ಭಾನುವಾರ ಸನ್ರೈರ್ಸ್ ತಂಡದ ವಿರುದ್ದ ನಡೆಯಲಿರುವ ಮಹತ್ವದ ಪಂದ್ಯದಲ್ಲಿ ಆರ್ಸಿಬಿ ತಂಡದ ಆಟಗಾರರು ತಮ್ಮ ಗೋ ಗ್ರೀನ್ ಅಭಿಯಾನವನ್ನು ಮುಂದುವರೆಸಲಿದ್ದಾರೆ.
ನಾಳೆ ನಡೆಯುವ ಪಂದ್ಯದಲ್ಲಿ ಬೆಂಗಳೂರು ತಂಡದ ಆಟಗಾರರು ಹಸಿರು ಜೆರ್ಸಿಯನ್ನ ಧರಿಸಿ ಕಣಕ್ಕಿಳಿಯಲಿದ್ದಾರೆ. ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿ ಆವೃತ್ತಿಯಲ್ಲು ಹಸಿರು ಜೆರ್ಸಿ ಧರಿಸಿ ಆಡಲಿದೆ.
ನಾಳೆ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯ ಎರಡು ತಂಡಕ್ಕು ಮಹತ್ವ ಪಡೆದಿದೆ ಗೆದ್ದ ತಂಡಕ್ಕೆ ಪ್ಲೇ ಆಪ್ ಹಾದಿ ಸುಗಮವಾಗಲಿದೆ ಮತ್ತು ಸೋತ ತಂಡಕ್ಕೆ ದುರ್ಗಮವಾಗಲಿದೆ.