ಬಾಂಗ್ಲಾದೇಶ ವಿರುದ್ದ ನಡೆಯುತ್ತಿರುವ ಎರಡನೇ ಏಕದಿನ ಪಂದ್ಯದಲ್ಲಿ ಫೀಲ್ಡಿಂಗ್ ವೇಳೆ ನಾಯಕ ರೋಹಿತ್ ಶರ್ಮಾ ಎಡಗೈಗೆ ಗಾಯವಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶೇರ್-ಎ-ಬಾಂಗ್ಲಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಬಾಂಗ್ಲಾದೇಶ ಮೊಹಮ್ಮದ್ ಸಿರಾಜ್ ಎಸೆದ ಎರಡನೇ ಓವರ್ನಲ್ಲಿ ಬಾಂಗ್ಲಾದ ಬ್ಯಾಟ್ಸ್ಮ್ಯಾನ್ ಅನಾಮುಲ್ಲಾ ಹಕ್ ಅವರ ಬ್ಯಾಟಿಗೆ ತಗುಲಿ ಸ್ಲಿಪ್ನಲ್ಲಿದ್ದ ರೋಹಿತ್ ಶರ್ಮಾರತ್ತ ರಭಸದಿಂದ ಸಾಗಿದ ಚೆಂಡನ್ನು ಹಿಡಿಯುವ ವೇಳೆ ರೋಹಿತ್ ಕೈಗೆ ಗಾಯವಾಗಿದೆ ಎಂದು ತಿಳಿದು ಬಂದಿದೆ.
ಬಾಲನ್ನು ಹಿಡಿಯುವ ವೇಳೆ ಎಡಗೈಗೆ ಗಾಯ ಮಾಡಿಕೊಂಡ ರೋಹಿತ್ ಅನುಪಸ್ಥಿತಿಯಲ್ಲಿ ಕೆ.ಎಲ್.ರಾಹುಲ್ ತಂಡವನ್ನ ಮುನ್ನಡೆಸುತ್ತಿದ್ದಾರೆ.