆ ಆಯುಕ್ತರ ನಡುವಿನ ಕೇಸ್ನಲ್ಲಿ ಹೈಕೋರ್ಟ್ ಈ ಅಭಿಪ್ರಾಯ ತಿಳಿಸಿದೆ.
ಮುಖ್ಯ ನ್ಯಾಯಮೂರ್ತಿ (Chief Justice) ಪಿ.ಎಸ್. ದಿನೇಶ್ ಕುಮಾರ್ (P.S.DineshKumar) ಮತ್ತು ನ್ಯಾಯಮೂರ್ತಿ (Justice) ಉಮೇಶ್ ಎಂ. ಅಡಿಗ (Umesh M. Adiga) ಅವರ ಪೀಠ ಈ ತೀರ್ಪು ನೀಡಿದೆ.
ಐಸಿಐಸಿಐ ವೆಂಚರ್ ಫಂಡ್ಗಳು ನಿರ್ವಹಿಸುವ ವಿಸಿಎಫ್ಗಳ ವಿರುದ್ಧ ಸೇವಾ ತೆರಿಗೆಗೆ ಬೇಡಿಕೆ ಇಡಲಾಗಿತ್ತು. ಕಸ್ಟಮ್ಸ್ ಅಬಕಾರಿ ಮತ್ತು ಸೇವಾ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ 2021 ರ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಪೀಠ ಈ ತೀರ್ಪನ್ನು ನೀಡಿದೆ.
ವಿಸಿಎಫ್ಗಳು ಉಳಿಸಿಕೊಂಡಿರುವ ಆದಾಯದ ಭಾಗವು ಕೆಲಸ ಮಾಡಿದ್ದಕ್ಕೆ ಸೇವಾ ಶುಲ್ಕ ಅಥವಾ ಶುಲ್ಕ ಎಂದು ಭಾವಿಸಬಬಹುದು ಎಂದು ತೆರಿಗೆ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಅದರ ಮೇಲೆ ಸೇವಾ ತೆರಿಗೆಯನ್ನು ಪಾವತಿಸಬೇಕು ಎಂದು CESTAT ಹೇಳಿತ್ತು. ಆದರೆ ಈ VCF ಗಳನ್ನು ಭಾರತೀಯ ಟ್ರಸ್ಟ್ ಕಾಯಿದೆ 1882 ರ ಅಡಿಯಲ್ಲಿ VCF ಗಳನ್ನು ‘ತೆರಿಗೆಗೆ ನ್ಯಾಯಾಂಗ ವ್ಯಕ್ತಿಗಳು’ ಎಂದು ಪರಿಗಣಿಸಬೇಕು ಎಂಬ CESTAT ಅಭಿಪ್ರಾಯವನ್ನು ನ್ಯಾಯಾಲಯ ತಿರಸ್ಕರಿಸಿದೆ. CESTAT ದೃಷ್ಟಿಕೋನ ಸರಿಯಲ್ಲ. ವಿಸಿಎಫ್ಗೆ ತೆರಿಗೆ ವಿಧಿಸುವ ಅಗತ್ಯವಿಲ್ಲ ಎಂದಿದೆ ಕೋರ್ಟ್.
VCF (ಮೌಲ್ಯಮಾಪಕರ) ಪರವಾಗಿ ಹಿರಿಯ ವಕೀಲ ಜಿ.ಶಿವದಾಸ್ ನೇತೃತ್ವದಲ್ಲಿ ವಕೀಲ ಜಿ.ಎಲ್ ಮೋಹನ್ ಮೈಯಾ ವಾದ ಮಂಡಿಸಿದ್ದರು. ಸರ್ಕಾರಿ ವಕೀಲ ಜೀವನ್ ಜೆ ನೀರಲಗಿ ಬೆಂಗಳೂರಿನ ಕೇಂದ್ರ ತೆರಿಗೆ ಆಯುಕ್ತರ ಪರವಾಗಿ ವಾದ ಮಂಡಿಸಿದರು.
#karnataka #bengaluru #highcourt #VCF #Servicetax