ರಷ್ಯಾ ಹಾಗೂ ಉಕ್ರೇನ್ ನಡುವಿನ ಬಿಕ್ಕಟ್ಟಿನ ಪರಿಣಾಮ ಉಭಯ ದೇಶಗಳ ನಡುವಿನ ಸಂಬಂಧ ಸಂಪೂರ್ಣವಾಗಿ ಹಳಸಿ ಹೋಗಿದ್ದು ಉಭಯ ದೇಶಗಳ ಪ್ರಜೆಗಳು ಒಬ್ಬರನ್ನೊಬ್ಬರು ವೈರಿಗಳಂತೆ ಕಾಣುತ್ತಿದ್ದಾರೆ.
ಆದರೆ, ಇಲ್ಲಿ ಇಬ್ಬರು ಪ್ರೇಮಿಗಳು ಪ್ರೀತಿಯ ಮುಂದೆ ಯಾವ ವೈರತ್ವ ಇಲ್ಲ ಎಂದು ನಿರೂಪಿಸಿದ್ದಾರೆ. ರಷ್ಯಾದ ಯುವಕ ಹಾಗೂ ಉಕ್ರೇನ್ ಮೂಲದ ಯುವತಿ ಭಾರತದ ಧರ್ಮಶಾಲಾದಲ್ಲಿ ಹಿಂದೂ ಸಂಪ್ರದಾಯದಂತೆ ವಿವಾಹವಾಗಿ ಪ್ರೀತಿಯ ಮುಂದೆ ಎಲ್ಲವೂ ಗೌನ ಎಂಬುದನ್ನು ಸಾರಿದ್ದಾರೆ.
ಇಸ್ರೇಲ್ನಲ್ಲಿ ಕೆಲಸ ಮಾಡುತ್ತಿರುವ ರಷ್ಯಾ ಮೂಲದ ಸರ್ಗಿ ನೊವೊಕಿವಾ ಹಾಗೂ ಉಕ್ರೇನ್ ಮೂಲದ ಎಲಾನ್ ಬ್ರಾಮೊಕಾ ಇಬ್ಬರು ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದು ೂಭಯ ದೇಶಗಳ ನಡುವಿನ ಬಿಕ್ಟಟ್ಟು ಹಾಗೂ ಯುದ್ದದ ಪರಿಣಾಮ ತಮ್ಮ ತಾಯ್ನಾಡಿಗೆ ಮರಳಲು ಸಾಧ್ಯವಾಗಿರಲಿಲ್ಲ.
ಕಳೆದ ಮಂಗಳವಾರ ಪ್ರೇಮಿಗಳಿಬ್ಬರು ಹಿಮಾಚಲ ಪ್ರದೇಶದಲ್ಲಿರುವ ಧರ್ಮಶಾಲಾದ ಖರೋಟಾದಲ್ಲಿರುವ ದಿವ್ಯ ಆಶ್ರಮದಲ್ಲಿ ಹಿಂದೂ ಸಂಪ್ರದಾಯದಂತೆ ವಿವಾಹವಾಗಿದ್ದಾರೆ. ಮದುವೆಯಲ್ಲಿ ಹಾಜರಿದ್ದ ಸ್ಥಳೀಯರು ನವ ಜೋಡಿಗೆ ಶುಭ ಹಾರೈಸಿದ್ದಾರೆ.