ರೇಣುಕಾ ಸ್ವಾಮಿ ಕೊಲೆ ಕೇಸಲ್ಲಿ (Renukaswamy murder case) ಜೈಲಿನಲ್ಲಿರುವ ನಟ ದರ್ಶನ್ (Actor darshan) ಕೂದಲು ತೆಗೆಸಿದ ಹಿನ್ನಲೆ, ಮಗ ವಿನಿಶ್ (Vineesh) ಕೂಡ ತಲೆ ಕೂದಲು ತೆಗೆಸಿದ್ದಾರೆ. ದರ್ಶನ್ ಕ್ರಾಂತಿ ಸಿನಿಮಾದ ನಂತರ ವಿಗ್ ಧರಿಸಲು ಆರಂಭಿಸಿದ್ದರು. ಆದ್ರೆ ಜೈಲಲ್ಲಿ ವಿಗ್ ಮೈಂಟೇನ್ ಮಾಡಲಾಗದೆ ಕೂದಲು ತೆಗೆಸಿದ್ರು.

ಇದನ್ನು ಕಂಡ ಮಗ ವಿನೀಶ್ ತಾನೂ ಕೂಡ ತಲೆ ಕೂದಲು ತೆಗೆಸಿ ದರ್ಶನ್ ಮುಂದೆ ಹೋಗಿದ್ದಾರೆ. ಈ ವೇಳೆ ದರ್ಶನ್ ಮಗ ವಿನೀಶ್ ಮುಡಿ ಕೊಟ್ಟಿರೋದನ್ನ ನೋಡಿ, ಯಾಕೊ ಹೀಗೆ ಮಾಡಿದೆ ಎಂದು ಕೇಳಿದ್ದು, ವಿನಿಶ್ ನಿನ್ನ ಕೂದಲು ಇಲ್ಲದೆ ನೋಡೋಕಾಗ್ತಿಲ್ಲ ಅದಕ್ಕೆ ನಾನು ಮುಡಿ ಕೊಟ್ಟೆ ಎಂದು ಉತ್ತರಿಸಿದ್ದಾರೆ.

ತಮ್ಮ ಮಗನ ಮಾತು ಕೇಳಿದ ದರ್ಶನ್ ಮಗನನ್ನು ತಬ್ಬಿ ಕಣ್ಣೀರಾಕಿದ್ದಾರೆ ಎನ್ನಲಾಗ್ತಿದೆ. ಈ ಮಧ್ಯೆ ದರ್ಶನ್ರನ್ನ ಪರಪ್ಪನ ಅಗ್ರಹಾರದಿಂದ (Parappana agrahara) ತುಮಕೂರಿನ ಜೈಲಿಗೆ (tumkur jail) | ಶಿಫ್ಟ್ ಮಾಡಲು ಸಿದ್ಧತೆ ನಡೆಸಲಾಗಿದ್ದು, ಸದ್ಯದಲ್ಲೇ ಶಿಫ್ಟ್ ಮಾಡುವ ಸಾಧ್ಯತೆಯಿದೆ ಎನ್ನಲಾಗ್ತಿದೆ.