ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 135 ಸ್ಥಾನಗಳ ಮೂಲಕ ಭರ್ಜರಿ ಜಯಗಳಿಸಿದ್ದು, ಸರ್ಕಾರ ರಚನೆಯ ಆರು ತಿಂಗಳು ಪೂರೈಸುವ ಮೊದಲೇ ಮುಖ್ಯಮಂತ್ರಿ ಬದಲಾವಣೆ ಕುರಿತು ಸಾಕಷ್ಟು ಚರ್ಚೆಯಾಗುತ್ತಿದ್ದು, ಸತೀಶ್ ಜಾರಕಿಹೊಳಿ ಮುಖ್ಯಮಂತ್ರಿಯಾಗುತ್ತಾರೆ ಎಂಬ ವಿಷಯಕ್ಕೆ ಕಂದಾಯ ಸಚಿವ ಕೃಷ್ಣಭೈರೇಗೌಡ ಪ್ರತಿಕ್ರಿಸಿದ್ದಾರೆ.
ಈ ಕುರಿತು ಬಳ್ಳಾರಿಯಲ್ಲಿ ಮಾತನಾಡಿರುವ ಅವರು, ಎಲ್ಲವನ್ನು ಕೂಡ ಪಕ್ಷ ನಿರ್ಧಾರ ಮಾಡುತ್ತೆ. ಈಗಾಗಲೇ ಮುಖ್ಯಮಂತ್ರಿಗಳು ಇದ್ದಾರೆ, ಪಕ್ಷದ ಶಾಸಕರು ಎಲ್ಲರೂ ಸೇರಿ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಿದ್ದೇವೆ. ಅವರ ನೇತೃತ್ವದಲ್ಲೇ ನಾವು ಜನರಿಗೆ ಒಳ್ಳೆಯ ಆಡಳಿತ ಕೊಡಬೇಕು ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಆಯ್ಕೆ ವಿಚಾರವಾಗಿ ನಾಲ್ಕು ಗೊಡೆ ಮಧ್ಯೆ ಪಕ್ಷ ಚರ್ಚೆ ಮಾಡ್ತದೆ. ಜನಪರವಾದ ಕೆಲಸವನ್ನು ನಾವು ಮಾಡ್ತೀದ್ದೇವೆ. ಜನರಿಗೂ ನಮಗೂ ಕೂಡ ಒಳ್ಳೆಯದಾಗಿರುತ್ತೆ. ಅದು ಬಿಟ್ಟು ಅಧಿಕಾರದ ಬಗ್ಗೆ ಚರ್ಚೆಯಾದ್ರೆ ಒಳ್ಳೆಯದಲ್ಲ, ಇದರಿಂದ ಜನರಿಗೂ ಲಾಭವಿಲ್ಲ ಎಂದು ಹೇಳಿದ್ದಾರೆ.
ನಾವು ಜನರಿಗೆ ಆಡಳಿತ ನೀಡಲು ಒತ್ತು ಕೊಡಬೇಕಿದೆ. ಜನರು ಕೂಡ ಅದನ್ನೇ ನಿರೀಕ್ಷೆ ಮಾಡ್ತೀದ್ದಾರೆ. ಜನರು ಅವರ ಆಸೆಯ ಅನುಗುಣವಾಗಿ ಹೇಳಿಕೆ ಕೊಡ್ತಾರೆ. ಅವರ ಹೇಳಿಕೆ ಅವರ ಸ್ವಾತಂತ್ರ ಎಂದು ಸಚಿವ ಕೃಷ್ಣೆಬೈರೇಗೌಡ ಹೇಳಿದ್ದಾರೆ.

ಸತೀಶ್ ಜಾರಕಿಹೊಳಿ ಸಿಎಂ ಆಗುವುದು ನೂರಕ್ಕೆ ನೂರರಷ್ಟು ಸತ್ಯ ಎಂದು ಶಾಸಕ ವಿಶ್ವಾಸ್ ವೈದ್ಯ ಹೇಳಿದ್ದರು. ಈ ಕುರಿತು ಸಚಿವರು ಮಾತನಾಡಿದ್ದಾರೆ.