ಉತ್ತರ ಭಾರತ ಸೇರಿದ ಹಾಗೆ ದೇಶದ ಹಲವೆಡೆ ವಿಚಿತ್ರ ಕಾಯಿಲೆಗಳ ಕುರಿತು ವರದಿಗಳು ಬರುತ್ತಿವೆ. ಆದರೆ ಈ ಕುರಿತು ಭಯ ಪಡುವ ಅಗತ್ಯವಿಲ್ಲ ಎಚ್ಚರಿಕೆಯಿಂದಿರಬೇಕು ಎಂದು ಅರೋಗ್ಯ ತಜ್ಞರು ಅಭಿಪ್ರಾಯ ಪಡುತ್ತಿದ್ದಾರೆ. ಇದೀಗ ಒಡಿಶಾದಲ್ಲಿ ‘ಸ್ಕ್ರಬ್ ಟೈಫಸ್’ ಎಂಬ ಸೋಂಕು ಜ್ವರ ಕಾಣಿಸಿಕೊಂಡಿದ್ದು, ಈವರೆಗೆ ಆರು ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ
ಹೌದು, ಒಡಿಶಾದ ಬರ್ಗಢ್ ಜಿಲ್ಲೆಯಲ್ಲಿ ಐದು ಮಂದಿ ಮತ್ತು ಸುಂದರ್‌ಗಢ್ ಜಿಲ್ಲೆಯಲ್ಲಿ ಒಬ್ಬರು ಸಾವಿಗೀಡಾಗಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಇನ್ನು ಒಡಿಶಾದಲ್ಲಿ ಕೇವಲ ಸ್ಕ್ರಬ್ ಟೈಪಸ್ ಮಾತ್ರವಲ್ಲದೆ, ಲೆಪ್ಟೋಸ್ಪಿರೊಸಿಸ್ ಎಂಬ ಕಾಯಿಲೆ ಕೂಡ ಕಾಣಿಸಿಕೊಂಡಿದ್ದು ಒಡಿಶಾದ ಜನರು ಆತಂಕಕ್ಕೆ ಒಳಗಾಗಿದ್ದಾರೆ,
ಕಳೆದ ಜನವರಿಯಿಂದ ಇಲ್ಲಿಯವರೆಗೆ ಸುಮಾರು 135ಕ್ಕೂ ಹೆಚ್ಚು ಸ್ಕ್ರಬ್ ಟೈಫಸ್ ಸೋಂಕು ಕಾಣಿಸಿಕೊಂಡಿದ್ದು, ಈ ಸೋಂಕಿನಿಂದ ಬಹುತೇಕರು ಗುಣಮುಖರಾಗಿದ್ದಾರೆಂದು ಒಡಿಶಾದ ಸುಂದರ್‌ಘರ್ ಜಿಲ್ಲೆಯ ಸಾರ್ವಜನಿಕ ಆರೋಗ್ಯ ಇಲಾಖೆಯ ಅಧಿಕಾರಿ ಚರಣ್ ನಾಯಕ್ ತಿಳಿಸಿದ್ದಾರೆ.
ಇನ್ನು ಒಡಿಶಾ ಸರ್ಕಾರ ಕೂಡ ಈ ಬಗ್ಗೆ ಎಚ್ಚೆತ್ತುಕೊಂಡಿದ್ದು ಈ ಎರಡು ಸೋಂಕುಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮುಂದಾಗುವಂತೆ ಸುಂದರಘರ್ ಜಿಲ್ಲೆಯ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದೆ.