ಅಮೆರಿಕದ ಡಾಲರ್ ಎದುರು ಸತತವಾಗಿ ಕುಸಿಯುತ್ತಿರುವ ರೂಪಾಯಿ ಮೌಲ್ಯ ಗುರುವಾರ ಮಾರುಕಟ್ಟೆಯಲ್ಲಿ 90 ಪೈಸೆಯಷ್ಟು ಭಾರೀ ಕುಸಿತ ಕಂಡಿದೆ.
ಶುಕ್ರವಾರ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್ ಎದುರು 90 ಪೈಸೆಯಷ್ಟು ಕುಸಿತ ಕಂಡಿದ್ದರಿಂದ ಭಾರತದ ರೂಪಾಯಿ ಮೌಲ್ಯ 80.68 ಪೈಸೆಯಷ್ಟು ಇಳಿದಿದೆ.

ಯುಎಸ್ ಫೆಡರೇಷನ್ ರಿಸರ್ವ್ ತಮ್ಮ ಬಡ್ಡಿ ದರದಲ್ಲಿ ಏರಿಕೆ ಮಾಡಿದ್ದರಿಂದ ರೂಪಾಯಿ ಮೌಲ್ಯ ದಿಢೀರ್ ಅಂತ ಪ್ರಪಾತಕ್ಕೆ ಕುಸಿದಿದೆ. ಫೆಡರೇಷನ್ ರಿಸರ್ವ್ ದರ ಏರಿಕೆಯು ಉಕ್ರೇನ್ ಮೇಲೆ ರಷ್ಯಾ ಯುದ್ಧ ಮುಂದುವರಿಸಿರುವ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿಣಾಮ ಬೀರಲಿದೆ.
ಅಮೆರಿಕದ ಡಾಲರ್ ಷೇರು ಮಾರುಕಟ್ಟೆಯಲ್ಲಿ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಮೆರೆದಿದ್ದು, ಒಂದು ಹಂತದಲ್ಲಿ ರೂಪಾಯಿ ಮೌಲ್ಯ 80.95 ಪೈಸೆಯಷ್ಟು ಇಳಿದಿತ್ತು. ನಂತರ ಅಲ್ಪ ಚೇತರಿಕೆ ಕಂಡು 80.27ಕ್ಕೆ ಇಳಿಯಿತು.