ತೀವ್ರ ವಿವಾದಕ್ಕೀಡಾಗಿರುವ ಗುಂಬಜ್ ಮಾದರಿ ಶೆಲ್ಟರ್ ಮಾದರಿ ಬಸ್ ನಿಲ್ದಾಣ ವಿಚಾರವಾಗಿ ಭುಗಿಲೆದ್ದಿರುವ ವಿಚಾರವಾಗಿ ಪ್ರಿಕ್ರಿಯಿಸಿರುವ ಶಾಸಕ ರಾಮ್‌ದಾಸ್ ದಯಮಾಡಿ ನನ್ನ ಬಿಟ್ಟು ಬಿಡಿ ಎಂದು ಮಾತನಾಡುವ ವೇಳೆ ಗದ್ಗರಿತರಾಗಿದ್ದಾರೆ.
ನಾನು ಈ ವಿಚಾರದಲ್ಲಿ ತಪ್ಪು ಮಾಡಿದ್ದರೆ ಶಿಕ್ಷೆ ಕೊಡಲಿ ನಷ್ಟದ ಹಣವನ್ನ ನನ್ನ ಸಂಬಳದಿಂದ ಭರಿಸುತ್ತೇನೆ ನನ್ನನ್ನು ಬಿಜೆಪಿ ಪಕ್ಷದಿಂದ ಬಿಡಿಸಲು ಕಿರುಕುಳ ನೀಡಲಾಗುತ್ತಿದೆ ಎಂದು ಪರೋಕ್ಷವಾಗಿ ಸಂಸದ ಪ್ರತಾಪ್ ಸಿಂಹ ವಿರುದ್ದ ಆರೋಪಿಸಿದ್ದಾರೆ.

ಈ 30 ವರ್ಷದಲ್ಲಿ ಬಿಜೆಪಿಯ 11 ಜನ ಶಾಸಕರು ಇದ್ದರು ಕಿರುಕುಳ ನೀಡಿದ್ರಿಂದ 10 ಜನ ಬೇರೆ ಪಕ್ಷಕ್ಕೆ ಹೊರಟು ಹೋದ್ರು ಉಳಿದಿರುವವನು ನಾನೊಬ್ಬನೇ, ದಯಮಾಡಿ ನನ್ನನ್ನು ಬಿಟ್ಟು ಬಿಡಿ ಏನು ಪ್ರಶ್ನೆ ಕೇಳಬೇಡಿ ಎಂದು ಮಾಧ್ಯಮದವರಿಗೆ ಕೈ ಮುಗಿದಿದ್ದಾರೆ.
ಅಭಿವೃದ್ಧಿ ಬಗ್ಗೆ ಚಿಂತನೆ ಮಾಡ್ತೇನೆ, ಪಾರ್ಕ್-ಸ್ಮಶಾನ ಅಭಿವೃದ್ಧಿ ನನ್ನ ಕನಸು ಸಾಯುವ ಮುನ್ನ ಸಾಧನೆ ಮಾಡಬೇಕು ಅನ್ನೋದೇ ನನ್ನ ಗುರಿ ಈ ಬಗ್ಗೆ ಸಿಎಂ ಹಾಗೂ ರಾಜ್ಯಾಧ್ಯಕ್ಷರನ್ನು ಭೇಟಿ ಮಾಡಿದ್ದೇನೆ ಸಮಿತಿ ರಚಿಸಲು ಮನವಿ ಮಾಡಿದ್ದೇನೆ, ಸಮಿತಿ ವರದಿಗೆ ನಾನು ಬದ್ಧ ಎಂದು ತಿಳಿಸಿದ್ದಾರೆ.






